ಫೋಕ್ಸ್‌ವ್ಯಾಗನ್-ರೆನಾಲ್ಟ್ ಪಾಲುದಾರಿಕೆಯಲ್ಲಿ ಬರಲಿದೆ ಕಡಿಮೆ ಬೆಲೆಯ ಸಣ್ಣ ಎಲೆಕ್ಟ್ರಿಕ್ ಕಾರು

ಅಂತರಾಷ್ಟ್ರೀಯ ಬ್ರಾಂಡ್‌ಗಳು ಕೂಡ ಕೈಗೆಟುಕುವ ಎಲೆಕ್ಟ್ರಿಕ್ ಕಾರು ನಿರ್ಮಾಣಕ್ಕೆ ಮುಂದಾಗಿವೆ. ಫೋಕ್ಸ್‌ವ್ಯಾಗನ್ (Volkswagen) ಗ್ರೂಪ್ ಪ್ರವೇಶ ಮಟ್ಟದ EV ಅನ್ನು ನಿರ್ಮಿಸಲು ಸರಿಯಾದ ಪಾಲುದಾರರನ್ನು ಹುಡುಕುತ್ತಿದೆ. ಇದಕ್ಕಾಗಿ ಫ್ರೆಂಚ್ ವಾಹನ ತಯಾರಕರಾದ ರೆನಾಲ್ಟ್‌ನೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ ಎಂದು ಜರ್ಮನ್ ಮಾಧ್ಯಮ ಔಟ್‌ಲೆಟ್ ಹ್ಯಾಂಡೆಲ್ಸ್‌ಬ್ಲಾಟ್ ವರದಿ ಮಾಡಿದೆ.

ಮಾತುಕತೆ ಯಶಸ್ವಿಯಾದರೆ, ವರ್ಷಕ್ಕೆ 2 ಲಕ್ಷದಿಂದ 2.5 ಲಕ್ಷ ಕಾರುಗಳನ್ನು ತಯಾರಿಸುವುದು ಅವರ ಯೋಜನೆಯಾಗಿದೆ. ಆದರೆ ಈ ಬಗ್ಗೆ ಎರಡೂ ಕಂಪನಿಗಳು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಮೂಲಗಳ ಪ್ರಕಾರ, ಇಲ್ಲಿಯವರೆಗೆ ಸ್ವತಂತ್ರ ಯೋಜನೆಗಳೊಂದಿಗೆ ಸಾಗುತ್ತಿರುವ ರೆನಾಲ್ಟ್ (Renault) ಮತ್ತು ಫೋಕ್ಸ್‌ವ್ಯಾಗನ್ (Volkswagen), ಇದೀಗ ಎಲೆಕ್ಟ್ರಿಕ್ ಮಾದರಿಗಳ ನಿರ್ಮಾಣಕ್ಕಾಗಿ ಒಟ್ಟಿಗೆ ಬರುವ ಸಾಧ್ಯತೆಯನ್ನು ತೋರಿಸುತ್ತಿವೆ.

volkswagen-renault-partnership-to-build-small-electric-car-know-all-details

ಎರಡೂ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪ್ರವೇಶ ಮಟ್ಟದ ಮಾದರಿಯ ದೊಡ್ಡ ಸಾಮರ್ಥ್ಯವನ್ನು ಗುರುತಿಸಿವೆ. ಫೋಕ್ಸ್‌ವ್ಯಾಗನ್ ID1 ಮಾದರಿ ಮತ್ತು ರೆನಾಲ್ಟ್ ಟ್ವಿಂಗೊದ EV ಮಾದರಿಯನ್ನು ಈ ವಿಭಾಗದಲ್ಲಿ ಬಿಡುಗಡೆ ಮಾಡಲು ನೋಡುತ್ತಿವೆ. ಹೇಗೂ ಎರಡೂ ಬ್ರಾಂಡ್‌ಗಳು ವಿಶ್ವದಲ್ಲಿ ಉತ್ತಮ ಹೆಸರು ಮಾಡಿರುವ ಕಾರಣ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದ್ರೆ ಉತ್ತಮ ಮಾರಾಟ ಕಾಣಬಹುದು ಎಂಬ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ.

ರೆನಾಲ್ಟ್ ತನ್ನ ಜನಪ್ರಿಯ ಟ್ವಿಂಗೊದ ಎಲೆಕ್ಟ್ರಿಕ್ ಆವೃತ್ತಿಯನ್ನು 2026 ರ ವೇಳೆಗೆ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಟ್ವಿಂಗೋ EV ಯ ಹಿಂದಿನ ಪರಿಕಲ್ಪನೆಯು ಯುರೋಪ್‌ಗೆ ಬಜೆಟ್ EV ಅನ್ನು ಪರಿಚಯಿಸುವುದಾಗಿದೆ. ಟ್ವಿಂಗೋ EV ಶಕ್ತಿಗಿಂತ ದಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವಾಹನವಾಗಿದೆ. ಅಲ್ಲದೇ ಈಗಿನ ಟೆಕ್ನಾಲಜಿಗೆ ಅನುಗುಣವಾಗಿ ನಿರ್ಮಾಣವಾಗಲಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.

volkswagen-renault-partnership-to-build-small-electric-car-know-all-details

ಟ್ವಿಂಗೋ EV ರೆನಾಲ್ಟ್ 5, ರೆನಾಲ್ಟ್ 4 ಮತ್ತು ನಿಸ್ಸಾನ್ ಮೈಕ್ರಾ EV ಗಳನ್ನು ಆಧಾರವಾಗಿರುವ Ampr ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಎರಡು ಯೋಜನೆಗಳೊಂದಿಗೆ ಒಂದೇ ಗುರಿಗಾಗಿ ಶ್ರಮಿಸುತ್ತಿರುವ ರೆನಾಲ್ಟ್ ಮತ್ತು ಫೋಕ್ಸ್ ವ್ಯಾಗನ್ ತಂಡಗಳು ಈಗ ಒಂದಾಗುವ ಸಾಧ್ಯತೆ ಹೆಚ್ಚುತ್ತಿದೆ. ಇದು ಬಹುತೇಕ ಖಚಿತವಾಗಿದ್ದು ಕಂಪನಿಗಳು ಬಹಿರಂಗಗೊಳಿಸುವುದು ಮಾತ್ರ ಬಾಕಿ ಇದೆ.

ಇನ್ನು ಫೋಕ್ಸ್‌ವ್ಯಾಗನ್ ಗ್ರೂಪ್ ಸಿಎಫ್‌ಒ ಅರ್ನೊ ಆಂಟ್ಲಿಟ್ಜ್ ಅವರು 20,000 ಪೌಂಡ್‌ಗಳ (ಸುಮಾರು 18 ಲಕ್ಷ ರೂಪಾಯಿ) ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯೊಂದಿಗೆ ಮುಂದುವರಿಯುತ್ತಿದ್ದಾರೆ ಎಂದು ಈಗಾಗಲೇ ಮಾಹಿತಿ ನೀಡಿದ್ದಾರೆ. ಫೋಕ್ಸ್‌ವ್ಯಾಗನ್ ಕೈಗೆಟುಕುವ ಬೆಲೆಯನ್ನು ಗುರಿಯಾಗಿಸಿಕೊಂಡು ಈ ID1 ಅನ್ನು ಅಭಿವೃದ್ಧಿಪಡಿಸಿದೆ.

volkswagen-renault-partnership-to-build-small-electric-car-know-all-details

ಕಂಪನಿಯು 2025 ರ ನಂತರ ಈ ಕಾರನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ ಎಂದು ಸುಳಿವು ನೀಡಿದೆ. ಆದರೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಫೋಕ್ಸ್‌ವ್ಯಾಗನ್ ಮೂರು ವರ್ಷಗಳಲ್ಲಿ 87,000 ಕೋಟಿ ರೂ. ವೆಚ್ಚ ಕಡಿತ ಯೋಜನೆಯೊಂದಿಗೆ ಮುಂದುವರಿಯುತ್ತಿದ್ದು, ಅದು ID1 ರ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು ಎಂಬ ಸೂಚನೆಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 14, 2023, 12:11 [IST]
English summary
Volkswagen renault partnership to build small electric car know all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+