Upcoming Cars: ಬಿಡುಗಡೆಯಾಗಲಿರುವ ಹೊಸ ಕಾರುಗಳಿವು: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಸಜ್ಜು
ಜನಪ್ರಿಯ ಕಾರು ತಯಾರಕ ಕಂಪನಿಗಳು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದಾರೆ, ಮುಂಬರುವ ತಿಂಗಳುಗಳಲ್ಲಿ ಹಲವು ಜನಪ್ರಿಯ ಕಾರುಗಳ ನಡುವೆ ಹೆಚ್ಚು ರೋಮಾಂಚನಕಾರಿಯಾದ ಸ್ಪರ್ಧೆ ನಡೆಯಲಿದೆ. ಎಸ್‍ಯುವಿ ವಿಭಾಗದಲ್ಲಿ ಹೆಚ್ಚು ಪೈಪೋಟಿ ನಡುಯುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಜಿಮ್ನಿ: ಮಾರುತಿ ಸುಜುಕಿ ಕಂಪನಿಯು ತನ್ನ ಜಿಮ್ನಿ ಎಸ್‌ಯುವಿಯನ್ನು 2023ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಮಾದರಿಯಂತಲ್ಲದೆ, ಜಿಮ್ನಿ ಎಸ್‌ಯುವಿಯ ಭಾರತೀಯ ಆವೃತ್ತಿಯು 5-ಡೋರಿನ ವಿನ್ಯಾಸದೊಂದಿಗೆ ಬರಲಿದೆ. ಇದು ಹೆಚ್ಚು ಪ್ರಾಯೋಗಿಕವಾಗಿದೆ. ಮುಂಬರುವ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯು BS6 ಹಂತ 2 ಕಂಪ್ಲೈಂಟ್, 1.5-ಲೀಟರ್, ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಅದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಹೊಂದಬಹುದು. ಗ್ಯಾಸೋಲಿನ್ ಮೋಟಾರ್ 6,000 rpm ನಲ್ಲಿ 102 ಬಿಹೆಚ್‍ಪಿ ಪವರ್ ಮತ್ತು 4,400rpm ನಲ್ಲಿ 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಆಫ್-ರೋಡ್ ಸಾಮರ್ಥ್ಯದ ಎಸ್‍ಯುವಿಯ ಸುಜುಕಿಯ AllGrip AWD (ಆಲ್-ವೀಲ್ ಡ್ರೈವ್) ಸಿಸ್ಟಂ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಪಡೆಯುತ್ತದೆ.
ಟಾಟಾ ಆಲ್ಟ್ರೋಜ್: ಟಾಟಾ ಕಂಪನಿಯು ಆಲ್ಟ್ರೋಜ್ ಸಿಎನ್‌ಜಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ.21,000 ರೂಪಾಯಿಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಟಾಟಾ ಆಲ್ಟ್ರೋಜ್ ಸಿಎನ್‌ಜಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್‌ಜಿ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.
ಮುಖ್ಯವಾಗಿ ಈ ಹೊಸ ಟಾಟಾ ಆಲ್‌ಟ್ರೊಜ್ ಸಿಎನ್‌ಜಿ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ, ಟಾಟಾ ಪಂಚ್ iCNG ಯಂತೆಯೇ, ಆಲ್‌ಟ್ರೊಜ್ iCNG ಕೂಡ ಟಾಟಾದ ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ, ಸ್ಟ್ಯಾಂಡರ್ಡ್ Altroz ಕಾರಿಗೆ ಹೋಲಿಸಿದಾಗ ಕ್ಯಾಬಿನ್ ನಲ್ಲಿ ಕೆಲವು ನವೀಕರಣಗಳನ್ನು ಪಡೆಯುತ್ತದೆ. ಹೊಸ ತಂತ್ರಜ್ಞಾನ ಟಾಟಾ ಆಲ್‌ಟ್ರೊಜ್ ವಾಯ್ಸ್-ಕಂಟ್ರೋಲ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ ಎಂದು ಟಾಟಾ ಹೇಳುತ್ತದೆ.
ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯನ್ನು 5 ಮತ್ತು 7-ಸೀಟುಗಳ ಕಾನ್ಫಿಗರೇಶನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಈ ಹೊಸ ಸಿಟ್ರನ್ ಎಸ್‍ಯುವಿ ವಿನ್ಯಾಸವು ಸಿ3 ಹ್ಯಾಚ್‌ಬ್ಯಾಕ್‌ನಿಂದ ಹೆಚ್ಚು ಪ್ರೇರಿತವಾಗಿದೆ. ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ ಹಿಂಭಾಗದಲ್ಲಿ, ಇದು ಸ್ಕ್ವಾರಿಶ್ ಟೈಲ್‌ಲ್ಯಾಂಪ್‌ಗಳು, ಎತ್ತರದ ಬಂಪರ್ ಮತ್ತು ದೊಡ್ಡದಾದ ಟೈಲ್‌ಗೇಟ್ ಅನ್ನು ಹೊಂದಿದೆ.
ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯಲ್ಲಿ ಸುಮಾರು 4.3 ಮೀಟರ್ ಉದ್ದವನ್ನು ಅಳೆಯುತ್ತದೆ, ಹೀಗಾಗಿ ಇದು ಹ್ಯುಂಡೈ ಕ್ರೆಟಾದಷ್ಟು ಉದ್ದವಾಗಿದೆ. ಈ ಎಸ್‍ಯುವಿಯು 200mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಎಸ್‍ಯುವಿಯ 7-ಸೀಟರ್ ಆವೃತ್ತಿಯು ಬ್ಲೋವರ್ ಕಂಟ್ರೋಲ್ ನೊಂದಿಗೆ ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಹೊಂದಿರುತ್ತದೆ.
ಹ್ಯುಂಡೈ ಎಕ್ಸ್‌ಟರ್: ಮುಂಬರುವ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಬಿಡುಗಡೆಯ ಸಮಯದಲ್ಲಿ ಇದು ದಕ್ಷಿಣ ಕೊರಿಯಾದ ವಾಹನ ತಯಾರಕರ ಅತ್ಯಂತ ಚಿಕ್ಕ ಎಸ್‌ಯುವಿ ಆಗಿರುತ್ತದೆ. 2023ರ ಆಗಸ್ಟ್ ತಿಂಗಳಿನಲ್ಲಿ ಎಕ್ಸ್‌ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ . ಈ ಎಸ್‍ಯುವಿಯು ಅದರ ಆಧಾರವನ್ನು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನೊಂದಿಗೆ ಹಂಚಿಕೊಳ್ಳುತ್ತದೆ.


Click it and Unblock the Notifications