Volkswagen Taigun: ವಿದೇಶದಲ್ಲಿ 5-ಸ್ಟಾರ್ ರೇಟಿಂಗ್ ಸಾಧಿಸಿದ ಭಾರತೀಯ ನಿರ್ಮಾಣದ ಕಾರು

ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್‌ನಲ್ಲಿ ಮಾರಾಟವಾಗುವ ಹೊಸ ಕಾರುಗಳಿಗಾಗಿ ಲ್ಯಾಟಿನ್ NCAP ಕ್ರ್ಯಾಶ್ ಪರೀಕ್ಷೆ ನಡೆಸಲಾಗಿದ್ದು, ಭಾರತೀಯ ನಿರ್ಮಾಣದ ವೋಕ್ಸ್‌ವ್ಯಾಗನ್ ಟೈಗುನ್ 5-ಸ್ಟಾರ್ ರೇಟಿಂಗ್ ಗಳಿಸಿದೆ. ಈಗಾಗಲೇ ಈ ಕಾರು ಭಾರತದ GNCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಪರಿಪೂರ್ಣ ಪಂಚತಾರಾ ರೇಟಿಂಗ್ ಅನ್ನು ಸಾಧಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಟೈಗುನ್ ಕಾರು ವೋಕ್ಸ್‌ವ್ಯಾಗನ್‌ಗೆ ಯಶಸ್ವಿ ಉತ್ಪನ್ನವಾಗಿದ್ದು, ಇದು ವೋಕ್ಸ್‌ವ್ಯಾಗನ್ ಕಂಪನಿಯ INDIA 2.0 ಕಾರ್ಯತಂತ್ರದ ಭಾಗವಾಗಿದೆ. ಇದರಲ್ಲಿ ವರ್ಟಸ್, ಸ್ಕೋಡಾ ಕುಷಾಕ್, ಸ್ಕೋಡಾ ಸ್ಲಾವಿಯಾನಂತಹ ಕಾರುಗಳು ಕೂಡ ಇವೆ. ಇವೆಲ್ಲವು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್‌ಗಳನ್ನು ಗಳಿಸಿರುವುದು ವಿಶೇಷ.

volkswagen-taigun-5-star-rating-latin-ncap

ಲ್ಯಾಟಿನ್ ಎನ್‌ಸಿಎಪಿ ಪರೀಕ್ಷಿಸಿದ Volkswagen Taigun ನಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್ ಅಳವಡಿಸಲಾಗಿತ್ತು. ಈ ಮೂಲಕ ಟೆಸ್ಟ್‌ನಲ್ಲಿ ವಯಸ್ಕರ ಸುರಕ್ಷತೆಯಲ್ಲಿ ಶೇ 92.47, ಮಕ್ಕಳ ಸುರಕ್ಷತೆಯಲ್ಲಿ ಶೇ 91.84, ಪಾದಚಾರಿ ಮತ್ತು ದುರ್ಬಲ ರಸ್ತೆ ಬಳಕೆದಾರರ ರಕ್ಷಣೆಯಲ್ಲಿ ಶೇ55.14 ಮತ್ತು ಸುರಕ್ಷತೆಯ ಸಹಾಯ ವ್ಯವಸ್ಥೆಯಲ್ಲಿ ಶೇ 83.28 ರಷ್ಟು ಅಂಕಗಳೊಂದಿಗೆ ಉತ್ತಮ ಕಾರಾಗಿ ಹೊರಹೊಮ್ಮಿದೆ.

ಆದ್ರೆ ಭಾರತದಲ್ಲಿ ಮಾರಾಟವಾಗುವ ಟೈಗುನ್ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನೊಂದಿಗೆ ಬರುವುದಿಲ್ಲ. ಭಾರತೀಯ-ಸ್ಪೆಕ್ ಮಾದರಿಗಿಂತ ಭಿನ್ನವಾಗಿ ಲ್ಯಾಟಿನ್ ಅಮೆರಿಕಾ ಟೈಗುನ್ ಆಯ್ದ ರೂಪಾಂತರಗಳಲ್ಲಿ ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್ ಹೊಂದಿದೆ. ಏಕೆಂದರೆ ಅಲ್ಲಿ ಮಾರಾಟವಾಗುವ ಶೇ60 ರಷ್ಟು ಕಾರುಗಳು ಇದನ್ನು ಒಳಗೊಂಡಿರುವುದರಿಂದ ಇದಕ್ಕೂ ನೀಡಲಾಗಿದೆ.

volkswagen-taigun-5-star-rating-latin-ncap

ಇನ್ನು ಭಾರತದ ಗೈಗುನ್‌ಗೆ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಬ್ರೇಕ್ ಡಿಸ್ಕ್ ವೈಪಿಂಗ್, ಮಲ್ಟಿ-ಕೊಲಿಷನ್ ಬ್ರೇಕ್‌ಗಳು, ಆಂಟ್-ಸ್ಲಿಪ್ ರೆಗ್ಯುಲೇಶನ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಸಿಸ್ಟಮ್, ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು ಪ್ರಮಾಣಿತವಾಗಿ ಬರುತ್ತವೆ.

ಜೊತೆಗೆ ಟಾಪ್ ವೇರಿಯೆಂಟ್‌ಗಳಲ್ಲಿ ಹಿಲ್ ಸ್ಟಾರ್ಟ್ ಅಸಿಸ್ಟ್, ಫ್ರಂಟ್-ಸೈಡ್ ಏರ್‌ಬ್ಯಾಗ್‌ಗಳು ಮತ್ತು ಕರ್ಟನ್ ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಭಾರತದಲ್ಲಿನ ಫೋಕ್ಸ್‌ವ್ಯಾಗನ್ ಸಮೂಹವು MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಎಲ್ಲಾ ಹೊಸ ಜೆನ್ ವೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಮಾದರಿಗಳು ಸುರಕ್ಷತೆಯಲ್ಲಿ ಸದ್ಯ ಮುಂಚೂಣಿಯಲ್ಲಿವೆ.

volkswagen-taigun-5-star-rating-latin-ncap

ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ವೋಕ್ಸ್‌ವ್ಯಾಗನ್ ವರ್ಟಸ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಮೇಡ್ ಇನ್ ಇಂಡಿಯಾ ಉತ್ಪನ್ನಗಳಾಗಿವೆ ಎಂಬುದು ವಿಶೇಷ. ಭಾರತದಲ್ಲಿ ಟೈಗುನ್‌ನ ಬೆಲೆ ರೂ.11.62 ಲಕ್ಷದಿಂದ ಆರಂಭವಾಗಿ ರೂ.19.46 ಲಕ್ಷದವರೆ (ಎಕ್ಸ್‌ ಶೋರೂಂ) ಇದೆ. ಈ SUV ಅನ್ನು ಪ್ರಸ್ತುತ ಐದು ಬಣ್ಣಗಳಲ್ಲಿ ನೀಡಲಾಗುತ್ತಿದೆ.

ಹಾಗೆಯೇ ಡೈನಮಿಕ್ ಮತ್ತು ಪರ್ಫಾಮೆನ್ಸ್ ಎಂಬ ಎರಡು ಟ್ರಿಮ್‌ಗಳಲ್ಲಿ ಬರುತ್ತದೆ. ಇದರಲ್ಲಿ ಡೈನಮಿಕ್ ನೋಡಿಕೊಂಡರೆ 1.0-ಲೀಟರ್, ಮೂರು-ಸಿಲಿಂಡರ್ TSI ಪೆಟ್ರೋಲ್ ಎಂಜಿನ್‌ನೊಂದಿಗೆ 113 bhp ಪವರ್ ಮತ್ತು 178 Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಪರ್ಫಾರ್ಮೆನ್ಸ್ ಲೈನ್ ನೋಡಿಕೊಂಡರೆ 1.5 ಲೀಟರ್ EVO TSI ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 148 bhp ಪವರ್ ಮತ್ತು 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿಯೂಶ್ ಅರೋರಾ, "MQB A0-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ನಮ್ಮ ವಾಹನಗಳ ಸುರಕ್ಷತೆಯ ದಾಖಲೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ವೋಕ್ಸ್‌ವ್ಯಾಗನ್ ಟೈಗುನ್ ಗಳಿಸಿದ 5-ಸ್ಟಾರ್ ರೇಟಿಂಗ್ ಫೋಕ್ಸ್‌ವ್ಯಾಗನ್ ವರ್ಟಸ್‌ಗಾಗಿ ಇದೇ ರೀತಿಯ 5-ಸ್ಟಾರ್ ಲ್ಯಾಟಿನ್ NCAP ರೇಟಿಂಗ್‌ನ ಹತ್ತಿರದಲ್ಲಿದೆ.

ವಾಸ್ತವವಾಗಿ ನಮ್ಮ ಎಲ್ಲಾ ಇಂಡಿಯಾ 2.0 ಮಾದರಿಗಳಾದ - ವೋಕ್ಸ್‌ವ್ಯಾಗನ್ ಟೈಗುನ್, ವೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ವಯಸ್ಕರು ಮತ್ತು ಮಕ್ಕಳ ರಕ್ಷಣೆಗಾಗಿ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದಿದ್ದು, ಇವು ಭಾರತದಲ್ಲಿ ತಯಾರಿಸಿದ ಅತ್ಯಂತ ಸುರಕ್ಷಿತ ಕಾರುಗಳಾಗಿವೆ.

ಇದು ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸುರಕ್ಷತೆಯನ್ನು ನೀಡಲು VW ಗ್ರೂಪ್‌ನ ಬದ್ಧತೆಗೆ ಸಾಕ್ಷಿಯಾಗಿದೆ. #MakeInIndia ಗೆ ಅಭಿಯಾನವು ಏನು ಸಾಮರ್ಥ್ಯವನ್ನು ಹೊಂದಿದೆ ಎಂಬುದಕ್ಕೆ VW ಟೈಗುನ್ ಅತ್ಯುತ್ತಮ ಉದಾಹರಣೆಯಾಗಿದೆ. ನಾವು ಭಾರತೀಯ ಖರೀದಿದಾರರಿಗೆ ಜಾಗತಿಕ ಮಾರುಕಟ್ಟೆಗಳಿಗೆ ಲಭ್ಯವಿರುವ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ತರಲು ಬದ್ಧರಾಗಿದ್ದೇವೆ ಎಂದರು.

Article Published On: Thursday, July 6, 2023, 14:18 [IST]
English summary
Volkswagen taigun 5 star rating latin ncap
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+