Tata - Hyundai: ಸಮರಕ್ಕೆ ಸಿದ್ದ.. ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್ ಎಲೆಕ್ಟ್ರಿಕ್ ಕಾರು ಬರಲಿವೆ?
ದೇಶೀಯ ಮಾರುಕಟ್ಟೆಯಲ್ಲಿ 2021ರ ಕೊನೆಯಲ್ಲಿ ಟಾಟಾ ಮೋಟಾರ್ಸ್ (Tata Motors) ಬಿಡುಗಡೆಗೊಳಿಸಿದ ಮೈಕ್ರೋ ಎಸ್‌ಯುವಿ ಪಂಚ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದು, ಯಶಸ್ವಿಯಾಗಿ ಮಾರಾಟವಾಗುತ್ತಿದೆ. ಅದಕ್ಕೆ ಪೈಪೋಟಿ ನೀಡಲು ಇತ್ತೀಚೆಗೆ ಹ್ಯುಂಡೈ (Hyundai) ಎಕ್ಸ್‌ಟರ್ ಕಾರನ್ನು ಲಾಂಚ್ ಮಾಡಿದೆ.
ಈಗಾಗಲೇ, ದೇಶದಲ್ಲಿ ಶುದ್ಧ ಪರಿಸರದ ನಿರ್ಮಾಣಕ್ಕೆ ಶೂನ್ಯ ಹೊರಸೂಸುವಿಕೆ ವಾಹನ ಬಳಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತೇಜಿಸುತ್ತಿವೆ. ಅದರ ಭಾಗವಾಗಿ ವಿವಿಧ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಅದರಲ್ಲೂ ಟಾಟಾ ಪಂಚ್ ಹಾಗೂ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಲಾಂಚ್ ಮಾಡಲು ಸಿದ್ದತೆ ನಡೆಸುತ್ತಿದ್ದು, ಮುಂಬರುವ ವರ್ಷಗಳಲ್ಲಿಯೂ ಇವೆರೆಡು ಕಾರುಗಳ ನಡುವೆ ಸಮರ ಮುಂದುವರಿಯಲಿದೆ.

ಮೊದಲಿಗೆ, ಟಾಟಾ ಕಂಪನಿ ಈ ವರ್ಷದ ಅಂತ್ಯದೊಳಗೆ ಪರಿಚಯಿಸುವ ಸಾಧ್ಯತೆಯಿರುವ ಪಂಚ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾತನಾಡೋಣ. ಇದು, ALFA (ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್ ಆಧರಿಸಿರಲಿದ್ದು, ಜಿಪ್ಟ್ರಾನ್ ತಂತ್ರಜ್ಞಾನವನ್ನು ಪಡೆದಿರಲಿದೆ. ಸದ್ಯ, ಖರೀದಿಗೆ ಲಭ್ಯವಿರುವ ಕಂಪನಿಯ ಅಗ್ಗದ ಬೆಲೆಯ ಟಿಯಾಗೊ ಇವಿಗಿಂತ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ.
ಈ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್ ಹಾಗೂ ಹೊರಭಾಗದ ವಿನ್ಯಾಸ ಬಹುತೇಕ ICE ಚಾಲಿತ ಪಂಚ್ ಮಾದರಿಗೆ ಹೋಲಿಕೆಯಾಗಲಿದ್ದು, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹೊಸದಾದ ಟು - ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿರುವ ಸಾಧ್ಯತೆಯಿದೆ. ಈಗಾಗಲೇ ಖರೀದಿಗೆ ದೊರೆಯುವ ಪಂಚ್ ಎಸ್‌ಯುವಿ, ಗ್ಲೋಬಲ್ NCAPಯಿಂದ ಸುರಕ್ಷತೆಯ ದೃಷ್ಟಿಯಿಂದ ಉತ್ತಮ ರೇಟಿಂಗ್ ಪಡೆಡಿದೆ.
ಅದೇ ರೀತಿಯಲ್ಲಿ ಎಲೆಕ್ಟ್ರಿಕ್ ಕಾರು ಕೂಡ ಒಳ್ಳೆಯ ಸೇಫ್ಟಿ ಫೀಚರ್ಸ್ ಹೊಂದುವ ನೀರಿಕ್ಷೆಯಿದೆ. ಭಾರತದ ಮಾರುಕಟ್ಟೆಯಲ್ಲಿ ಪಂಚ್ ಎಲೆಕ್ಟ್ರಿಕ್ ಕಾರು, ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಮುಂಬರಲಿರುವ ಈ ಕಾರು, ಟಿಯಾಗೊ ಇವಿಗಿಂತ ಪವರ್ ಫುಲ್ ಬ್ಯಾಟರಿ ಹೊಂದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 350 - 400 km ರೇಂಜ್ ನೀಡುವ ಸಾಧ್ಯತೆಯಿದೆ.
ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿಗೆ ಫೈಟ್ ನೀಡಲು ಮುಂಬರುವ ವರ್ಷಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾದ ಹ್ಯುಂಡೈ ಎಕ್ಸ್‌ಟರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ತಿಳಿಯೋಣ. ಇದು, E - GMP ಪ್ಲಾಟ್‌ಫಾರ್ಮ್ ಆಧರಿಸಿರುವ ನೀರಿಕ್ಷೆಯಿದೆ. ರೂ.10 ಲಕ್ಷ ಬೆಲೆ ಅಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ಮುಂಬರಲಿರುವ ಹ್ಯುಂಡೈ ಎಕ್ಸ್‌ಟರ್ ಎಲೆಕ್ಟ್ರಿಕ್ ಕೊಂಚ ಶಕ್ತಿಯುತವಾಗಿರಲಿದ್ದು, 25 kWh - 30 kWh ಬ್ಯಾಟರಿ ಪ್ಯಾಕ್ ಪಡೆದಿರುವ ನೀರಿಕ್ಷೆ ಇದ್ದು, ಸಂಪೂರ್ಣ ಚಾರ್ಜಿನಲ್ಲಿ 300 - 350 km ರೇಂಜ್ ನೀಡಬಹುದು. ಎಕ್ಸ್‌ಟರ್ ಇವಿ ಎಂದು ಹೇಳಲಾಗಿರುವ ಕಾರು, ರಸ್ತೆಯಲ್ಲಿ ಪರೀಕ್ಷಾರ್ಥ ನಡೆಸುವಾಗ ಕಂಡುಬಂದಿತ್ತು. ಆ ಫೋಟೋಗಳು ಇಂಟರ್ನೆಟ್ ನಲ್ಲಿ ಇತ್ತೀಚೆಗೆ ಸೋರಿಕೆಯಾಗಿದ್ದವು.
ಎಲೆಕ್ಟ್ರಿಕ್ ರೂಪದಲ್ಲಿ ಲಾಂಚ್ ಆಗಲಿರುವ ಹುಂಡೈ ಎಕ್ಸ್‌ಟರ್, ಸದ್ಯ, ಖರೀದಿಗೆ ದೊರೆಯುವ ಕಾರಿನಂತೆ 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್‌ಬ್ಯಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸೇಫ್ಟಿ ಫೀಚರ್ಸ್ ಪಡೆದಿರುವ ಸಾಧ್ಯತೆಯಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್, ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಹೊಂದಿದ್ದು, ಪೆಟ್ರೋಲ್ ಎಂಜಿನ್ ರೂಪಾಂತರಗಳಿಗೆ ಅನುಗುಣವಾಗಿ 20.09 kmpl ವರೆಗೆ ಮೈಲೇಜ್ ನೀಡುತ್ತದೆ. ಸಿಎನ್‌ಜಿ ಎಂಜಿನ್ 26.9 km/kg (ARAI) ಇಂಧನ ದಕ್ಷತೆಯನ್ನು ಹೊಂದಿದೆ.
ಹ್ಯುಂಡೈ ಎಕ್ಸ್‌ಟರ್ ರೂ.6 ಲಕ್ಷದಿಂದ ರೂ.10.10 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.2- ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 83 PS ಪವರ್, 114 Nm ಪೀಕ್ ಟಾರ್ಕ್, ಸಿಎನ್‌ಜಿ ಕಿಟ್ ಹೊಂದಿರುವ ಕಾರು, 69 PS ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.


Click it and Unblock the Notifications