ಈ ಕಾರಿಗೆ ಕ್ಯೂ ಕಟ್ಟಿದ್ದಾರೆ ವಿಐಪಿಗಳು... SUV ನಂತಹ ವೈಶಿಷ್ಟ್ಯಗಳು... ಕಾರು ಬೇಕಂದ್ರೆ 1 ವರ್ಷ ಕಾಯಬೇಕು!
ಭಾರತೀಯ ಕಾರು ಉದ್ಯಮವನ್ನು ಬಹುತೇಕ ಎಸ್‌ಯುವಿಗಳೇ ಆಳುತ್ತಿವೆ. ಗ್ರಾಹಕರಿಂದ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸೆಗ್ಮೆಂಟ್‌ಗಳಲ್ಲೂ ಅತ್ಯುತ್ತಮ ಎಸ್‌ಯುವಿಗಳನ್ನು ನೀಡಲಾಗುತ್ತಿದೆ. ಈ ಮಟ್ಟದ ಬೇಡಿಕೆಯ ನಡುವೆಯೂ MPV ಸೆಗ್ಮೆಂಟ್‌ನಲ್ಲಿ ಕಾರೊಂದಕ್ಕೆ ಭಾರೀ ಬೇಡಿಕೆ ಇದೆ. ಆ ಕಾರು ಯಾವುದು ಎಂಬುದನ್ನು ಇಲ್ಲಿ ನೋಡೋಣ.
ಹೆಚ್ಚು ಸ್ಥಳಾವಕಾಶ ಮತ್ತು ಉತ್ತಮ ಆಸನ ಸೌಕರ್ಯ ಹೊಂದಿರುವ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಬೇಡಿಕೆಯಿದೆ. 7 ಆಸನಗಳ ಬಹುಪಯೋಗಿ ಕಾರುಗಳು (MPV ಗಳು) ಗ್ರಾಹಕರ ಈ ಅಗತ್ಯವನ್ನು ಪೂರೈಸುತ್ತವೆ. ಮೊದಲೇ ಹೇಳಿದಂತೆ ಎಸ್‌ಯುವಿಗಳಿಗೆ ಬೇಡಿಕೆಯಿದ್ದರೂ, ಅವಶ್ಯಕತೆಗೆ ತಕ್ಕಂತೆ ಎಂಪಿವಿಗಳನ್ನು ಸಹ ಉತ್ತಮವಾಗಿ ಖರೀದಿಸಲಾಗುತ್ತಿದೆ.

ಹಾಗಾಗಿಯೇ ಈ ಕಾರಿಗೆ ಬರೋಬ್ಬರಿ ಒಂದು ವರ್ಷ ಕಾಯಬೇಕು. ಭಾರತದಲ್ಲಿ MPV ಕಾರು ಮಾರುಕಟ್ಟೆಯೇನು ದೊಡ್ಡದಲ್ಲ ಆದರೆ ಕೆಲವು ಕಾರುಗಳು ದಶಕಗಳಿಂದ ವಿಭಾಗವನ್ನು ಆಳುತ್ತಿವೆ. ಅಂತಹ ಒಂದು ಕಾರು toyota innova hycross, ಅದರ ಪ್ರೀಮಿಯಂ ಮಾಡೆಲ್ 'ಹೈ ಕ್ರಾಸ್' ಅನ್ನು ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿತು. ಈ ಕಾರು ಡಿಸೆಂಬರ್ 2022 ರಲ್ಲಿ ಬಂದ ನಂತರ, ಈ ಕಾರಿಗೆ ಜನರಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.
ಆಟೋಕಾರ್ ವರದಿಯ ಪ್ರಕಾರ, ಇನ್ನೋವಾದ ಕೆಲವು ರೂಪಾಂತರಗಳಿಗಾಗಿ ಕಾಯುವ ಅವಧಿಯು ಬರೋಬ್ಬರಿ 1 ವರ್ಷವನ್ನು ತಲುಪಿದೆ. ಹೈಬ್ರಿಡ್ ರೂಪಾಂತರಕ್ಕಾಗಿ ಕಾಯುವ ಅವಧಿಯು 9 ರಿಂದ 12 ತಿಂಗಳುಗಳಾಗಿದ್ದರೆ, ಗ್ರಾಹಕರು ಪೆಟ್ರೋಲ್ ರೂಪಾಂತರಕ್ಕಾಗಿ 4 ರಿಂದ 6 ತಿಂಗಳುಗಳವರೆಗೆ ಕಾಯಬೇಕಾಗುತ್ತದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ನಾಲ್ಕು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

ಕಂಪನಿಯು ಕೆಲವು ದಿನಗಳವರೆಗೆ ಉನ್ನತ ZX ರೂಪಾಂತರದ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ. VX, VX(O) ಟ್ರಿಮ್‌ಗಳಿಗಾಗಿ ಕಾಯುವ ಅವಧಿಯು ಬರೋಬ್ಬರಿ 9 ರಿಂದ 12 ತಿಂಗಳವರೆಗೆ ಹೆಚ್ಚಾಗಿದೆ. G ಮತ್ತು GX ಪೆಟ್ರೋಲ್ ಟ್ರಿಮ್ ವಿತರಣೆಗಾಗಿ ಗ್ರಾಹಕರಿಗೆ 4 ರಿಂದ 6 ತಿಂಗಳ ಕಾಯುವ ಅವಧಿಯನ್ನು ನೀಡಲಾಗುತ್ತಿದೆ ಅಂದರೆ ಅಲ್ಲಿಗೆ ನಿಮಗೆ ಅರ್ಥವಾಗಿರಬಹುದು ಕಾರಿಗೆ ಯಾವ ಮಟ್ಟದ ಬೇಡಿಕೆ ಇದೆಯೆಂದು.
Toyota Innova Hicross ಎರಡು ಪವರ್ ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 2.0-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ ಎಂಜಿನ್‌ಗಳು ಕ್ರಮವಾಗಿ 172 bhp ಮತ್ತು 184 bhp ಪವರ್ ಉತ್ಪಾದಿಸುತ್ತವೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ. ಆದಾಗ್ಯೂ, ಇ-ಸಿವಿಟಿ ಗೇರ್‌ಬಾಕ್ಸ್ ಹೈಬ್ರಿಡ್ ಎಂಜಿನ್‌ನೊಂದಿಗೆ ಲಭ್ಯವಿದೆ.

ವರದಿಯ ಪ್ರಕಾರ, ಟೊಯೊಟಾ ಹೈಬ್ರಿಡ್ ರೂಪಾಂತರಕ್ಕೆ 23.24 kmpl ಮತ್ತು ಪೆಟ್ರೋಲ್ ರೂಪಾಂತರಕ್ಕೆ 16.13 kmpl ಮೈಲೇಜ್ ನೀಡುತ್ತದೆ. ಪೆಟ್ರೋಲ್ ಹೈಕ್ರಾಸ್ ಬೆಲೆಗಳು ರೂ. 18.82 ಲಕ್ಷದಿಂದ ರೂ.19.72 ಲಕ್ಷದವರೆಗೆ (ಎಕ್ಸ್ ಶೋರೂಂ) ಹಾಗೂ ಹೈಬ್ರಿಡ್ ರೂಪಾಂತರಗಳ ಬೆಲೆಯು (ವಿಎಕ್ಸ್, ವಿಎಕ್ಸ್(ಒ)) ಬೆಲೆ ರೂ. 25.3 ಲಕ್ಷದಿಂದ 27.32 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








