ಭರ್ಜರಿ ಮೈಲೇಜ್, ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಸ್ಟ್ರಾಂಗ್-ಹೈಬ್ರಿಡ್ ಕಾರುಗಳಿವು...

ಮುಂದಿನ ಎರಡು ವರ್ಷಗಳಲ್ಲಿ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಇತ್ತೀಚೆಗೆ ಕಾರು ತಯಾರಿಕರು ಹೆಚ್ಚಾಗಿ ಸ್ರಾಂಗ್-ಹೈಬ್ರಿಡ್ ಕಾರುಗಳಿಗೆ ಹೆಚ್ಚಿನ ಪ್ರಮುಖ್ಯಯತೆಗಳನ್ನು ನೀಡುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸ್ಟ್ರಾಂಗ್-ಹೈಬ್ರಿಡ್ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ನ್ಯೂ ಜನರೇಷನ್ ಟೊಯೊಟಾ ಫಾರ್ಚೂನರ್: ಭಾರತದಲ್ಲಿ ಹಲವು ವರ್ಷಗಳಿಂದ ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಮಾರಾಟವಾಗುತ್ತಿದೆ. ಟೊಯೊಟಾ ಸೌತ್ ಆಫ್ರಿಕಾವು ಫಾರ್ಚುನರ್ ಮತ್ತು ಹಿಲಕ್ಸ್ ಅನ್ನು ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. 2024 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲು ನಿರ್ಧರಿಸಲಾಗಿದೆ, ಮುಂಬರುವ ಮಾದರಿಗಳು ಹೊಸ ಪ್ಲಾಟ್‌ಫಾರ್ಮ್ ಅನ್ನು ಪಡೆಯುತ್ತವೆ ಎಂದು ವರದಿಯಾಗಿದೆ. ಹಳೆಯ IMV ಪ್ಲಾಟ್‌ಫಾರ್ಮ್‌ ಅನ್ನು ಬದಲಾಯಿಸಲಾಗುತ್ತದೆ.

Strong Hybrid Cars

ಈ ಮಾದರಿ ಬಿಡುಗಡೆಯು ಆರಂಭದಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಲ್ಲಿ ನಡೆಯಲಿದೆ. ನಂತರ ಹಂತದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ, ಮುಂಬರುವ ಫಾರ್ಚುನರ್ ಮತ್ತು ಹೈಲಕ್ಸ್ ಕಂಪನಿಯ ಸುಧಾರಿತ TNGA-F ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಪ್ರಸ್ತುತ ಮಾದರಿಗೆ ಹೋಲಿಸಿದರೆ ಹೆಚ್ಚಿನ ತಂತ್ರಜ್ಞಾನಗಳನ್ನು ಹೊಂದಿರುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ ಡೀಸೆಲ್ ಹೈಬ್ರಿಡ್ ಎಂಜಿನ್‌ ಅನ್ನು ಹೊಂದಿರುತ್ತದೆ.

ಹೊಸ ತಲೆಮಾರಿನ ಸ್ವಿಫ್ಟ್: ಮುಂದಿನ ವರ್ಷದ ಮೊದಲಾರ್ಧದಲ್ಲಿ, ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಒಳಗೆ ಮತ್ತು ಹೊರಗೆ ಹಲವಾರು ಪರಿಷ್ಕರಣೆಗಳೊಂದಿಗೆ ತರಲಿದೆ. ಇದು ಈಗಾಗಲೇ ಜಾಗತಿಕವಾಗಿ ಹಲವು ಬಾರಿ ಗುರುತಿಸಲ್ಪಟ್ಟಿದೆ ಮತ್ತು ಹೊಸ ಬಾಹ್ಯ ನವೀಕರಣಗಳು ಮತ್ತು ಹೊಚ್ಚ ಹೊಸ ಒಳಾಂಗಣವನ್ನು ಪಡೆಯುತ್ತದೆ. ಇದು 1.2 ಲೀಟರ್ ಮೂರು-ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ ಮತ್ತು 35-40 ಕಿ.ಮೀ ಮೈಲೇಜ್ ನೀಡಬಹುದು.

ಮಾರುತಿ ಎಂಗೇಜ್ ಎಂಪಿವಿ: ಮುಂದಿನ ಎರಡು ತಿಂಗಳೊಳಗೆ, ಮಾರುತಿ ಸುಜುಕಿ ಎಂಗೇಜ್ ಎಂಬ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಟೊಯೊಟಾ ಇನೋವಾ ಹೈಕ್ರಾಸ್‌ನ ಬ್ಯಾಡ್ಜ್-ಇಂಜಿನಿಯರಿಂಗ್ ಆವೃತ್ತಿಯಾಗಿದೆ. ಇದು TNGA-C ಪ್ಲಾಟ್‌ಫಾರ್ಮ್‌ನಲ್ಲಿ ADAS ಟೆಕ್ ಅನ್ನು ಮೊದಲ ಮಾರುತಿ ಸುಜುಕಿ ಮಾಡೆಲ್ ಆಗಲಿದೆ. ಇದು 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.

ಮಾರುತಿ ಕಾರುಗಳು: ಮಾರುತಿ ಸುಜುಕಿ ಕಂಪನಿಯ ಬಲೆನೊ, ಬ್ರೆಝಾ ಮತ್ತು ಫ್ರಾಂಕ್ಸ್ ಕಾರುಗಳನ್ನು ಹೈಬ್ರಿಡ್ ಆವೃತ್ತಿಗಳಾಗಿ ಪರಿಚಯಿಸಬಹುದು. ಸ್ವಿಫ್ಟ್ ಮತ್ತು ಡಿಜೈರ್‌ನಲ್ಲಿ ಹೊಸ 1.2 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್‌ನ ಚೊಚ್ಚಲ ಪ್ರವೇಶವನ್ನು ಅನುಸರಿಸಿ, ಈ ಮಾದರಿಗಳೊಂದಿಗೆ ಹೈಬ್ರಿಡ್ ಆವೃತ್ತಿಗಳ ಸರಣಿಯನ್ನು ವಿಸ್ತರಿಸಲಿದೆ. ಈ ಮಾದರಿಗಳು ಹೆಚ್ಚಿನ ಮೈಲೇಜ್ ಗಳನ್ನು ಹೊಂದಿರಲಿದೆ.

ಹೆಚ್ಚು ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳ ನಿಯಮಗಳಿಂದ ಮಾರುತಿಯ ಡೀಸೆಲ್ ಕಾರುಗಳು ಸಂಪೂರ್ಣವಾಗಿ ನಿರ್ಗಮಿಸಲು ಮತ್ತು CNG ತಂತ್ರಜ್ಞಾನದ ಮೇಲೆ ಹೆಚ್ಚು ಕೇಂದ್ರೀಕರಿಸಲು ಕಾರಣವಾಯಿತು. CNG ಇಂಧನದ ಬೆಲೆಯು ಸ್ಥಿರವಾಗಿ ಹೆಚ್ಚುತ್ತಿರುವ ಕಾರಣ, ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದ ಪ್ರಗತಿಗಳು ಮತ್ತು ಸ್ಥಳೀಕರಣವು ಬ್ರ್ಯಾಂಡ್‌ನ ಭವಿಷ್ಯವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೀಗಾಗಿ, ಬಲೆನೊ, ಬ್ರೆಜ್ಜಾ ಮತ್ತು ಇತ್ತೀಚೆಗೆ ಪರಿಚಯಿಸಲಾದ ಫ್ರಾಂಕ್ಸ್‌ನಂತಹ ಹೆಚ್ಚು ಮಾರಾಟವಾಗುವ ಮಾದರಿಗಳು ಈ ತಂತ್ರಜ್ಞಾನವನ್ನು ಪಡೆಯುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Sunday, May 28, 2023, 11:30 [IST]
English summary
Upcoming strong hybrid cars in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+