ಟೋಯೋಟಾದ ಈ ವಾಹನಕ್ಕೆ ಲಕ್ಷ ಲಕ್ಷ ರೂಗಳ ಭರ್ಜರಿ ಡಿಸ್ಕೌಂಟ್‌: ಇಲ್ಲಿದೆ ಸಂಪೂರ್ಣ ಮಾಹಿತಿ

ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಟೋಯೊಟಾದ ಕಾರುಗಳಿಗೆ ದೊಡ್ಡ ಮೊತ್ತದ ಡಿಸ್ಕೌಂಟ್‌ಗಳು ಸಿಗುವುದೇ ಕಮ್ಮಿ. ಅದಕ್ಕೆ ಕಾರಣ ಹಲವಿರಬಹುದು. ಡಿಸ್ಕೌಂಟ್‌ ಇಲ್ಲದಿದ್ದರೂ ಪರ್ವಾಗಿಲ್ಲ, ನಮಗೇ ಟೊಯೊಟಾ ಕಾರುಗಳೇ ಬೇಕು ಎನ್ನುವವರು ಒಂದು ಕಡೆಯಾದರೆ, ಡಿಸ್ಕೌಂಟ್‌ಗಿಂತ ಕಾರಿನ ಗುಣಮಟ್ಟ ಮುಖ್ಯ ಎನ್ನುವವರು ಮತ್ತೊಂದು ಕಡೆ.

ಇದೀಗ ಟೊಯೋಟಾ ಪ್ರೇಮಿಗಳಿಗೆ ಸುವರ್ಣಾವಕಾಶವೊಂದು ಕೂಡಿ ಬಂದಿದೆ. ಟೋಯೋಟಾ ಕಂಪನಿಯು ತನ್ನ ಕಾರೊಂದಕ್ಕೆ ಲಕ್ಷ ಲಕ್ಷ ರೂಗಳ ವರೆಗೆ ಡಿಸ್ಕೌಂಟನ್ನು ಘೋಷಣೆ ಮಾಡಿದೆ. ಹೌದು, ನಂಬಲು ಕಷ್ಟವಾದರೂ ಟೋಯೋಟಾವು ಹೈಲಿಕ್ಸ್‌ ಪಿಕ್‌ಅಪ್ ಟ್ರಕ್‌ (Toyota Hilux Pickup Truck) ಮೇಲೆ ಸುಮಾರು ಎರಡರಿಂದ ಮೂರು ಲಕ್ಷ ವರೆಗಿನ ಡಿಸ್ಕೌಂಟನ್ನು ಘೋಷನೆ ಮಾಡಿದೆ ಎಂದು ತಿಳಿದು ಬಂದಿದೆ.

Toyota Hilux Pickup Truck

ಈ ಟೋಯೋಟಾ ಹೈಲಿಕ್ಸ್‌ ಪಿಕ್‌ಟಪ್‌ ಟ್ರಕ್‌ನ ಆವೃತ್ತಿಗಳಲ್ಲಿ ಅತ್ಯಂತ ಪ್ರೀಮಿಯಂ ವೇರಿಯಂಟ್‌ಗೆ ಅತೀ ಹೆಚ್ಚಿನ ಡಿಸ್ಕೌಂಟ್‌ ದೊರಕಲಿದೆ ಎಂದು ಕಂಪನಿ ತಿಳಿಸಿದೆ. ಬೆಂಗಳೂರಿನ ಕೆಲವೊಂದು ಶೋರೂಮ್‌ನಲ್ಲಿ ಎರಡು ಲಕ್ಷದವರೆಗೆ ಮತ್ತು ಮಂಗಳೂರಿನ ಯೂನೈಟೆಡ್‌ ಟೊಯೋಟಾದಲ್ಲಿ ಒಂದು ಲಕ್ಷದ ಆಫರ್‌ ಲಭ್ಯವಿದೆ. ಕೆಲವು ಉತ್ತರ ಭಾರತದ ಡೀಲರ್‌ಗಳು ಇದಕ್ಕೂ ಹೆಚ್ಚಿನ ಆಫರ್‌ ಅನ್ನು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಟೋಯೋಟಾ ಹೈಲಿಕ್ಸ್‌ ಪಿಕ್‌ಟಪ್‌ ಟ್ರಕ್‌ನ ಬೆಲೆಯನ್ನು ನೋಡುವುದಾದರೆ 2022 ರಲ್ಲಿ ಲಾಂಚ್‌ ಆದ ಪಿಕ್‌ಟಪ್‌ ಟ್ರಕ್‌ ನ ಬೆಲೆ ಎಕ್ಸ್‌ ಶೋ ರೂಮ್‌ 33.99 ಲಕ್ಷ. ಇನ್ನು ಇದು ಭಾರತದಲ್ಲಿ ಲಾಂಚ್‌ ಆದ ಕೆಲವೇ ಸಮಯದಲ್ಲಿ ಪ್ರಸಿದ್ದಿಯಾಗಿದೆ. 2023 ರಲ್ಲಿ ಮತ್ತೆ ಇದರ ಬುಕಿಂಗ್‌ ಸ್ಟಾರ್ಟ್‌ ಆಗಿದ್ದು, ಲೈಫ್‌ಸ್ಟೈಲ್‌ ಪಿಕ್‌ಅಪ್‌ ಟ್ರಕ್‌ಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಈ ಸಂಧರ್ಭದಲ್ಲಿ ಕಾಣಬಹುದಾಗಿದೆ.

Toyota Hilux Pickup Truck

ಇನ್ನು ಡೀಲರ್‌ಶಿಪ್‌ಗಳು ತಮ್ಮಲ್ಲಿರುವ ಸ್ಟಾಕ್‌ಗಳನ್ನು ಖಾಲಿ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 2023 ರಲ್ಲಿ ಈ ಟೋಯೋಟಾ ಹೈಲಿಕ್ಸ್‌ ಪಿಕ್‌ಟಪ್‌ ಟ್ರಕ್‌ನ ಬೆಲೆಯಲ್ಲಿ ಮಾರ್ಪಾಡುಗಳಾಗಿದ್ದು, ಅದಕ್ಕಿಂತ ಮುಂಚೆ ತಮ್ಮಲ್ಲಿರುವ ಸ್ಟಾಕ್‌ಗಳನ್ನು ಖಾಲಿ ಮಾಡಲು ಇಷ್ಟು ದೊಡ್ಡ ಮೊತ್ತದ ಆಫರ್‌ ಅನ್ನು ನೀಡುತ್ತಿದ್ದಾರೆ.

ವರದಿಗಳ ಪ್ರಕಾರ ಟೊಯೋಟಾವು ಕಳೆದ ಮಾರ್ಚ್‌ ಅಂದರೆ ಮಾರ್ಚ್‌ 2022 ರಿಂದ ಇಲ್ಲಿಯವರೆಗೆ 1300 ಟೋಯೋಟಾ ಹೈಲಿಕ್ಸ್‌ ಪಿಕ್‌ಟಪ್‌ ಟ್ರಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಮೊತ್ತದ ಡಿಸ್ಕೌಂಟ್‌ ನೀಡುತ್ತಿರುವುದರಿಂದ ಭಾರತದಲ್ಲಿ ಇದರ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ.

ಟೋಯೋಟಾ ಹೈಲಿಕ್ಸ್‌ ಪಿಕ್‌ಟಪ್‌ ಟ್ರಕ್‌ನ ಎಲ್ಲಾ ವೇರಿಯೆಂಟ್‌ಗಳೂ 2.8 ಲೀಟರ್‌ನ ಫೋರ್‌ ಸಿಲಿಂಡರ್‌ ಎಂಜಿನ್‌ ಆಪ್ಷನ್‌ನೊಂದಿಗೆ ಬರುತ್ತಿದ್ದು, ಟೋಯೋಟಾ ಫಾರ್ಚ್ಯೂನರ್‌ನಲ್ಲಿ ಕಾಣಸಿಗುವ ಇಂಜಿನ್‌ ಅನ್ನೇ ಇಲ್ಲೂ ಬಳಸಲಾಗಿದೆ. ಇದು 6 ಸ್ಪೀಡ್‌ ಆಟೋಮ್ಯಾಟಿಕ್‌ ಮತ್ತು ಮ್ಯಾನುವಲ್ ಗೇರ್‌‌ ಟ್ರಾನ್ಸ್ಮಿಷನ್‌ ಆಯ್ಕೆಯಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 29, 2023, 14:49 [IST]
English summary
Upto rs 2 lakh discount on toyota hilux pickup truck in bangalore
Read more on ಟೋಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+