Upcoming SUVs: 10-15 ಲಕ್ಷದೊಳಗೆ ಬರಲಿರುವ ಟಾಟಾ, ಮಹೀಂದ್ರಾ, ಮಾರುತಿ ಸುಜುಕಿಯ ಟಾಪ್ ಎಸ್‌ಯುವಿಗಳು
ಭಾರತದ ವಾಹನ ಮಾರುಕಟ್ಟೆಯಲ್ಲಿ ಮಿಡ್-ಸೈಜ್ ಎಸ್‌ಯುವಿಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸುತ್ತಿವೆ. ಇದೀಗ, ಮುಂದಿನ ಕೆಲವೇ ತಿಂಗಳಲ್ಲಿ ಟಾಟಾ, ಮಹೀಂದ್ರಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಈ ವಿಭಾಗದಲ್ಲಿ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ರೂ.10-15 ಲಕ್ಷದೊಳಗೆ ಖರೀದಿಗೆ ಸಿಗಲಿವೆ.
ಮೊದಲಿಗೆ ಟಾಟಾ, ತನ್ನ ಗ್ರಾಹಕರಿಗಾಗಿ ಆಗಸ್ಟ್ ತಿಂಗಳಲ್ಲಿ ನವೀಕರಿಸಿದ ನೆಕ್ಸಾನ್ ಬಿಡುಗಡೆ ಮಾಡಲಿದೆ. ಆ ಬಳಿಕ, ವರ್ಷಾಂತ್ಯದೊಳಗೆ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳನ್ನು ಲಾಂಚ್ ಮಾಡಬಹುದು. ಹಬ್ಬಗಳ ಸೀಸನ್ ವೇಳೆಗೆ ಶೋರೂಂ ತಲುಪುವ ಸಾಧ್ಯತೆಯಿದ್ದು, ಇವುಗಳ ಮುಂಭಾಗ ಹಾಗೂ ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಜೊತೆಗೆ ಹೊಸದಾದ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಬಹುದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಸಫಾರಿ ರೂ.15.65 ಲಕ್ಷದಿಂದ ರೂ.25.02 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 14.08 - 16.14 kmpl ಮೈಲೇಜ್ ನೀಡಲಿದೆ. ಹ್ಯಾರಿಯರ್ ಎಸ್‌ಯುವಿಯನ್ನು ಗ್ರಾಹಕರು ರೂ.15 ಲಕ್ಷದಿಂದ 24.07 ಲಕ್ಷ ಬೆಲೆಯಲ್ಲಿ ಕೊಂಡುಕೊಳ್ಳಬಹುದು.
ಮಹೀಂದ್ರಾ, ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, 2024ರ ಆರಂಭ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ 5 ಡೋರ್ ಥಾರ್ ಎಸ್‌ಯುವಿಯನ್ನು ಬಿಡುಗಡೆ ಮಾಡಬಹುದು. ಇದು, 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಾಂಚ್ ಆಗಬಹುದು. ಜೊತೆಗೆ 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿರುವ ಸಾಧ್ಯತೆ ಇದ್ದು, ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ 5 ಡೋರ್ ಗೆ ಭಾರೀ ಪೈಪೋಟಿ ನೀಡಬಹುದು.
ಪ್ರಸ್ತುತ, ರೂ.10.54 ಲಕ್ಷದಿಂದ 16.78 ಲಕ್ಷ ಬೆಲೆಯಲ್ಲಿ ಮಹೀಂದ್ರಾ ಥಾರ್ 3 ಡೋರ್ ಖರೀದಿಗೆ ಸಿಗಲಿದ್ದು, ಇದರ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 150 PS ಪವರ್, 320 Nm ಪೀಕ್ ಟಾರ್ಕ್, 2.2 ಲೀಟರ್ ಡೀಸೆಲ್ ಎಂಜಿನ್, 130 PS ಪವರ್, 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನುವಲ್, 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದೆ.
ಮುಂದಿನ ಒಂದೆರಡು ತಿಂಗಳಲ್ಲಿ ಮಾರುತಿ ಸುಜುಕಿ, ಜಿಮ್ನಿ 5 ಡೋರ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ದೆಹಲಿಯಲ್ಲಿ ಜನವರಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಈ ಎಸ್‌ಯುವಿಯನ್ನು ಕಂಪನಿ ಅನಾವರಣ ಮಾಡಿತ್ತು. ಅಂದಿನಿಂದಲೇ ದೊಡ್ಡ ಮಟ್ಟದ ನೀರಿಕ್ಷೆ ಹುಟ್ಟು ಹಾಕಿದ್ದ ಜಿಮ್ನಿ 5 ಡೋರ್, ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆಯುವ ಮೂಲಕ ದೊಡ್ಡದೊಂದು ಸಾಧನೆ ಮಾಡಿದ್ದು, ಬಹುತೇಕ ರೂ.12 ಲಕ್ಷ ಬೆಲೆಗೆ ಖರೀದಿಗೆ ಸಿಗಬಹುದು.
ಜಿಮ್ನಿ 5 ಡೋರ್ ಎಂಜಿನ್ ಹಾಗೂ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 105 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಭಾರತದ ಮಿಡ್ ಸೈಜ್ ಎಸ್‌ಯುವಿ ವಿಭಾಗಕ್ಕೆ ದಕ್ಷಿಣ ಕೊರಿಯಾ ಕಂಪನಿ ಕಿಯಾದ ನವೀಕರಿಸಿದ 'ಸೆಲ್ಟೋಸ್' ಕೂಡ ಎಂಟ್ರಿ ಕೊಡಲು ಸಿದ್ಧವಾಗದೆ. ಬಹುತೇಕ ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಬಹುದು. ಇದರ ಮುಂಭಾಗ ಹಾಗೂ ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಆಕರ್ಷಕ ವೈಶಿಷ್ಟ್ಯವನ್ನು ಹೊಂದಿರುವ ಸಾಧ್ಯತೆಯಿದ್ದು, ಇದರಲ್ಲಿ 160 PS ಗರಿಷ್ಠ ಪವರ್ ಉತ್ಪಾದಿಸುವ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಉಪಯೋಗ ಮಾಡಿಲಾಗಿದೆಯಂತೆ.


Click it and Unblock the Notifications