ಕ್ವಿಕ್ ಸ್ಟೈಲ್ ತಂಡದೊಂದಿಗೆ ಡ್ಯಾನ್ಸ್ ಮಾಡಲು ಆಡಿ ಇ-ಟ್ರಾನ್ ಇವಿಯಲ್ಲಿ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ

ಪ್ರಸ್ತುತ ಭಾರತ ಮತ್ತು ಇಡೀ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಕಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರ ಆಡಿ ಇ-ಟ್ರಾನ್ 55 ಎಲೆಕ್ಟ್ರಿಕ್ SUV ನಲ್ಲಿ ಎಂಟ್ರಿಕೊಟ್ಟು ಅಚ್ಚರಿಗೊಳಿಸಿದ್ದಾರೆ. ಕ್ವಿಕ್ ಸ್ಟೈಲ್ ನೃತ್ಯ ತಂಡದ ಸದಸ್ಯರೊಂದಿಗೆ ವಿರಾಟ್ ಚಿತ್ರೀಕರಣಕ್ಕಾಗಿ ಹೊರಡುತ್ತಿರುವಾಗ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಕ್ವಿಕ್ ಕ್ರ್ಯೂ ಎಂದು ಕರೆಯಲ್ಪಡುವ ಈ ನೃತ್ಯಗಾರರ ತಂಡವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಇವರು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕತ್ರಿನಾ ಕೈಫ್ ಅವರ ಹಿಟ್ ಸಾಂಗ್ "ಕಾಲಾ ಚಸ್ಮಾ" ಹಾಡಿಗೆ ನೃತ್ಯ ಮಾಡಿ ಸಖತ್ ಸದ್ದು ಮಾಡಿದ್ದರು. ಇದೀಗ ವಿರಾಟ್ ಮತ್ತು ಕ್ವಿಕ್ ಸ್ಟೈಲ್ ತಂಡದ ವಿಡಿಯೋಗಾಗಿ ಹೊರಡುವ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಕಾರ್ಸ್ ಫಾರ್ ಯೂ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಕ್ವಿಕ್ ಸ್ಟೈಲ್ ತಂಡದೊಂದಿಗೆ ಡ್ಯಾನ್ಸ್ ಮಾಡಲು ಆಡಿ ಇ-ಟ್ರಾನ್ ಇವಿಯಲ್ಲಿ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ

ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಹೊರಡುತ್ತಿರುವುದನ್ನು ನೋಡಬಹುದು. ವಿರಾಟ್ ಕ್ವಿಕ್ ಸ್ಟೈಲ್ ಸದಸ್ಯರು ಮತ್ತು ಸೆಟ್‌ನಲ್ಲಿರುವ ಇತರ ಜನರೊಂದಿಗೆ ಮಾತನಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಿನ್ನಲೆಯಲ್ಲಿ ಕೆಲವು ವ್ಯಾನಿಟಿ ವ್ಯಾನ್‌ಗಳೂ ಕಾಣಿಸಿಕೊಂಡಿವೆ. ಇತ್ತೀಚೆಗಷ್ಟೇ ವಿರಾಟ್ ಅವರು ಡ್ಯಾನ್ಸ್ ಗ್ರೂಪ್‌ನೊಂದಿಗೆ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇನ್ನು ವಿಡಿಯೋದಲ್ಲಿ ಕಂಡುಬರುವ ಆಡಿ ಇ-ಟ್ರಾನ್ ಟಾಪ್ ಆಫ್ ಲೈನ್ ಇ-ಟ್ರಾನ್ 55 ರೂಪಾಂತರವಾಗಿದೆ.

EV SUV ಎರಡು ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಆಲ್-ವೀಲ್-ಡ್ರೈವ್‌ನೊಂದಿಗೆ ಬರುತ್ತದೆ. ಇ-ಟ್ರಾನ್ SUV, 402 bhp ಮತ್ತು 664 Nm ಸಂಯೋಜಿತ ಪವರ್ ಮತ್ತು ಟಾರ್ಕ್ ಅನ್ನು ಹೊರಹಾಕುತ್ತದೆ. ಇ-ಟ್ರಾನ್ 55 ನ 95 kWh ಲಿಥಿಯಂ ಐಯಾನ್ ಬ್ಯಾಟರಿಯು 484 ಕಿ.ಮೀ ಗರಿಷ್ಠ ರೇಂಜ್ ನೀಡುತ್ತದೆ. ಎಸ್‌ಯುವಿಯ ಈ ನಿರ್ದಿಷ್ಟ ರೂಪಾಂತರಕ್ಕೆ 1.18 ಕೋಟಿ ರೂ. ಎಕ್ಸ್‌ ಶೋ ರೂಂ ಬೆಲೆಯಿದೆ.

ವಿರಾಟ್‌ನ ಇತರ ದುಬಾರಿ ಕಾರುಗಳಂತೆಯೇ ಎಲೆಕ್ಟ್ರಿಕ್ ಎಸ್‌ಯುವಿ ಕೂಡ ಅತ್ಯುತ್ತಮ ಪರ್ಫಾಮೆನ್ಸ್ ಕಾರಾಗಿದೆ. ಕೇವಲ 5.7 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು. ಪೋರ್ಷೆ ಟೇಕಾನ್ ಮತ್ತು VW ಗ್ರೂಪ್‌ನ ಇತರ ವಾಹನಗಳು ಆಡಿ ಇ-ಟ್ರಾನ್‌ನೊಂದಿಗೆ ನೀಡಲಾದ ಅದೇ 95 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. 50 kW ವೇಗದ ಚಾರ್ಜರ್ ಬಳಸಿ ಈ ಕಾರನ್ನು ಶೇ 80 ರಷ್ಟು ಚಾರ್ಜ್ ಮಾಡಲು ಕೇವಲ 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹಾಗೆಯೇ ಇ-ಟ್ರಾನ್ ಆಡಿಯಿಂದ 11 kW AC ಚಾರ್ಜರ್‌ನೊಂದಿಗೆ ಬರುತ್ತದೆ. ಇದು 8.5 ಗಂಟೆಗಳಲ್ಲಿ ವಾಹನವನ್ನು ಶೇ 80 ರಷ್ಟು ಚಾರ್ಜ್ ಮಾಡಬಹುದು. Galaxy-Blue-Metallic ಬಣ್ಣದ ಆಡಿ ಇ-ಟ್ರಾನ್ ಅನ್ನು ವಿರಾಟ್ ಹೊಂದಿದ್ದಾರೆ. ವೈಶಿಷ್ಟ್ಯಗಳ ವಿಷಯದಲ್ಲಿ, ಈ SUV ಉನ್ನತ-ಮಟ್ಟದ ಸೌಕರ್ಯಗಳೊಂದಿಗೆ ಲೋಡ್ ಆಗಿದೆ. ಸಾಫ್ಟ್-ಟಚ್ ಡೋರ್‌ಗಳು, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, B&O 3D ಪ್ರೀಮಿಯಂ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇವಿಷ್ಟೇ ಅಲ್ಲದೇ ಡೈನಾಮಿಕ್ ಲೈಟ್ ಸ್ಟೇಜಿಂಗ್‌ನೊಂದಿಗೆ ಡಿಜಿಟಲ್ ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಹೆಡ್-ಅಪ್ ಡಿಸ್ಪ್ಲೇ ಮತ್ತು ಬೃಹತ್ ಪನೋರಮಿಕ್ ಸನ್‌ರೂಫ್ ಕೂಡ ಇವೆ. ವಿರಾಟ್ ಕೊಹ್ಲಿ ಆಡಿ ಇ-ಟ್ರಾನ್ 55 ಜೊತೆಗೆ ಕೆಂಪು ಆಡಿ ಇ-ಟ್ರಾನ್ ಜಿಟಿಯನ್ನು ಸಹ ಹೊಂದಿದ್ದಾರೆ. ಇದು ಇ-ಟ್ರಾನ್ 55 ರ ಶ್ರೇಣಿಯಂತೆ ಈ ಸೆಡಾನ್ ಇ-ಟ್ರಾನ್ ಜಿಟಿ ಆರ್‌ಎಸ್ ಎಂದು ಕರೆಯಲ್ಪಡುವ ಟಾಪ್ ಆಫ್ ಲೈನ್ ರೂಪಾಂತರವಾಗಿದೆ.

ಈ ಸೆಡಾನ್ ಮುಂಭಾಗ ಮತ್ತು ಹಿಂಭಾಗದ ಎರಡೂ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಇ-ಟ್ರಾನ್ ಜಿಟಿ ಆರ್‌ಎಸ್ ಆಲ್-ವೀಲ್ ಡ್ರೈವ್‌ನೊಂದಿಗೆ ಬರುತ್ತದೆ. ಕಂಪನಿಯ ಪ್ರಕಾರ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ 637 bhp ಮತ್ತು 830 Nm ಟಾರ್ಕ್ ಹೊರಹಾಕಬಲ್ಲದು. ಕಾರು 84 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಸಹ ಹೊಂದಿದೆ, ಇದು ಗರಿಷ್ಠ 472 ಕಿ.ಮೀ ರೇಂಜ್ ಅನ್ನು ಹಿಂದಿರುಗಿಸುತ್ತದೆ. ಈ ರೂಪಾಂತರದ ಬೆಲೆಯು 2.16 ಕೋಟಿ ರೂ. ಎಕ್ಸ್‌ ಶೂ ರೂಂ ಬೆಲೆಯಿದೆ.

ಉಳಿದಂತೆ ವಿರಾಟ್ ಕೊಹ್ಲಿ ಒಡೆತನದ ಇತರ ದುಬಾರಿ ಕಾರುಗಳನ್ನು ನೋಡುವುದಾದರೆ, ಪೋರ್ಷೆ ಪನಾಮೆರಾ, ಎರಡು ಬೆಂಟ್ಲಿಗಳು, ರೇಂಜ್ ರೋವರ್ ವೋಗ್ ಮತ್ತು ಇತರ ಐಷಾರಾಮಿ ಕಾರುಗಳು ಇವೆ. ವಿರಾಟ್ ಒಡೆತನದ ಅತಿ ಮುಖ್ಯವಾದ ಪೋರ್ಷೆ ಪನಾಮೆರಾ ಟರ್ಬೊ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 550 ಪಿಎಸ್ ಪವರ್ ಮತ್ತು 770 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 8-ಸ್ಪೀಡ್ PDK ಆಟೋಮ್ಯಾಟಿಕ್‌ನೊಂದಿಗೆ ಬರುತ್ತದೆ.

Article Published On: Saturday, March 18, 2023, 14:00 [IST]
English summary
Virat kohli came in the audi e tron ev to dance with the quick style team
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+