ಮುಂದಿನ ವರ್ಷ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು...

ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಈ ನಡುವೆ ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ಸೂಪರ್ ಹಿಟ್ ಕಾರುಗಳ ನವೀಕರಿಸಿದ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮುಂದಿನ ವರ್ಷ 10 ಲಕ್ಷ ರೂ. ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಕಾರುಗಳ (Upcoming Cars) ಬಗ್ಗೆ ಮಾಹಿತಿ ಇಲ್ಲಿದೆ.

ಕಿಯಾ ಸೊನೆಟ್: ಕಿಯಾ ಇಂಡಿಯಾದ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದೀಗ ಕಿಯಾ ಇಂಡಿಯಾ ಕಂಪನಿಯು ಈ ಸೊನೆಟ್ ಎಸ್‍ಯುವಿಯನ್ನು ಹೊಸ ನವೀಕರಣಗಳೊಂದಿಗೆ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹೊಸ ಕಿಯಾ ಸೊನೆಟ್ ಎಸ್‍ಯುವಿಯ ವಿನ್ಯಾಸದಲ್ಲಿನ ಬದಲಾವಣೆಗಳ ಜೊತೆಗೆ, ಕಿಯಾ ಹೊಸ ಸೆಲ್ಟೋಸ್ ಅನ್ನು ವಿವಿಧ ಹೊಸ ವೈಶಿಷ್ಟ್ಯಗಳ ಪರಿಚಯದೊಂದಿಗೆ ನವೀಕರಿಸುತ್ತದೆ.

Upcoming Cars

ಕಿಯಾ ಸೊನೆಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಮೂರು ಎಂಜಿನ್‌ಗಳನ್ನು ಆಯ್ಕೆಗಳಾಗಿ ನೀಡಲಾಗಿದೆ. ಇದರಲ್ಲಿ 1.2-ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 82 bhp ಪವರ್ ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದು, ಈ ಎಂಜಿನ್ 118 bhp ಪವರ್ ಮತ್ತು 172 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಮತ್ತು 7-ಸ್ಪೀಡ್ DCT ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ ಏಕೈಕ ಡೀಸೆಲ್ ಎಂಜಿನ್ 1.5-ಲೀಟರ್ ಯುನಿಟ್ ಆಗಿದೆ. ಈ ಎಂಜಿನ್ 114bhp ಪವರ್ ಮತ್ತು 250Nm ಟಾರ್ಕ್ ಉತ್ಪಾದಿಸುತ್ತದೆ.

Upcoming Cars

ಮಾರುತಿ ಸ್ವಿಫ್ಟ್: 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಈ ಸ್ವಿಫ್ಟ್ ಕಾರು 1.2-ಲೀಟರ್ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ ಮತ್ತು 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಂಜಿನ್‌ಗಳು 80 bhp ಪವರ್ ಮತ್ತು 108Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಆಯ್ಕೆ ಮಾಡಬಹುದು. ಈ ಹ್ಯಾಚ್‌ಬ್ಯಾಕ್ 265-ಲೀಟರ್‌ಗಳಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಹೊಸ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ 3860mm ಉದ್ದ, 1695mm ಅಗಲ ಮತ್ತು 1,500mm ಎತ್ತರ ಮತ್ತು 2,450mm ವ್ಹೀಲ್‌ಬೇಸ್ ಹೊಂದಿದೆ.

ಮಾರುತಿ ಡಿಜೈರ್: ಹೊಸ ಸ್ವಿಫ್ಟ್ ಮಾತ್ರವಲ್ಲದೆ, ಮಾರುತಿ ಸುಜುಕಿಯು ಹೊಸ ಜನರೇಷನ್ ಡಿಜೈರ್ ಸಬ್ -4 ಮೀಟರ್ ಸೆಡಾನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. 2024ರ ಮಧ್ಯದ ವೇಳೆಗೆ ಮಾರಾಟವಾಗುವ ಸಾಧ್ಯತೆಯಿದೆ, ಹೊಸ ಮಾರುತಿ ಡಿಜೈರ್ ಹೊಸ-ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ವಿನ್ಯಾಸ ಬದಲಾವಣೆಗಳು ಮತ್ತು ಒಳಾಂಗಣವನ್ನು ಹಂಚಿಕೊಳ್ಳುತ್ತದೆ. ಸೆಡಾನ್ ಅದೇ 1.2 ಲೀಟರ್ 3-ಸಿಲಿಂಡರ್ NA ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪಡೆಯುತ್ತದೆ.

Upcoming Cars

ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್: ಟಾಟಾ ಮೋಟಾರ್ಸ್ 2024 ರಲ್ಲಿ ಗಣನೀಯವಾಗಿ ಪರಿಷ್ಕೃತ ಆಲ್ಟ್ರೋಜ್ ​​ಹ್ಯಾಚ್‌ಬ್ಯಾಕ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಹೊಸ ಮಾದರಿಯು ಹೊಸ ಟಾಟಾ ಕಾರುಗಳಿಂದ ಪ್ರೇರಿತವಾದ ವಿನ್ಯಾಸ ಬದಲಾವಣೆಗಳನ್ನು ರಿಫ್ರೆಶ್ ಮಾಡಿದ ಒಳಾಂಗಣದೊಂದಿಗೆ ಪಡೆಯುತ್ತದೆ. ಇದು ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಎಲೆಕ್ಟ್ರಿಕ್ ಸನ್‌ರೂಫ್ (ಆಲ್ಟ್ರೋಜ್ ರೇಸರ್ ಎಡಿಷನ್) ಮತ್ತು ಇತರವುಗಳನ್ನು ಹೊಂದಿರುತ್ತದೆ.

ಇದರ ರೇಸರ್ ಆವೃತ್ತಿಯು 120bhp, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಥವಾ ಹೊಸ 125bhp, 1.2 ಲೀಟರೆ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವ ಸಾಧ್ಯತೆಯಿದೆ. ಆಲ್ಟ್ರೋಜ್ ​​ಫೇಸ್‌ಲಿಫ್ಟ್ ಅಸ್ತಿತ್ವದಲ್ಲಿರುವ 88bhp, 1.2 ಲೀಟರ್ NA ಪೆಟ್ರೋಲ್ ಮತ್ತು 110bhp, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ.

More from DriveSpark

Article Published On: Friday, December 22, 2023, 15:46 [IST]
English summary
Upcoming new cars under 10 lakh in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+