Upcoming 7-Seater Cars: ಕಡಿಮೆ ಬೆಲೆ, ಹೆಚ್ಚು ಸೌಕರ್ಯಗಳೊಂದಿಗೆ ಬಿಡುಗಡೆಯಾಗಲಿರುವ 7-ಸೀಟರ್ ಕಾರುಗಳಿವು
ಭಾರತೀಯ ಮಾರುಕಟ್ಟೆಯಲ್ಲಿ ದಿನದಂದ ದಿನಕ್ಕೆ 7-ಸೀಟರ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು 7-ಸೀಟರ್ ಕಾರುಗಳನ್ನು ಈಗಾಗಲೇ ಮಾರಾಟಗೊಳಿಸುತ್ತಿದೆ. ಇದರಿಂದ ಭಾರತದಲ್ಲಿ 7-ಸೀಟರ್ ಮಾದರಿಗಳ ವಿಭಾಗದಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿವೆ .ಭಾರತದಲ್ಲಿ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಹೊಸ 7-ಸೀಟರ್ ಬಿಡುಗಡೆಯಾಗಲಿವೆ.
ಮಾರುತಿ ಸುಜುಕಿ C-MPV: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಟೊಯೊಟಾ ಇನೋವಾ ಹೈಕ್ರಾಸ್ ಕಾರ್ ಆಧಾರಿತ ಹೊಸ ಸಿ-ಸೆಗ್ಮೆಂಟ್ ಎಂಪಿವಿಯನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ವರದಿಗಳಾಗಿದೆ. ಈ ಹೊಸ ಎಂಪಿವಿಯನ್ನು XL6 ಕಾರಿನ ಮೇಲೆ ಇರಿಸಲಾಗುತ್ತದೆ. ಹೊಸ ಮಾರುತಿ ಎಂಪಿವಿಯನ್ನು ಈ ವರ್ಷದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಈ ಹೊಸ ಎಂಪಿವಿಯ ವಿನ್ಯಾಸವು ಗ್ರ್ಯಾಂಡ್ ವಿಟಾರಾದಿಂದ ಪ್ರೇರಿತವಾಗಿದೆ.ಇದು ಇನೋವಾ ಹೈಕ್ರಾಸ್‌ನಂತೆಯೇ ಅದೇ TNGA-C ಪ್ಲಾಟ್‌ಫಾರ್ಮ್ ಅನ್ನು ಹೊಂದಿಕೊಂಡಿರುತ್ತದೆ. ಹೀಗಾಗಿ, ಇದು ADAS ಆಧಾರಿತ ಡ್ರೈವರ್ ಅಸಿಸ್ಟ್ ಮತ್ತು ಸುರಕ್ಷತಾ ಫೀಚರ್ಸ್ ಗಳೊಂದಿಗೆ ಸಜ್ಜುಗೊಂಡ ಮೊದಲ ಮಾರುತಿ ಸುಜುಕಿ ಆಗಬಹುದು. C-MPV ಹೈಕ್ರಾಸ್‌ನಂತೆಯೇ ಅದೇ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರುತ್ತದೆ.
ಹೊಸ ಟೊಯೊಟಾ ಎಂಪಿವಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು ಮಾರುತಿಯ ಎರ್ಟಿಗಾ ಆಧಾರಿತ ಹೊಸ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಜಪಾನಿನ ಆಟೋ ಮೇಜರ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರುಮಿಯಾನ್ ಎಂದು ಕರೆಯಲ್ಪಡುವ ಎರ್ಟಿಗಾದ ರಿಬ್ಯಾಡ್ಜ್ ಆವೃತ್ತಿಯನ್ನು ಮಾರಾಟ ಮಾಡುತ್ತದೆ. ಭಾರತಕ್ಕೆ ಏಳು-ಸೀಟುಗಳ ಎಂಪಿವಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ಟೊಯೊಟಾ ಕಂಪನಿಯು ನಡೆಸಬಹುದು.
ಹೊಸ ಟೊಯೊಟಾ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವುದನ್ನು ಮುಂದುವರಿಸುತ್ತದೆ ಈ ಹೊಸ ಎಂಪಿವಿಯಲ್ಲಿ 1.5 ಲೀಟರ್ ನಾಲ್ಕು-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ (ಪ್ಯಾಡಲ್ ಶಿಫ್ಟರ್‌ಗಳೊಂದಿಗೆ) ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಸಿಟ್ರನ್ C3 ಏರ್‌ಕ್ರಾಸ್: ಮುಂಬರುವ ತಿಂಗಳುಗಳಲ್ಲಿ ಸಿಟ್ರನ್ C3 ಏರ್‌ಕ್ರಾಸ್ ಕಾರು ಮಾರುಕಟ್ಟೆ ಬಿಡುಗಡೆಗೆ ಮುಂಚಿತವಾಗಿ ಈ ತಿಂಗಳ ಕೊನೆಯಲ್ಲಿ ಅನಾವರಣವಾಗಲಿದೆ. ಈ ಸಿಟ್ರನ್ ಕಾರು CMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಈ ಕಾರಿನಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಸಿಟ್ರನ್ C3 ಏರ್‌ಕ್ರಾಸ್ ಕಾರು ಐದು ಮತ್ತು ಏಳು ಸೀಟುಗಳ ಅವತಾರದಲ್ಲಿ ಲಭ್ಯವಿರುತ್ತದೆ.
ಟಾಟಾ ಸಫಾರಿ ಫೇಸ್‌ಲಿಫ್ಟ್: ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಫಾರಿ ಎಸ್‍ಯುವಿಯನ್ನು 2023ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ನವೀಕರಿಸಿದ ಹ್ಯಾರಿಯರ್ ಜೊತೆಗೆ ಇದನ್ನು ಪರಿಚಯಿಸಬಹುದು ಮತ್ತು ಒಳಭಾಗವು ಹೊಸ ಫೀಚರ್ಸ್ ಗಳನ್ನು ಪಡೆಯಬಹುದು. ಈ ಹೊಸ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications