MGಯಿಂದ ಬರಲಿದೆ ಮೈಕ್ರೋ ಎಲೆಕ್ಟ್ರಿಕ್ SUV: ಪ್ರತಿಯೊಬ್ಬರನ್ನು ತಿರುಗಿ ನೋಡುವಂತೆ ಮಾಡುತ್ತೆ!
'ಎಂಜಿ ಮೋಟಾರ್' ಪ್ರಮುಖ ಬ್ರಿಟಿಷ್ ವಾಹನ ತಯಾಕರ ಕಂಪನಿಯಾಗಿ ವಿಶ್ವಾದ್ಯಂತ ಖ್ಯಾತಿಗಳಿಸಿದೆ. ಇದೀಗ, ಕೈಗೆಟುಕುವ ಬೆಲೆ, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ನೂತನ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಅದು ಹೇಗಿರಲಿದೆ, ಯಾವಾಗ ಬಿಡುಗಡೆಯಾಗಬಹುದು ಎಂಬುದರ ವಿವರ ಇಲ್ಲಿದೆ.
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಎಂಜಿ ಮೋಟಾರ್ ಇಂಡಿಯಾ (MG Motor India) ಭಾರತದ ಮಾರುಕಟ್ಟೆಯಲ್ಲಿ ತನ್ನ ಪುಟ್ಟ ಕಾರು, ಕಾಮೆಟ್ (Comet) ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಇದನ್ನು ಕಂಪನಿಯು 'ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್' (GSEV) ಪ್ಲಾಟ್‌ಫಾರ್ಮ್‌ನಡಿ ಆಕರ್ಷಕವಾಗಿ ವಿನ್ಯಾಸ ಮಾಡಿದೆ. ಸದ್ಯದ ವರದಿ ಪ್ರಕಾರ, ಅದೇ ಪ್ಲಾಟ್‌ಫಾರ್ಮ್ ಆಧರಿಸಿ, ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ.

'ಎಂಜಿ ಮೋಟಾರ್' ತನ್ನ ಹೊಸ 'ಕಾಮೆಟ್' ಎಲೆಕ್ಟ್ರಿಕ್ ಕಾರನ್ನು ದೇಶೀಯ ಗ್ರಾಹಕರಿಗೆ ಕೊಂಚ ಕಡಿಮೆ ಬೆಲೆಯಲ್ಲಿ ನೀಡಲು ನಿರ್ಧರಿಸಿದಂತೆ ಕಾಣುತ್ತಿದೆ. ಅದಕ್ಕಾಗಿ ಟಾಟಾ ಆಟೋಕಾಂಪ್‌ನಿಂದ ಬ್ಯಾಟರಿಗಳನ್ನು ತೆಗೆದುಕೊಳ್ಳುತ್ತಿದ್ದು, ಮುಂಬರಲಿರುವ ಹೊಸ ಎಸ್‌ಯುವಿ ತಯಾರಿಕೆಗೂ ಸ್ಥಳೀಯ ಕಚ್ಚಾವಸ್ತುಗಳನ್ನು ಬಳಕೆ ಮಾಡಬಹುದು. ಇದಕ್ಕೆ E260 ಎಂಬ ಕೋಡ್ ನೇಮ್ ಇಡಲಾಗಿದ್ದು, 3 ಡೋರ್ ಆಯ್ಕೆಯನ್ನು ಹೊಂದಿದೆ. ಬಹುತೇಕ ನಗರದೊಳಗೆ ಸಂಚರಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಎಸ್‌ಯುವಿಯ ಡಿಸೈನ್ ಗಮನಿಸಿದರೆ ಚೀನಾದ ಪ್ರಮುಖ ವಾಹನ ತಯಾರಕ ಕಂಪನಿ 'Baojun' 2022ರಲ್ಲಿ ಅನಾವರಣಗಳಿಸಿದ ' 'Yep' ಮೈಕ್ರೋ ಎಸ್‌ಯುವಿಯ ಕಾನ್ಸೆಪ್ಟ್ ಆಧರಿಸಿದೆ. ಜಿಮ್ನಿ/ ಫೋರ್ಡ್ ಬ್ರಾಂಕೊ ಹೊಂದಿರುವಂತೆ ರೆಟ್ರೋ ಲುಕ್ ಹೊಂದಿದ್ದು, ದೊಡ್ಡದಾದ ವೀಲ್ಸ್ ಹಾಗೂ ಟೈಯರ್ಸ್ ಪಡೆದಿರಲಿದೆ. ಆದರೆ, ಒಳಭಾಗದಲ್ಲಿ ಯಾವೆಲ್ಲ ನೂತನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಎಂಜಿಯ ಈ ಹೊಸ ಮೈಕ್ರೋ ಎಸ್‌ಯುವಿ, 2025ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ದೇಶೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಂಡು ಈ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿರುವುದರಿಂದ ಬಹುತೇಕ ರೂ.15 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿದೆ. ಇದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಸಿಟ್ರಸ್ ಇಸಿ3 ಹಾಗೂ ಟಾಟಾದ ಟಿಯಾಗೊ ಇವಿಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಬಹುತೇಕ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿರುವ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು, ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದೆ. 17.3 kWh ಬ್ಯಾಟರಿ ಹೊಂದಿರುವ ಕಾರು, 200 Km ರೇಂಜ್, 26.7 kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 350 Km ರೇಂಜ್ ನೀಡಲಿದೆ. 45-50 bhp ಪವರ್ ಮತ್ತು 90-110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು, ಪಿಂಕ್, ಯೆಲ್ಲೋ, ಬ್ಲೂ ಹಾಗೂ ಗ್ರೀನ್ ಬಣ್ಣಗಳ ಆಯ್ಕೆಯನ್ನು ಪಡೆದಿರಲಿದ್ದು, ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಡ್ಯೂಯಲ್ 10.25-ಇಂಚಿನ ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸ್ಕ್ರೀನ್, ಎಲ್ಇಡಿ DRLs, ಎಲ್ಇಡಿ ಹೈಡ್ ಲೈಟ್ಸ್, ಎಲ್ಇಡಿ ಟರ್ನ್ ಸಿಗ್ನಲ್, 13 ಇಂಚಿನ ವೀಲ್ಸ್ ಅನ್ನು ಪಡೆದಿರಲಿದೆ. ಇನ್ನು, ಮುಂಬರಲಿರುವ ಮೈಕ್ರೋ ಎಸ್‌ಯುವಿ ಬಗ್ಗೆ ಶೀಘ್ರದಲ್ಲೇ ಕಂಪನಿಯಿಂದ ಅಧಿಕೃತ ಮಾಹಿತಿ ಹೊರಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications