ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರುತ್ತಿವೆ ಸೂಪರ್ ಎಸ್‌ಯುವಿಗಳು

ದೇಶೀಯ ಮಾರುಕಟ್ಟೆಯಲ್ಲಿ ಸಬ್ 4-ಮೀಟರ್ ಎಸ್‌ಯುವಿಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಸದ್ಯ, ಈ ವಿಭಾಗದಲ್ಲಿ ಟಾಟಾ ಪಂಚ್ ಮೊದಲ ಸ್ಥಾನದಲ್ಲಿದ್ದು, ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ರೂ.15 ಲಕ್ಷ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸದೊಂದಿಗೆ ಮುಂಬರಲಿರುವ 3 ಎಸ್‌ಯುವಿಗಳು ಯಾವುದೆಂದು ತಿಳಿಯೋಣ.

ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ 'ಹ್ಯುಂಡೈ', ಈ ವರ್ಷದ ಕೊನೆಯಲ್ಲಿ ಹೊಚ್ಚ ಹೊಸ ಎಸ್‌ಯುವಿಯೊಂದನ್ನು ಭಾರತದ ಮಾರುಕಟ್ಟೆ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಂಪನಿಯು 'Ai3' ಎಂಬ ಕೋಡ್ ನೇಮ್ ಹೊಂದಿರುವ ಮೈಕ್ರೋ ಎಸ್‌ಯುವಿಯನ್ನು ಕೊರಿಯಾದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷೆ ನಡೆಸಿದೆ. ಇದು ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರುತ್ತಿವೆ ಸೂಪರ್ ಎಸ್‌ಯುವಿಗಳು

ಮುಂಬರಲಿರುವ ಈ ಎಸ್‌ಯುವಿ ಲಾಂಚ್ ಆದ ಮೇಲೆ ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ. 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ. ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಇದರ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಬಹುದು. ರೂ.15 ಲಕ್ಷ ಬೆಲೆ ಅಸುಪಾಸಿನಲ್ಲಿ ದೊರೆಯಲಿದೆ.

ಮಾರುತಿ ಸುಜುಕಿ ಕಂಪನಿ 'ಫ್ರಾಂಕ್ಸ್' ಎಸ್‌ಯುವಿಯನ್ನು ಮುಂದಿನ ತಿಂಗಳು (ಏಪ್ರಿಲ್) ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಈ ಎಸ್‌ಯುವಿಯನ್ನು ಅನಾವರಣ ಮಾಡಲಾಗಿತ್ತು. ಅಂದಿನಿಂದಲೇ ಬುಕಿಂಗ್ ಕೂಡ ಆರಂಭಿಸಿತ್ತು. ಆಸಕ್ತ ಗ್ರಾಹಕರು, ರೂ.11,000 ಮೊತ್ತ ಪಾವತಿಸುವ ಮೂಲಕ ಆನ್‌ಲೈನ್ ಅಥವಾ ನೆಕ್ಸಾ (NEXA ) ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು.

ಭಾರತದಲ್ಲಿ ತನ್ನದೇ ಹವಾ ಸೃಷ್ಟಿಸಲು ಬರುತ್ತಿವೆ ಸೂಪರ್ ಎಸ್‌ಯುವಿಗಳು

ಬಹುತೇಕ ಈ ಫ್ರಾಂಕ್ಸ್‌ ಎಸ್‌ಯುವಿ ರೂ.15 ಲಕ್ಷ ದರದೊಳಗೆ ಖರೀದಿಗೆ ಲಭ್ಯವಾಗಲಿದೆ. 1.2-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 89 bhp ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 100 bhp ಪವರ್, 148 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನುವಲ್/ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರಲಿದೆ.

ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ತನ್ನ ನವೀಕರಿಸಿದ ನಿಕ್ಸನ್ ಎಸ್‌ಯುವಿಯನ್ನು ಈಗಾಗಲೇ ರಸ್ತೆಗಳಲ್ಲಿ ಪರೀಕ್ಷಿಸಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಿದೆ. ಇದರ ಒಳಭಾಗ ಹಾಗೂ ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದಿರಲಿದೆ. ಜೊತೆಗೆ ಪವರ್ ಫುಲ್ ಎಂಜಿನ್ ಆಯ್ಕೆಯಲ್ಲಿ ಸಿಗಬಹುದು. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ಎಸ್‌ಯುವಿ ಒಳಭಾಗದಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ಪಡೆದಿರಲಿದೆ ಎಂದು ವರದಿಯಾಗಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ನೂತನ ಡ್ಯಾಶ್‌ಬೋರ್ಡ್ ಹೊಂದಿರುತ್ತದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 125 PS ಗರಿಷ್ಠ ಪವರ್, 225 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಡ್ಯುಯಲ್-ಕ್ಲಚ್ ಆರೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದಿರಲಿದೆ.

ಒಟ್ಟಾರೆ, ಹ್ಯುಂಡೈ, ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಕಂಪನಿಗಳು ವಿವಿಧ ಎಸ್‌ಯುವಿಗಳನ್ನು ಲಾಂಚ್ ಮಾಡಲು ಹೊರಟಿದ್ದು, ಅವು ಭಾರತ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಬಹುದು. ಜೊತೆಗೆ ಆಕರ್ಷಕ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಮೂಲಕ ವಿವಿಧ ಕಂಪನಿ ಕಾರುಗಳಿಗೆ ಭಾರೀ ಪೈಪೋಟಿ ನೀಡಬಹುದು. ಈ ಬಗ್ಗೆ ಸ್ಫಷ್ಟ ಮಾಹಿತಿ ಇವು ಬಿಡುಗಡೆಯಾದ ಮೇಲೆ ತಿಳಿಯಲಿದೆ.

Article Published On: Sunday, March 19, 2023, 12:00 [IST]
English summary
Upcoming suvs under 15 lakhs details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+