ದೇಶದಲ್ಲಿ ಧೂಳೆಬ್ಬಿಸಲು ಬರಲಿವೆ ಮಹೀಂದ್ರಾ, ಹೋಂಡಾ, ಕಿಯಾ ಎಸ್‌ಯುವಿಗಳು

ಭಾರತದ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಎಸ್‌ಯುವಿಗಳು ಈ ವರ್ಷವೇ ಬಿಡುಗಡೆಯಾಗಲಿವೆ. ಹೋಂಡಾ, ಕಿಯಾ ಹಾಗೂ ಮಹೀಂದ್ರಾದ ಬಹುನೀರಿಕ್ಷಿತ ಎಸ್‌ಯುವಿಗಳೇ ಬರಲಿದ್ದು, ಇವು ಯುವ ಖರೀದಿದಾರರನ್ನು ಆಕರ್ಷಿಸುವ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯನ್ನು ಹೊಂದಿರಲಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಬಹುತೇಕ ವರ್ಷದೊಳಗೆ ಹೋಂಡಾ ಕಂಪನಿಯು ತನ್ನ ಮಿಡ್-ಸೈಜ್ ಐದು ಆಸನಗಳ ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಹಲವು ಬಾರಿ ಇದರ ಸ್ಪೈ ಚಿತ್ರಗಳು ಬಹಿರಂಗಗೊಂಡಿವೆ. ಇದು ಹೋಂಡಾ ಸಿಟಿ ಮಿಡ್‌ಲೈಫ್ ಫೇಸ್‌ಲಿಫ್ಟ್ ಪಡೆದಿರುವ ಫ್ಲಾಟ್ ಫಾರಂನ್ನು ಆಧರಿಸಿರಲಿದೆ ಎಂದು ವರದಿಯಾಗಿದ್ದು, 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ದೇಶದಲ್ಲಿ ಧೂಳೆಬ್ಬಿಸಲು ಬರಲಿವೆ ಮಹೀಂದ್ರಾ, ಹೋಂಡಾ, ಕಿಯಾ ಎಸ್‌ಯುವಿಗಳು

ಮಹೀಂದ್ರಾ ಕಂಪನಿ ತನ್ನ ಆಫ್-ರೋಡ್ ಎಸ್‌ಯುವಿ 5 - ಡೋರ್ ಥಾರ್‌ನ್ನು ಸಾಕಷ್ಟು ಬಾರಿ ಭಾರತದ ರಸ್ತೆಗಳಲ್ಲಿ ಪರೀಕ್ಷೆ ನಡೆಸಿದೆ. ಸ್ಕಾರ್ಪಿಯೋ ಎನ್ ನಂತೆಯೇ ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ನೂತನ 5 - ಡೋರ್ ಥಾರ್ ಕೂಡ ಹೊಂದಿರಲಿದೆ. 2.2 ಲೀಟರ್ ಡಿಸೇಲ್ ಹಾಗೂ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಅಥವಾ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.
ಆರಂಭಿಕ ಬೆಲೆ ರೂ.10 ರಿಂದ 12 ಲಕ್ಷ ಆಸುಪಾಸಿನಲ್ಲಿರಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ 3 - ಡೋರ್ ಖರೀದಿಗೆ ದೊರೆಯಲಿದ್ದು, ರೂ.9.99 - 16.49 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಎಂಜಿನ್ ಬಗ್ಗೆ ಹೇಳುವುದಾದರೆ, 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಹಾಗೂ RWD (ರೇರ್ ವೀಲ್ ಡ್ರೈವ್) ಆವೃತ್ತಿ 1.5 ಲೀಟರ್ ಡೀಸೆಲ್ ಎಂಜಿನ್ ಪಡೆದಿದೆ. 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಲ್‌ಇಡಿ DRLs ಹಾಗೂ ಹ್ಯಾಲೊಜೆನ್ ಹೆಡ್‌ಲೈಟ್ಸ್ ನ್ನು ಹೊಂದಿದೆ.

ಭಾರತದಲ್ಲಿ ಈ ವರ್ಷವೇ ಮಹೀಂದ್ರಾದ ಕೈಗೆಟುಕುವ ಬೆಲೆಯ ಎಸ್‌ಯುವಿ ಬೊಲೆರೋ ನಿಯೋ ಪ್ಲಸ್ ಲಾಂಚ್ ಆಗಬಹುದು. ಈಗಾಗಲೇ ಸ್ಪೈ ಚಿತ್ರಗಳು ಇಂಟರ್ ನೆಟ್ ನಲ್ಲಿ ಕಾಣಿಸಿಕೊಂಡಿವೆ. ಇದು ಏಳು ಆಸನ ವ್ಯವಸ್ಥೆಯನ್ನು ಹೊಂದಿರಬಹುದು. ಹೊರಭಾಗ ಹಾಗೂ ಒಳಭಾಗದ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, ಯುವ ಖರೀದಿದಾರರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಇದರ 2.2-ಲೀಟರ್ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್, 120 PS ಪವರ್ ಉತ್ಪಾದಿಸಬಹುದು.

ಪ್ರಸ್ತುತ, ಬೊಲೆರೋ ನಿಯೋ ರೂ.9.63 ಲಕ್ಷದಿಂದ ರೂ.12.14 ಲಕ್ಷ ಬೆಲೆಯಲ್ಲಿ ಸಿಗಲಿದ್ದು, 17.29 kmpl ಮೈಲೇಜ್ ನೀಡಲಿದೆ. ಇದರ 1.5-ಲೀಟರ್ ಡೀಸೆಲ್ ಎಂಜಿನ್ 100 PS ಪವರ್, 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು. ಸುರಕ್ಷತೆಯ ದೃಷ್ಟಿಯಿಂದ ಡ್ಯೂಯಲ್ ಏರ್ ಬಾಗ್ಸ್, ABS (ಆಂಟೀಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮುಂದಿನ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ನವೀಕರಿಸಿದ 'ಕಿಯಾ ಸೆಲ್ಟೋಸ್' ಸ್ಪೈ ಚಿತ್ರಗಳು ಈಗಾಗಲೇ ಕಾಣಿಸಿಕೊಂಡಿದೆ. ಫ್ರಂಟ್ ಫಾಸಿಯಾ ಸೇರಿದಂತೆ ಒಟ್ಟಾರೆ ಹೊರಭಾಗದ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣಿಗಳನ್ನು ಪಡೆದಿರಲಿದೆ. ಒಳಭಾಗದಲ್ಲಿಯೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಹೊಸದಾದ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 160 PS ಗರಿಷ್ಠ ಪವರ್ 253 Nm ಪೀಕ್ ಟಾರ್ಕ್ ಉತ್ಪಾದಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, March 22, 2023, 8:30 [IST]
English summary
Upcomming mahindra kia honda suvs in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+