ಭರ್ಜರಿ ರೇಂಜ್, ಅಗ್ಗದ ಬೆಲೆಯಲ್ಲಿ ಬರಲಿವೆ ಟಾಟಾ ಎಲೆಕ್ಟ್ರಿಕ್ ಕಾರುಗಳು: ವಿದೇಶಿ ಕಾರುಗಳಿಗೆ ನಡುಕ ಶುರು
ಭಾರತದಲ್ಲಿ ಟಾಟಾ ಕಾರುಗಳಿಗೆ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು, ಟಾಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಭಾರತದಲ್ಲಿ ಟಾಟಾ ಬಿಡುಗಡೆಗೊಳಿಸಲಿರುವ ಪ್ರಮುಖ ಟಾಟಾ ಎಲೆಕ್ಟ್ರಿಕ್ ಕಾರುಗಳ (Tata Electric Cars) ಬಗ್ಗೆ ಮಾಹಿತಿ ಇಲ್ಲಿದೆ.
ಟಾಟಾ ಪಂಚ್ ಇವಿ: ಪಂಚ್ ಇವಿಯಲ್ಲಿ ಕಂಡು ಬಂದಿರುವ ಪ್ರಮುಖ ಬದಲಾವಣೆ ಎಂದರೆ, ಚಾರ್ಜಿಂಗ್ ಸಾಕೆಟ್ ಅನ್ನು ಮುಂಭಾಗ ಪಡೆದಿರುವುದು. ಜೊತೆಗೆ ಅಲಾಯ್ ವೀಲ್ಸ್ ಹೊಂದಿರುವ ನೀರಿಕ್ಷೆಯಿದೆ. ಇದರೊಟ್ಟಿಗೆ, ಕ್ಯಾಬಿನ್ ಒಳಭಾಗದಲ್ಲಿ ಅದ್ಬುತ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದ್ದು, ನವೀಕರಿಸಿದ ನೆಕ್ಸಾನ್ ಕಾರಿನಂತೆ 10.25 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಪಡೆಡಿರುವ ನೀರಿಕ್ಷೆಯಿದೆ.

ಈ ಟಾಟಾ ಪಂಚ್ ಇವಿ, ಟಿಗೂರ್ ಇವಿ ಹಾಗೂ ಟಿಯಾಗೊ ಇವಿಯಂತೆ 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 300 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಬಹುದು. ಜೊತೆಯಲ್ಲಿ 7.2 kW ಎಸಿ ಚಾರ್ಜರ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು.
ಟಾಟಾ ಹ್ಯಾರಿಯರ್ ಇವಿ: ಟಾಟಾ ಮೋಟಾರ್ಸ್ ಹ್ಯಾರಿಯರ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ ಮತ್ತು ಈ ಮುಂಬರುವ ಮಾದರಿಯು ಒಮೆಗಾ-ಆರ್ಕ್ ಪ್ಲಾಟ್‌ಫಾರ್ಮ್‌ನ ಹೆಚ್ಚು-ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ಮಾದರಿಯು 60kWh ಬ್ಯಾಟರಿ ಪ್ಯಾಕ್ ಮತ್ತು ಡ್ಯುಯಲ್ ಮೋಟಾರ್ ಸೆಟಪ್ನೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ.

ಟಾಟಾ ಸಫಾರಿ ಇವಿ: ಟಾಟಾ ಸಫಾರಿ ಇವಿ ಪ್ರಸ್ತುತ ಮುಂಬರುವ ಟಾಟಾ ಹ್ಯಾರಿಯರ್ ಇವಿ ಜೊತೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತೆಯೇ, ಟಾಟಾ ಹ್ಯಾರಿಯರ್ ಇವಿಯಂತೆ, ಟಾಟಾ ಸಫಾರಿ ಇವಿಯು 60kWh ಬ್ಯಾಟರಿ ಪ್ಯಾಕ್ ಮತ್ತು ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಹೊಂದುವ ನಿರೀಕ್ಷೆಯಿದೆ. ಸಾಮಾನ್ಯ ಟಾಟಾ ಸಫಾರಿ ಎಸ್‍ಯುವಿಗೆ ಭಾರೀ ಬೇಡಿಕೆಯನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಟಾಟಾ ಸಫಾರಿ ಎಸ್‌ಯುವಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಿದ್ದು, ಇದು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡೋರ್ ಓಪನ್ ಅಲರ್ಟ್ ಒಳಗೊಂಡಂತೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಟಾಟಾ ಮೋಟಾರ್ಸ್ ಕರ್ವ್ ಇವಿ: ಎಸ್‍ಯುವಿ ಉತ್ಪಾದನೆಗೆ ಪ್ರವೇಶಿಸಿದಾಗ ಅದರೊಂದಿಗೆ ನೀಡಲಾಗುವ ಪವರ್‌ಟ್ರೇನ್ ಆಯ್ಕೆಗಳ ಕುರಿತು ಯಾವುದೇ ವಿವರಗಳನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಇನ್ನು ಟಾಟಾ ಮೋಟಾರ್ಸ್ ಕಂಪನಿಯು Curvv ಟಾಟಾದ Gen 2 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ಮುಂಬೈ ಸಂಸ್ಥೆಯು ಬಹಿರಂಗಪಡಿಸಿದ ಯೋಜನೆಗಳ ಪ್ರಕಾರ ಇದು ಒಂದೇ ಚಾರ್ಜ್‌ನಲ್ಲಿ 400 ಮತ್ತು 500 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೇವೆ.
ಟಾಟಾ ಸಿಯೆರಾ ಇವಿ: ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದಲ್ಲಿ, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸಾಂಪ್ರದಾಯಿಕ ಟೈಲ್‌ಗೇಟ್‌ಗಳಂತೆ ಸಮಗ್ರ ರೂಫ್ ಸ್ಪಾಯ್ಲರ್ ಅನ್ನು ಗೋಚರಿಸುವಂತಿದೆ. ಹೊಸ ಟಾಟಾ ಸಿಯೆರಾ ಎಸ್‍ಯುವಿಯಲ್ಲಿ ಡ್ಯಾಶ್‌ನಲ್ಲಿ ಕಂಡುಬರುವ ಡ್ಯುಯಲ್ ಡಿಸ್ ಪ್ಲೇ ಸೆಟಪ್‌ನೊಂದಿಗೆ ಒಳಾಂಗಣಗಳು ಹೆಚ್ಚು ಸಾಂಪ್ರದಾಯಿಕವಾಗಿ ಕಾಣುತ್ತವೆ, ಇದು ಉಳಿದ ಕ್ಯಾಬಿನ್‌ನೊಂದಿಗೆ ಡ್ಯುಯಲ್-ಟೋನ್ ನೋಟವನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಸಿಯೆರಾ ಇವಿಯ ನಿಜವಾದ ಪವರ್‌ಟ್ರೇನ್ ಮತ್ತು ಅದರ ಬಿಡುಗಡೆಯ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿಗಳನ್ನು ನೀಡಲಾಗಿಲ್ಲ. ಈ ಎಸ್‍ಯುವಿಯಲ್ಲಿ ಪವರ್‌ಟ್ರೇನ್ ಅನ್ನು ಹ್ಯಾರಿಯರ್ ಇವಿ ಮತ್ತು ಸಫಾರಿ ಇವಿ ಯಂತಹವುಗಳೊಂದಿಗೆ ಹಂಚಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಹೊಸ ಟಾಟಾ ಸಿಯೆರಾ ಇವಿ ಎಸ್‍ಯುವಿಯ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications