SUV ಪ್ರಿಯರೇ... ಟಾಟಾದಿಂದ ಹೋಂಡಾವರೆಗೆ ಶೀಘ್ರದಲ್ಲೇ ಮಧ್ಯಮ ಗಾತ್ರದ SUVಗಳ ಆಗಮನ!

ಭಾರತದಲ್ಲಿ ಎಸ್‌ಯುವಿ ವಿಭಾಗವು ಸಖತ್ ಪೈಪೋಟಿಯಿಂದ ಕೂಡಿರುವ ವಿಭಾಗವಾಗಿದೆ. ಅದರಲ್ಲೂ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವನ್ನು ದೇಶೀಯ ಹಾಗೂ ವಿದೇಶಿ ಕಾರು ತಯಾರಕರು ಗುರಿಯಾಗಿಸಿಕೊಂಡಿದ್ದಾರೆ. ಹಾಗಾಗಿಯೇ ಟಾಟಾ, ಹೋಂಡಾ, ಕಿಯಾ ಮತ್ತು ಸಿಟ್ರನ್ ಕಂಪನಿಗಳು ಈ ವರ್ಷದಲ್ಲಿ ಹೊಸ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿವೆ.

ಸೆಡಾನ್ ಮಾದರಿಗಳು ಭಾರತದಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಬೇಡಿಕೆಯನ್ನು ಹೊಂದಿಲ್ಲ. ಗ್ರಾಹಕರು ಕೂಡ ಎಸ್‌ಯುವಿಗಳಿಗೆ ಹೆಚ್ಚು ಆಧ್ಯತೆ ನೀಡುವುದರಿಂದ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮಾರಾಟವು ಸೆಡಾನ್‌ಗಳಿಗೆ ಹೋಲಿಸಿಕೊಂಡರೆ ಭಾರೀ ಅಂತರದಲ್ಲಿ ಮುನ್ನುಗ್ಗುತ್ತಿವೆ. ಕಾರು ಕಂಪನಿಗಳು ಕೂಡ ಇದನ್ನೇ ಪರಿಗಣಿಸಿ ಹೊಸ ಮಾದರಿಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಭಾರತೀಯ ಎಸ್‌ಯುವಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟಾಪ್ ಎಸ್‌ಯುವಿಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ.

SUV ಪ್ರಿಯರೇ... ಟಾಟಾದಿಂದ ಹೋಂಡಾವರೆಗೆ ಶೀಘ್ರದಲ್ಲೇ ಮಧ್ಯಮ ಗಾತ್ರದ SUVಗಳ ಆಗಮನ!

1. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್:
ಸೆಲ್ಟೋಸ್ ಪ್ರಸ್ತುತ ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUV ಆಗಿದೆ. ಹಾಗಾಗಿ ಕಂಪನಿಯವರು ಈ ವರ್ಷದ ಮಧ್ಯದಲ್ಲಿ ಸೆಲ್ಟೋಸ್‌ನ ಫೇಸ್‌ಲಿಫ್ಟ್ ಆವೃತ್ತಿಯ ಒಳಭಾಗ ಮತ್ತು ಹೊರಭಾಗವನ್ನು ಹಲವಾರು ಪರಿಷ್ಕರಣೆಗಳೊಂದಿಗೆ ಪರಿಚಯಿಸುವ ನಿರೀಕ್ಷೆಯಿದೆ. ಆದರೆ ಮಾರುತಿ ಸುಜುಕಿ ಗ್ರಾಂಡ್ ವಿಟಾರಾದಂತಹ ಹೊಸ ಮಾದರಿಗಳ ಆಗಮನದಿಂದಾಗಿ ಸ್ಪರ್ಧೆಯು ಹೆಚ್ಚಾಗಿದೆ. ಇದು 160 ಪಿಎಸ್ ಗರಿಷ್ಠ ಶಕ್ತಿಯನ್ನು ನೀಡುವ ಹೊಸ 1.5L ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡು ಬರುವ ನಿರೀಕ್ಷೆಯಿದೆ.

2. ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್:
ಟಾಟಾ ಮೋಟಾರ್ಸ್‌ನ ಟಾಪ್ ಮಾದರಿಗಳಾದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟೆಡ್ ಮಾಡಲ್‌ಗಳು ಮುಂದಿನ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮುಂಬರುವ ಹೊಸ ಮಾದರಿಗಳು ಹ್ಯಾರಿಯರ್ EV ಯಿಂದ ಹೆಚ್ಚು ಪ್ರಭಾವಿತವಾಗಿದೆ. ಆದರೆ ಮಧ್ಯಮ ಗಾತ್ರದ SUV ಗಳು ಹೊಸ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಇಂಟರ್ನಲ್ ಆಗಿ ದೊಡ್ಡ ನವೀಕರಣಗಳನ್ನು ಪಡೆಯದಿರಬಹುದು. ಹಾಗೆಯೇ ಹೊಸ 1.5L ಟರ್ಬೊ ಪೆಟ್ರೋಲ್ ಎಂಜಿನ್ ಲಭ್ಯವಾಗಲಿದೆ.

SUV ಪ್ರಿಯರೇ... ಟಾಟಾದಿಂದ ಹೋಂಡಾವರೆಗೆ ಶೀಘ್ರದಲ್ಲೇ ಮಧ್ಯಮ ಗಾತ್ರದ SUVಗಳ ಆಗಮನ!

3. ಸಿಟ್ರನ್ C3 ಏರ್‌ಕ್ರಾಸ್:
ಸಿಟ್ರನ್ ತನ್ನ C3 ಏರ್‌ಕ್ರಾಸ್‌ನ ಜಾಗತಿಕ ಚೊಚ್ಚಲ ಪ್ರದರ್ಶನವನ್ನು ಶೀಘ್ರದಲ್ಲೇ ಮಾಡಲಿದೆ. ಇದು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಮಾರಾಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನು 5 ಮತ್ತು 7 ಸೀಟ್‌ಗಳ ಆಯ್ಕೆಯೊಂದಿಗೆ ತರಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಆಯ್ಕೆಗಳನ್ನು ನೀಡಲಿದ್ದಾರೆ. ಇದು C3 ಯಂತೆಯೇ ಅದೇ CMP ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.

4. ಹೋಂಡಾ ಮಧ್ಯಮ ಗಾತ್ರದ SUV:
ಹೋಂಡಾ ಮಧ್ಯಮ ಗಾತ್ರದ SUV ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‌ಗಳಿಗೆ ಪೈಪೋಟಿಯಾಗಿ ಮಾರುಕಟ್ಟೆಗೆ ಇಳಿಯಲಿದೆ. ಜುಲೈ ಅಥವಾ ಆಗಸ್ಟ್ 2023 ರ ಆಸುಪಾಸಿನಲ್ಲಿ ಬಿಡುಗಡೆಯಾಗುವ ಮುನ್ನ ಆದಷ್ಟು ಬೇಗ ಈ ಐದು ಆಸನಗಳ ಎಸ್‌ಯುವಿಯನ್ನು ಕಂಪನಿ ಬಹಿರಂಗಪಡಿಸಲಿದೆ. ಇದು CR-V ಮತ್ತು WR-V ಸೇರಿದಂತೆ ಹೋಂಡಾ SUV ಗಳ ಜಾಗತಿಕ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ ಎನ್ನಲಾಗಿದೆ.

SUV ಪ್ರಿಯರೇ... ಟಾಟಾದಿಂದ ಹೋಂಡಾವರೆಗೆ ಶೀಘ್ರದಲ್ಲೇ ಮಧ್ಯಮ ಗಾತ್ರದ SUVಗಳ ಆಗಮನ!

ಹೋಂಡಾದವರ ಹೊಸ ಎಸ್‌ಯುವಿ ಇಂಟೀರಿಯರ್ ವಿಷಯದಲ್ಲಿ ಹೋಂಡಾ ಸಿಟಿ ಮಾದರಿಗಿಂತ ಹೆಚ್ಚು ದುಬಾರಿಯಾಗುವ ಸಾಧ್ಯತೆ ಇದೆ. ಪರ್ಫಾಮೆನ್ಸ್ ನೋಡುವುದಾದರೆ 121 PS ಸಾಮರ್ಥ್ಯವಿರುವ 1.5L ನಾಲ್ಕು-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಮೊದಲು ನೀಡಲಾಗುವುದು. 1.5L ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ನಂತರ ಸಾಲಿಗೆ ಸೇರಬಹುದು. ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿರುವ 1.0L ಟರ್ಬೊ ಪೆಟ್ರೋಲ್ ಘಟಕವನ್ನು ಮುಂದಿನ ದಿನಗಳಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 18, 2023, 15:00 [IST]
English summary
Upcoming mid size suvs from 4 brands
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+