ಬೈಕ್‌ನಂತೆ ಮೈಲೇಜ್ ನೀಡುತ್ತವೆ ಮಾರುತಿ, ಟಾಟಾ, ಹ್ಯುಂಡೈನ ಈ ಕಾರುಗಳು: ಬೆಲೆ 10 ಲಕ್ಷಕ್ಕಿಂತ ಕಡಿಮೆ!
ಪ್ರತಿಯೊಬ್ಬರು ಜೀವನದಲ್ಲಿ ಹೊಸ ಕಾರು ಖರೀಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ, ಕೈಗೆಟುಕುವ ಬೆಲೆಯಲ್ಲಿ ಯಾವ ಕಾರು ಉತ್ತಮ ಮೈಲೇಜ್ ನೀಡುತ್ತದೆ ಎಂಬ ಹಲವು ಗೊಂದಲವಿರುತ್ತದೆ. ಇಲ್ಲಿ ವೈಶಿಷ್ಟ್ಯ, ವಿನ್ಯಾಸ ಸೇರಿದಂತೆ ಎಲ್ಲದರಲ್ಲಿಯೂ ಅತ್ಯುತ್ತಮವಾಗಿರುವ ಮಾರುತಿ ಸುಜುಕಿ ಫ್ರಾಂಕ್ಸ್, ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಕಾರುಗಳ ಬಗ್ಗೆ ವಿವರಿಸಿದ್ದೇವೆ.
ಮೊದಲಿಗೆ ಟಾಟಾ ಪಂಚ್ (Tata Punch) ಕಾಂಪ್ಯಾಕ್ಟ್ ಎಸ್‌ಯುವಿ ಬಗ್ಗೆ ತಿಳಿಯೋಣ. ಈ ಸಿಎನ್‌ಜಿ ಕಾರು, ರೂ.7.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದರ 1.2-ಲೀಟರ್ ಎಂಜಿನ್, 73.5 PS ಗರಿಷ್ಠ ಪವರ್, 103 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, 26.99 kmpl ಮೈಲೇಜ್ ನೀಡುತ್ತದೆ.

ಟಾಟಾ ಪಂಚ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ (Maruti FRONX) ಸಿಎನ್‌ಜಿ ಎಸ್‌ಯುವಿ, ರೂ.8.41 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಈ ಕಾರು, 1.2-ಲೀಟರ್ ಎಂಜಿನ್ ಹೊಂದಿದ್ದು, 77.5 PS ಗರಿಷ್ಠ ಪವರ್ ಹಾಗೂ 98.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಮಾನ್ಯವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯಲಿದ್ದು, 28.51 km/kg ಮೈಲೇಜ್ ಕೊಡುತ್ತದೆ.

5 ಆಸನ ವ್ಯವಸ್ಥೆಯಲ್ಲಿ ದೊರೆಯುವ ಮಾರುತಿ ಫ್ರಾಂಕ್ಸ್ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಹೆಡ್ಸ್ - ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಹ್ಯುಂಡೈ ಎಕ್ಸ್‌ಟರ್ (Hyundai Exter) ಸಿಎನ್‌ಜಿ ಕಾರು, ರೂ.9.06 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದರ ಪವರ್‌ಟ್ರೇನ್ 1.2 - ಲೀಟರ್ ಎಂಜಿನ್ ಪಡೆದಿದ್ದು, 83 PS ಗರಿಷ್ಠ ಪವರ್ ಹಾಗೂ 114 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯಲಿದ್ದು, 27.1 km/kg ಮೈಲೇಜ್ ನೀಡುತ್ತದೆ.

ಹ್ಯುಂಡೈ ಎಕ್ಸ್‌ಟರ್ ಯುವ ಗ್ರಾಹಕರನ್ನು ಸೆಳೆಯುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್ ಅನ್ನು ಹೊಂದಿದೆ. 6 ಏರ್‌ಬ್ಯಾಗ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಕೂಡ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








