Upcoming Cars: ಮುಂದಿನ 2 ತಿಂಗಳು.. ಜಿದ್ದಾಜಿದ್ದಿಗೆ ಬಿದ್ದಂತೆ ಬರಲಿವೆ ದೊಡ್ಡ ಕಂಪನಿಗಳ ಜನಪ್ರಿಯ ಕಾರುಗಳು

ವಿಶ್ವದಲ್ಲಿಯೇ ಭಾರತ ಅತಿದೊಡ್ಡ ವಾಹನ ಮಾರುಕಟ್ಟೆಯಲ್ಲಿ ಹೊಂದಿದ್ದು, ಇಲ್ಲಿ ತಮ್ಮ ಕಾರುಗಳನ್ನು ಬಿಡುಗಡೆ ಮಾಡಲು ಸ್ವದೇಶಿ ಹಾಗೂ ವಿದೇಶಿ ಕಂಪನಿಗಳು ಹೆಚ್ಚು ಉತ್ಸುಕತೆಯನ್ನು ತೋರುತ್ತವೆ. ಮುಂದಿನ ಎರಡು ತಿಂಗಳಲ್ಲಿ ಜಿದ್ದಾಜಿದ್ದಿಗೆ ಬಿದ್ದಂತೆ ಪ್ರಮುಖ ಕಂಪನಿಗಳು ಒಟ್ಟು ಆರು ಕಾರುಗಳನ್ನು ಬಿಡುಗಡೆ ಮಾಡಲಿವೆ. ಒಂದಕ್ಕಿಂತ ಒಂದು ಹೆಚ್ಚು ಆಕರ್ಷಣೀಯವಾಗಿದೆ.

ಮೊದಲಿಗೆ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಈಗಾಗಲೇ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಶುರು ಮಾಡಿದೆ. ಜುಲೈ 10ರಂದು ಭಾರತದ ಮಾರುಕಟ್ಟೆಯನ್ನು ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ. ಅಂದೇ ಬೆಲೆಯನ್ನು ಘೋಷಿಸಲಾಗುತ್ತದೆ. ಆಸಕ್ತ ಗ್ರಾಹಕರು, ರೂ.11,000 ಮುಂಗಡ ಹಣ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಇದು, ಗ್ರ್ಯಾಂಡ್ ಐ10 ನಿಯೋಸ್‌ ಪ್ಲಾಟ್‌ಫಾರ್ಮ್‌ ಆಧರಿಸಿದ್ದು, ಟಾಟಾ ಪಂಚ್ ಪ್ರತಿಸ್ಪರ್ಧಿಯಾಗಿದೆ.

Upcoming Cars: ಮುಂದಿನ 2 ತಿಂಗಳು.. ಜಿದ್ದಾಜಿದ್ದಿಗೆ ಬಿದ್ದಂತೆ ಬರಲಿವೆ ದೊಡ್ಡ ಕಂಪನಿಗಳ ಜನಪ್ರಿಯ ಕಾರುಗಳು

ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧಾರಿತ ನೂತನ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ, ಈಗಾಗಲೇ ಭಾರತದಲ್ಲಿ ಭಾರೀ ಕ್ರೇಜ್ ಸೃಷ್ಟಿಸಿದೆ. ರೂ.25,000 ಪಾವತಿಸುವ ಮೂಲಕ ಈ ಎಂಪಿವಿಯನ್ನು ಬುಕ್ಕಿಂಗ್ ಮಾಡಬಹುದು. ಇದು, ಕಂಪನಿ ಪೋರ್ಟ್ಪೋಲಿಯೋದಲ್ಲಿ ದುಬಾರಿ ಕಾರಾಗಿದ್ದು, 7 - 8 ಆಸನ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಕರ್ನಾಟಕದ ಬಿಡದಿಯಲ್ಲಿ ತಯಾರಾಗುವ ಈ ಇನ್ವಿಕ್ಟೊ ಎಂಪಿವಿಯನ್ನು ಜುಲೈ 5ರಂದು ಅನಾವರಣಗೊಳಿಸಲಾಗುತ್ತದೆ.

ಈ ಇನ್ವಿಕ್ಟೊ ಎಂಪಿವಿ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ ನಾನ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಸಾಧ್ಯತೆಯಿದ್ದು, 21 kmpl ಮೈಲೇಜ್ ನೀಡಬಹುದು. ಜೊತೆಗೆ ಈ ಎಂಪಿವಿ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆದಿರಲಿದೆ.

Upcoming Cars: ಮುಂದಿನ 2 ತಿಂಗಳು.. ಜಿದ್ದಾಜಿದ್ದಿಗೆ ಬಿದ್ದಂತೆ ಬರಲಿವೆ ದೊಡ್ಡ ಕಂಪನಿಗಳ ಜನಪ್ರಿಯ ಕಾರುಗಳು

ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆಫ್ ರೋಡ್ ಎಸ್‌ಯುವಿ, ಮಾರುತಿ ಸುಜುಕಿ 5 ಡೋರ್ ಜಿಮ್ನಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ಮಹೀಂದ್ರಾ ಥಾರ್ ಆಗಸ್ಟ್ 15ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಇದು ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದ್ದು, ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. 2.2 ಲೀಟರ್ ಡೀಸೆಲ್, 2.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ನವೀಕರಿಸಿದ ಕಿಯಾ ಸೆಲ್ಟೋಸ್ ಎಸ್‌ಯುವಿ ಜುಲೈ 4ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಈ ಕಾರು, ಹೊರ ಹಾಗೂ ಒಳಭಾಗದಲ್ಲಿ ಬಹಳಷ್ಟು ಆಕರ್ಷಕ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ಸೆಲ್ಟೋಸ್ ಎಸ್‌ಯುವಿ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಇನ್ಫೋಟೈಮೆಂಟ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯಲ್ ಸ್ಕ್ರೀನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಲಿದೆ.

Upcoming Cars: ಮುಂದಿನ 2 ತಿಂಗಳು.. ಜಿದ್ದಾಜಿದ್ದಿಗೆ ಬಿದ್ದಂತೆ ಬರಲಿವೆ ದೊಡ್ಡ ಕಂಪನಿಗಳ ಜನಪ್ರಿಯ ಕಾರುಗಳು

ಕೆಲವೇ ವಾರಗಳ ಹಿಂದೆ, ಮಾರುಕಟ್ಟೆಯಲ್ಲಿ ಅನಾವರಣಗೊಂಡ ಸಿಟ್ರಸ್ ಸಿ3 ಏರ್‌ಕ್ರಾಸ್ ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ಲಾಂಚ್ ಆಗಲಿದ್ದು, 7 ಆಸನ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್‌ನಂತೆಯೇ ಸಿಎಂಪಿ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ. ಜೊತೆಗೆ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ವಿವಿಧ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ.

ಕಡೆಯದಾಗಿ ಟಾಟಾದ ಬಹುನೀರಿಕ್ಷಿತ ನವೀಕರಿಸಿದ ನೆಕ್ಸಾನ್ ಎಸ್‌ಯುವಿ ಬಗ್ಗೆ ಮಾತನಾಡೋಣ. ಇದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಹೊರ ಹಾಗೂ ಒಳಭಾಗದಲ್ಲಿ ಹಲವು ಬದಲಾವಣೆಗಳನ್ನು ಹೊಂದಿರಲಿದೆ. ಈ ಕಾರು, 115 PS ಗರಿಷ್ಠ ಪವರ್ ಉತ್ಪಾದಿಸಲು ಸಾಮರ್ಥ್ಯವಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರುವ ಸಾಧ್ಯತೆಯಿದೆ.

Article Published On: Sunday, June 25, 2023, 11:00 [IST]
English summary
Upcoming cars launches next 2 months india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+