Upcoming Suvs: ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯಲು ರೆಡಿಯಾಗುತ್ತಿವೆ ಟಾಟಾ, ಕಿಯಾ ಎಸ್‌ಯುವಿಗಳು.. ಫುಲ್ ಫಿದಾ

ಭಾರತದ ಮಾರುಕಟ್ಟೆಯಲ್ಲಿ ಮುಂಬರುವ ತಿಂಗಳಲ್ಲಿ ಜನಪ್ರಿಯ ಕಾಂಪ್ಯಾಕ್ಟ್ ಹಾಗೂ ಮಿಡ್-ಸೈಜ್ ನವೀಕರಿಸಿದ ಎಸ್‌ಯುವಿಗಳು ಬಿಡುಗಡೆಯಾಗಲಿವೆ. ಪ್ರಮುಖವಾಗಿ ಟಾಟಾದ ನೆಕ್ಸಾನ್, ಹ್ಯಾರಿಯರ್, ಸಫಾರಿ, ಕಿಯಾದ ಸೆಲ್ಟೋಸ್, ಸೋನೆಟ್ ಮತ್ತು ಹ್ಯುಂಡೈನ ಕ್ರೆಟಾ ಇದ್ದು, ಕಾಸ್ಮೆಟಿಕ್ ಹಾಗೂ ಕೆಲವೊಂದು ನವೀನ ವೈಶಿಷ್ಟ್ಯವನ್ನು ಪಡೆದುಕೊಂಡಿವೆ.

ಮೊದಲಿಗೆ ಟಾಟಾದ ಬಹುಬೇಡಿಕೆಯ ನೆಕ್ಸಾನ್ ಎಸ್‌ಯುವಿ ಬಗ್ಗೆ ಮಾತನಾಡೋಣ. ನವೀಕರಿಣಗೊಳ್ಳುತ್ತಿರುವ ಈ ಕಾರು, ಹಲವು ಬಾರಿ ದೇಶದ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವ ಕಂಡುಬಂದಿದ್ದು, ಬಹುತೇಕ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ICE ಚಾಲಿತ Curvv ಕಾನ್ಸೆಪ್ಟ್ ಕಾರು ಹೊಂದಿರುವಂತೆ ಫ್ರಂಟ್, ರೇರ್ ಡಿಸೈನ್ ಹೊಂದಿರಲಿದ್ದು, ಅದರಲ್ಲೂ ಆಕರ್ಷಕವಾದ ಫುಲ್ ವಿಡ್ತ್ LED ಲೈಟ್ ಬಾರ್ ಅನ್ನು ಪಡೆದಿರಲಿದೆ.

Upcoming Suvs: ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯಲು ರೆಡಿಯಾಗುತ್ತಿವೆ ಟಾಟಾ, ಕಿಯಾ ಎಸ್‌ಯುವಿಗಳು.. ಫುಲ್ ಫಿದಾ

ನೆಕ್ಸಾನ್ ಫೇಸ್‌ಲಿಫ್ಟ್‌ ಒಳಭಾಗವು ಸಾಕಷ್ಟು ಅತ್ಯಾಧುನಿಕವಾಗಿದ್ದು, ದೊಡ್ಡದಾದ ಟಚ್‌ಸ್ಕ್ರೀನ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 2 ಸ್ಪೋಕ್ ಸ್ಟೀರಿಂಗ್ ವೀಲ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. 125 hp ಪವರ್ ಉತ್ಪಾದಿಸುವ ಹೊಸದಾದ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರಬಹುದು. ಬೆಲೆ ಸಂಬಂಧ ಯಾವುದೇ ಖಚಿತ ಮಾಹಿತಿ ಇಲ್ಲ. ರೂ.8.50 - 15.00 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು.

ಟಾಟಾದ ಮತ್ತೊಂದು ಜನಪ್ರಿಯ ಎಸ್‌ಯುವಿಯಾಗಿರುವ ಫೇಸ್‌ಲಿಫ್ಟ್‌ ಹ್ಯಾರಿಯರ್, ಅಕ್ಟೋಬರ್ ಅಥವಾ ದೀಪಾವಳಿ ಹಬ್ಬದ ವೇಳೆಗೆ ಖರೀದಿಗೆ ಸಿಗಬಹುದು. ಇದು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್‌ ಅನ್ನು ಹೊಂದಲಿದೆ. 170 hp ಪವರ್ ಉತ್ಪಾದಿಸುವ ಸಾಮರ್ಥ್ಯವಿರುವ 2.0 ಲೀಟರ್ ಡೀಸೆಲ್ ಎಂಜಿನ್, 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆ ಇದೆ.

ಈಗಾಗಲೇ ನವೀಕರಿಸಿದ ಸಫಾರಿ ಎಸ್‌ಯುವಿಯನ್ನು ದೇಶೀಯ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಿಸಲಾಗಿದ್ದು, ಬಹುತೇಕ ಹ್ಯಾರಿಯರ್ ಹೊಂದಿವಂತೆಯೇ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಕೂಡ ಹೊಸದಾದ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆಯುವ ನೀರಿಕ್ಷೆ ಇದ್ದು, ಅಕ್ಟೋಬರ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಬಹುದು. ಆದರೆ, ಬೆಲೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಂದಾಜು ರೂ. 16.00 - 17.00 ಲಕ್ಷ ಆಸುಪಾಸಿನಲ್ಲಿ ಸಿಗಬಹುದು.

ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಕಿಯಾ, ನವೀಕರಿಸಿದ ಸೆಲ್ಟೋಸ್ ಆವೃತ್ತಿಯನ್ನು ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಇದು ಆಕರ್ಷಕ ಗ್ರೀಲ್, ಹೊಸದಾದ ಹೆಡ್ ಲ್ಯಾಂಪ್ ಪಡೆದಿರಲಿದ್ದು, ಫ್ರಂಟ್, ರೇರ್ ಭಾಗವು ಮತ್ತಷ್ಟು ಅತ್ಯಾಧುನಿಕವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಹೊಂದಿರಲಿದೆ. ಹೊಸದಾದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಲಿದೆ.

ಕಿಯಾ ಸೋನೆಟ್ ಕೂಡ ಸಾಕಷ್ಟು ನವೀಕರಣದೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, 1.2-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಈ ಕಾರಿನ ಬೆಲೆ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರೂ.8.00 ಲಕ್ಷದಿಂದ ರೂ.15.00 ಲಕ್ಷ ದರದಲ್ಲಿ ಸಿಗಬಹುದು.

ಹ್ಯುಂಡೈ ಕ್ರೆಟಾ, ಆಕರ್ಷಕ ನವೀಕರಣಗಳೊಂದಿಗೆ ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿ ಲಾಂಚ್ ಆಗಬಹುದು. ಇದು, ಸುರಕ್ಷತೆಯ ದೃಷ್ಟಿಯಿಂದ ಮತ್ತಷ್ಟು ಅತ್ಯಾಧುನಿಕವಾಗಿರಲಿದ್ದು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಲಿದೆ. 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಿಂದಿನ ಮಾದರಿಯಂತೆ ಇದ್ದು, ಹೊಸದಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

Article Published On: Wednesday, May 10, 2023, 10:52 [IST]
English summary
Upcoming suvs indian market next 9 months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+