Tata - Maruti - Hyundai: ಜಿದ್ದಾಜಿದ್ದಿಗೆ ಬಿದ್ದಂತೆ ಬಿಡುಗಡೆಯಾಗಲಿವೆ ಟಾಟಾ, ಮಾರುತಿ, ಹ್ಯುಂಡೈ ಕಾರುಗಳು

ದೇಶದಲ್ಲಿ ಮಾರುತಿ ಸುಜುಕಿ (Maruti Suzuki), ಟಾಟಾ (Tata), ಹ್ಯುಂಡೈ (Hyundai) ಪ್ರಮುಖ ವಾಹನ ತಯಾರಕ ಕಂಪನಿಗಳಾಗಿ ಗುರುತಿಸಿಕೊಂಡಿದ್ದು, ಮುಂದಿನ ವರ್ಷ ಜಿದ್ದಾಜಿದ್ದಿಗೆ ಬಿದ್ದಂತೆ ಒಂದಕ್ಕಿಂತ ಒಂದು ಅತ್ಯಾಕರ್ಷಕವಾಗಿರುವ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೊದಲಿಗೆ, ಟಾಟಾದ ಕರ್ವ್ವ್ ಕಾನ್ಸೆಪ್ಟ್ ಕಾರಿನ ಬಗ್ಗೆ ಮಾತನಾಡೋಣ. ಇದನ್ನು ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಆಯ್ಕೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಮೊದಲಿಗೆ (2024) ಕರ್ವ್ವ್ ಎಲೆಕ್ಟ್ರಿಕ್ ರೂಪದಲ್ಲಿ ಬರಲಿದ್ದು, ಮರು ವರ್ಷ ಪೆಟ್ರೋಲ್ ಆಯ್ಕೆಯಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಟಾಟಾ ಕಂಪನಿ, ಈ ಕಾರನ್ನು 'ಫ್ರೆಸ್ಟ್' (Frest) ಹೆಸರಿನಲ್ಲಿ ಪರಿಚಯಿಸಬಹುದು.

Tata - Maruti - Hyundai: ಜಿದ್ದಾಜಿದ್ದಿಗೆ ಬಿದ್ದಂತೆ ಬಿಡುಗಡೆಯಾಗಲಿವೆ ಟಾಟಾ, ಮಾರುತಿ, ಹ್ಯುಂಡೈ ಕಾರುಗಳು

ಟಾಟಾ ಕರ್ವ್ವ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಕಂಪನಿಯ ಎರಡನೇ ತಲೆಮಾರಿನ ಪ್ಲಾಟ್‌ಫಾರ್ಮ್ ಆಧರಿಸಿದ್ದು, ಕೊಂಚ ಹೆಚ್ಚಿನ ಬೆಲೆಗೆ ಅಂದರೆ ರೂ.20 ಲಕ್ಷಕ್ಕೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಚಾರ್ಜ್ ನಲ್ಲಿ 400 km ರಿಂದ 500 km ರೇಂಜ್ ನೀಡುವ ಸಾಧ್ಯತೆಯಿದೆ. ಬೃಹತ್ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರುವ ನಿರೀಕ್ಷೆಯಿದೆ.

ಮುಂಬರಲಿರುವ ಇಂಧನ ಚಾಲಿತ ಕರ್ವ್ವ್ ಕಾರಿನ ಬಗ್ಗೆ ತಿಳಿಯುವುದಾದರೆ, ಇದು, ಪವರ್ ಫುಲ್ 1.5 ಲೀಟರ್ ಟರ್ಬೊ ಪೆಟೋಲ್ ಎಂಜಿನ್ ಹೊಂದಿರುವ ನೀರಿಕ್ಷೆ ಇದ್ದು, 125 PS ಗರಿಷ್ಠ ಪವರ್ ಮತ್ತು 225 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಜೊತೆಗೆ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಿಗುವ ಸಾಧ್ಯತೆಯಿದೆ. ಎಲೆಕ್ಟ್ರಿಕ್ ಚಾಲಿತ ಕರ್ವ್ವ್ ಕಾರಿಗೆ ಹೋಲಿಸಿದರೆ ರೂ.10 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು.

Tata - Maruti - Hyundai: ಜಿದ್ದಾಜಿದ್ದಿಗೆ ಬಿದ್ದಂತೆ ಬಿಡುಗಡೆಯಾಗಲಿವೆ ಟಾಟಾ, ಮಾರುತಿ, ಹ್ಯುಂಡೈ ಕಾರುಗಳು

ಮಾರುತಿ ಸುಜುಕಿ ಕಂಪನಿ ತಾನೇನು ಕಮ್ಮಿ ಇಲ್ಲವೆಂಬಂತೆ ಹೊಸ ತಲೆಮಾರಿನ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳನ್ನು ಬರುವ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಟೊಯೊಟಾ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿರುವುದರಿಂದ ಹೊಸ ಕಾರುಗಳು ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆದಿರಬಹುದು. ಈ ಕಾರಣಕ್ಕೆ ಬೈಕ್ ಗಳಂತೆ 35 - 40 kmpl ಮೈಲೇಜ್ ನೀಡಬಹುದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ಮಾತನಾಡುವದಾದರೆ, ಈ ಕಾರು, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 22.38 - 30.90 kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Tata - Maruti - Hyundai: ಜಿದ್ದಾಜಿದ್ದಿಗೆ ಬಿದ್ದಂತೆ ಬಿಡುಗಡೆಯಾಗಲಿವೆ ಟಾಟಾ, ಮಾರುತಿ, ಹ್ಯುಂಡೈ ಕಾರುಗಳು

ಹ್ಯುಂಡೈನ ಜನಪ್ರಿಯ ಕಾರುಗಳಲ್ಲಿ ಕ್ರೆಟಾ ಎಸ್‌ಯುವಿ ಪ್ರಮುಖವಾಗಿದೆ. ಕಂಪನಿಯು 2024 ಆರಂಭದಲ್ಲಿ ನವೀಕರಿಸಿದ ಕ್ರೆಟಾವನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ನೂತನ ಕಾರು ADAS (ಸುಧಾರಿತಾ ಚಾಲಕ ಸಹಾಯ ವ್ಯವಸ್ಥೆ), 360 - ಡಿಗ್ರಿ ಕ್ಯಾಮೆರಾ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರಬಹುದು. ಜೊತೆಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಪ್ರಸ್ತುತ, ಭಾರತ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿ, ರೂ.10.87 ಲಕ್ಷದಿಂದ ರೂ.19.20 ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. 16.8 kmpl ಮೈಲೇಜ್ ನೀಡುತ್ತದೆ. ಐದು ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 1, 2023, 8:35 [IST]
English summary
Upcoming maruti suzuki hyundai tata cars 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+