ಬಿಡುಗಡೆಗೆ ರೆಡಿಯಾಗಿವೆ 20 ಕ್ಕೂ ಹೆಚ್ಚು ಕಾರುಗಳು: ಶೀಘ್ರದಲ್ಲೇ ವಿಶ್ವದ ನಂ.1 ಸ್ಥಾನಕ್ಕೆ ಭಾರತ

ಪ್ರಮುಖ ಕಾರು ಬ್ರಾಂಡ್‌ಗಳಿಂದ ಹಿಡಿದು ಐಷಾರಾಮಿ ಕಾರು ಬ್ರಾಂಡ್‌ಗಳ ಹಲವು ಹೊಸ ಕಾರುಗಳು ಬಿಡುಗಡೆಗೆ ರೆಡಿಯಾಗಿವೆ. ಏಕೆಂದರೆ ಮುಂಬರುವ ವರ್ಷಗಳಲ್ಲಿ ಭಾರತದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ದೊಡ್ಡ ಕ್ರಾಂತಿಯಾಗಲಿದೆ. ಹಾಗಾಗಿ ಪ್ರಮುಖ ವಾಹನ ತಯಾರಕರು 20 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ವಿವಿಧ ವಿಭಾಗಗಳಾದ್ಯಂತ ಕಂಪನಿಗಳು ತಮ್ಮ ವಾಹನಗಳನ್ನು ಎಲೆಕ್ಟ್ರಿಫೈ ಮಾಡಲು ಸಜ್ಜಾಗಿವೆ. ವಿಶಾಲವಾದ ಗ್ರಾಹಕರ ನೆಲೆಗೆ EV ಗಳನ್ನು ಹೆಚ್ಚಾಗಿ ಒದಗಿಸುವ ಗುರಿಯನ್ನು ಹೊಂದಿವೆ. BMW, Audi, Benz, Volvo, Porsche ನಂತಹ ಐಷಾರಾಮಿ ಬ್ರಾಂಡ್‌ಗಳಿಂದ ಹಿಡಿದು ಮಾರುತಿ, ಟಾಟಾ, ಹ್ಯುಂಡೈ, ಮಹೀಂದ್ರಾ, ಟೊಯೋಟಾ, ಕಿಯಾ, ಹೋಂಡಾದಂತಹ ಕಂಪನಿಗಳು ಈ ರೇಸ್‌ನಲ್ಲಿವೆ.

upcoming-cars-india-20-models-ready-for-launch

ಪ್ರಸ್ತುತ ಭಾರತದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಶೇ 80 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಪ್ರಬಲ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಆದರೆ ಟಾಟಾ ಇದೇ ಗತ್ತನ್ನು ಮುಂದುವರಿಸಲು ಇನ್ನಷ್ಟು ಹೊಸ ಮಾದರಿಗಳನ್ನು ತರಬೇಕಿದೆ. ಏಕೆಂದರೆ ಪ್ರತಿಸ್ಪರ್ಧಿಗಳು ಹೊಸ ಮಾದರಿಗಳೊಂದಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಟಾಟಾದವರು ಈ ಗಟ್ಟಿ ಪೈಪೋಟಿಯನ್ನು ಎದುರಿಸಲು ಶೀಘ್ರದಲ್ಲೇ ಟಾಟಾ ಪಂಚ್ EV ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2024 ರಲ್ಲಿ Curvv ಕಾನ್ಸೆಪ್ಟ್ ಎಲೆಕ್ಟ್ರಿಕ್ ಆವೃತ್ತಿ ಮತ್ತು ಪ್ರೊಡಕ್ಷನ್-ಸ್ಪೆಕ್ ಹ್ಯಾರಿಯರ್ EV ಪರಿಕಲ್ಪನೆಯ ಮಾದರಿಗಳನ್ನು ತರುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಟಾಟಾ ತನ್ನ ಸಾಲಿನಲ್ಲಿ EV ಕೊಡುಗೆಯನ್ನು ಶೇ25 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

upcoming-cars-india-20-models-ready-for-launch

ದೇಶದಲ್ಲಿ ಇಂಧನ ಚಾಲಿತ ವಾಹನ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು, ಟೊಯೊಟಾ ಪಾಲುದಾರಿಕೆಯಲ್ಲಿ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಅದ್ಭುತಗಳನ್ನು ಮಾಡುತ್ತಿದೆ. ಟೊಯೋಟಾದ 27PL ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಆಧಾರಿತ eVX ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯನ್ನು ಮುಂದಿನ ವರ್ಷದಲ್ಲಿ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೊಯೊಟಾದ ಎಲೆಕ್ಟ್ರಿಕ್ ಎಸ್‌ಯುವಿಯು ಈ ದಶಕದ ಮಧ್ಯಭಾಗದಲ್ಲಿ ಶೋರೂಮ್‌ಗಳನ್ನು ತಲುಪಲಿದೆ. ಇದು ಸಿಂಗಲ್ ಮತ್ತು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಾಗಲಿದೆ. ಉಳಿದಂತೆ MG ಮೋಟಾರ್ ಭಾರತಕ್ಕಾಗಿ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ತರಲು ಸಜ್ಜಾಗಿರುವಂತೆ ತೋರುತ್ತಿದೆ. ಹಾಗೆಯೇ ಎಲೆಕ್ಟ್ರಿಕ್-ಸ್ಪೆಕ್ ಹ್ಯುಂಡೈ ಕ್ರೆಟಾ ಈಗಾಗಲೇ ಸಾರ್ವಜನಿಕ ರಸ್ತೆಗಳಲ್ಲಿ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ. ಇದು 2024 ರಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

upcoming-cars-india-20-models-ready-for-launch

2026 ರ ವೇಳೆಗೆ ಹೋಂಡಾದ ಇ-ಎಲಿವೇಟ್ ಅನ್ನು ನಾವು ನೋಡುವ ಸಾಧ್ಯತೆಗಳಿವೆ. ಹಾಗೆಯೇ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾದಿಂದ ಕೂಡ ಭಾರತದಲ್ಲಿ ಹೊಸ ಮಾದರಿಗಳೊಂದಿಗೆ ಎಂಟ್ರಿ ಕೊಡುವ ಮುನ್ಸೂಚನೆಗಳಿವೆ. ಮಹೀಂದ್ರಾ ತನ್ನ XUV.e ಮತ್ತು BE ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳೊಂದಿಗೆ ಆಟಕ್ಕೆ ಕಾಲಿಡುವುದು ಖಚಿತವಾಗಿದೆ.

ಹಾಗೆಯೇ ಟೆಸ್ಲಾ ಸ್ಥಳೀಯವಾಗಿ ವಾಹನ ಮತ್ತು ಬ್ಯಾಟರಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ. ಇದರ ಜೊತೆಗೆ ಮತ್ತೊಂದು ಅಮೆರಿಕಾ ಮೂಲದ ಇವಿ ಕಂಪನಿಯಾದ ಫಿಸ್ಕರ್ ದೇಶೀಯ ಮಾರುಕಟ್ಟೆಯಲ್ಲಿ ವಿಶೇಷ ಆವೃತ್ತಿಯ ಓಷನ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿರುವುದು ಕೂಡ ಖಚಿತವಾಗಿದೆ.

upcoming-cars-india-20-models-ready-for-launch

ಇವಿಷ್ಟೃ ಅಲ್ಲದೇ ಜಾಗತಿಕ ಜನಪ್ರಿಯ EV ಬ್ರಾಂಡ್‌ಗಳು ವಿಸ್ತರಣೆಯ ಸಂಭಾವ್ಯ ಪ್ರದೇಶವಾಗಿ ಭಾರತವನ್ನು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವೆಲ್ಲವೂ ಭಾರತವನ್ನು ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಪ್ರಮುಖ ವ್ಯಾಪಾರ ಕೇಂದ್ರವನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 2, 2023, 13:32 [IST]
English summary
Upcoming cars india 20 models ready for launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+