ಈ ವಿಷಯಗಳು ತಿಳಿದರೆ ನೀವು ಖಂಡಿತ SUVಗಳನ್ನು ಖರೀದಿಸುವುದಿಲ್ಲ!
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಅಥವಾ SUV ಕಾರುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿವೆ. ಸ್ಟೈಲಿಷ್ ಡಿಸೈನ್, ಆಫ್ ರೋಡ್ ಸಾಮರ್ಥ್ಯ, ಹೆಚ್ಚಿನ ಸ್ಥಳಾವಕಾಶ, ಸ್ಪೊರ್ಟಿ ಅನುಭವ ಹೀಗೆ ಹಲವು ವಿಶೇಷತೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ ಅವು ಹೆದ್ದಾರಿಗಳಿಗೆ ಮಾತ್ರ ಉತ್ತಮವಾಗಿವೆ, ನಗರದಲ್ಲಿ ಕಿರಿದಾದ ಟ್ರಾಫಿಕ್ ರಸ್ತೆಗಳಲ್ಲಿ ಓಡಿಸುವುದು ಬಲು ಕಷ್ಟ.
ಅನೇಕ ಜನರು SUV ಪ್ರೇಮಿಗಳು ಇದ್ದಾರೆ. ಆದರೆ ಎಸ್‌ಯುವಿಗಳಿಂದ ಎಷ್ಟು ಧನಾತ್ಮಕ ಉಪಯೋಗಗಳಿವೆಯೋ ಅಷ್ಟೇ ಋಣಾತ್ಮಕ ನಷ್ಟಗಳು ಕೂಡ ಇವೆ. ಆದರೆ ಕಾರು ಖರೀದಿಸುವ ಮುನ್ನ ಈ ನಮ್ಮ ಮಾತುಗಳನ್ನು ಒಮ್ಮೆ ಅವಲೋಕಿಸಿ. ನಿಮ್ಮ ಮನೆಗೆ ಬರುವ ಕಾರಿನ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಸ್‌ಯುವಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉತ್ತಮವಲ್ಲವೇ. ಹಾಗಾಗಿ ಎಸ್‌ಯುವಿಗಳನ್ನು ಯಾಕೆ ಖರೀದಿಸಬಾರದು ಎಂಬುದಕ್ಕೆ ಐದು ಟಾಪ್ ಪಾಯಿಂಟ್‌ಗಳನ್ನು ಇಲ್ಲಿ ನೀಡಲಾಗಿದೆ.

ಪಲ್ಟಿಗೆ ಫೇಮಸ್:
SUV ಯಲ್ಲಿ ನೀವು ನೋಡುವ ದೊಡ್ಡ ಸಮಸ್ಯೆ ಎಂದರೆ ಸಂಭವನೀಯ ಅಪಘಾತದಲ್ಲಿ ಬೆಗನೇ ಪಲ್ಟಿ ಹೊಡಿಯುತ್ತವೆ. ಒಮ್ಮೆ ಉರುಳಿದರೆ ಅವುಗಳು 3 ಬಾರಿ ಫ್ಲಿಪ್ ಓವರ್ ಆಗುವ ಸಾಧ್ಯತೆ ಇದೆ. SUV ಗಳು ಸುಮಾರು 70 ಇಂಚುಗಳಷ್ಟು ಎತ್ತರ ಮತ್ತು ಎತ್ತರದ ರೂಫ್‌ಗಳನ್ನು ಹೊಂದಿರುವುದರಿಂದ ಅವು ಉರುಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಸಾಮಾನ್ಯ ಕಾರುಗಳಿಗೆ (ಸೆಡಾನ್) ಹೋಲಿಸಿಕೊಂಡರೆ ಅವು ಹೆಚ್ಚು ಸುರಕ್ಷಿತವಾಗಿಲ್ಲ.
SUVಗಳ ಗಾತ್ರ ದೊಡ್ಡದು:
SUVಗಳ ಗಾತ್ರ ದೊಡ್ಡದಾಗಿರುವುದರಿಂದ ಒಂದೆರಡು ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ದೀರ್ಘಾವಧಿಯವರೆಗೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗೆಯೇ ಕೆಲ ಸಂದರ್ಭಗಳಲ್ಲಿ ಈ ಬೃಹತ್ ಕಾರನ್ನು ನಿಲ್ಲಿಸಲು ಸ್ಥಳವನ್ನು ಹುಡುಕುವುದೇ ದೊಡ್ಡ ತಲೆ ನೋವಾಗಿರುತ್ತದೆ. ನೀವು ನಗರದಲ್ಲಿ ವಾಸಿಸುತ್ತಿದ್ದರೆ ಹೆಚ್ಚಿನ ಟ್ರಾಫಿಕ್ ಮತ್ತು ಕಿಕ್ಕಿರಿದ ಬೀದಿಗಳ ನಡುವೆ SUV ಗಳನ್ನು ಓಡಿಸುವುದು ತುಂಬಾ ಕಿರಿಕಿರಿಯನ್ನು ತರಿಸುವುದರ ಜೊತೆಗೆ ಕಾಲುಗಳ ನೋವು ಹೆಚ್ಚುತ್ತದೆ.

ಪ್ರಯಾಣಕ್ಕೆ ಉತ್ತಮವಲ್ಲ:
SUV ಗಳು ಬಹಳಷ್ಟು ಜನರಿಗೆ ಹೊಂದಿಕೊಳ್ಳುತ್ತವೆ, ಸಾಕಷ್ಟು ಸ್ಥಳಾವಕಾಶ ನೀಡುತ್ತವೆ. ಹಾಗಾಗಿ ನೀವು ಕಾರ್‌ಪೂಲಿಂಗ್ ಮಾಡುತ್ತಿದ್ದರೆ, ಎಸ್‌ಯುವಿಗಳಿಂದ ಪ್ರಯೋಜನ ಪಡೆಯಬಹುದು. ಆದರೆ ನೀವು ಏಕಾಂಗಿಯಾಗಿ ಚಾಲನೆ ಮಾಡುತ್ತಿದ್ದರೆ, SUV ಯಲ್ಲಿ ಪ್ರತಿದಿನ ಕೆಲಸಕ್ಕೆ ಅಥವಾ ಕಾಲೇಜಿಗೆ ಪ್ರಯಾಣಿಸುವುದು ಸರಳವಾಗಿ ಅಸಮರ್ಥವಾಗಿರುತ್ತದೆ. ಯಾವುದೇ ಪ್ರಯೋಜನವಿಲ್ಲದೇ ನೀವೊಬ್ಬರೆ ಪ್ರಯಾಣಿಸುವುದು ಎಂದರೆ ಹೆಚ್ಚುವರಿ ಜಾಗದ ವ್ಯರ್ಥವಾದಂತಲ್ಲವೇ. ಹಾಗಾಗಿ ಪ್ರಯೋಜನವಿದ್ದವರು ಖರೀದಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ.
ಇಂಧನ ದಕ್ಷತೆ:
ನಾವು ನಿತ್ಯ ನೋಡುವ SUV ಗಳು ಕಡಿಮೆ ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಅವು ದೊಡ್ಡ ಕಾರುಗಳಾಗಿರುವುದರಿಂದ, ಅವುಗಳಿಗೆ ಹೆಚ್ಚಿನ ಇಂಧನ ಬೇಕಾಗುತ್ತದೆ. ಇಂಧನ ಟ್ಯಾಂಕ್ ಅನ್ನು ತುಂಬಲು ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಖಾಲಿ ಮಾಡಬೇಕಾಗಬಹುದು. ಇದರರ್ಥ ತೈಲ ಬೆಲೆಗಳು ಏರುತ್ತಿರುವಾಗ, ನಿಮ್ಮ SUV ಗಾಗಿ ಇಂಧನಕ್ಕಾಗಿ ನೀವು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಬದಲಿಗೆ ಸೆಡಾನ್ ಅಥವಾ ಹ್ಯಾಚ್‌ಬ್ಯಾಕ್ ಖರೀದಿಸಬಹುದು.

ಆಗಾಗ್ಗೆ ಬಿಡಿ ಭಾಗಗಳ ಬದಲಿ:
ಬೃಹತ್ ಕಾರು ಅದರ ಘಟಕಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ SUV ಯ ಬ್ರೇಕ್‌ಗಳು ಬೇಗನೆ ಸವೆದುಹೋಗುತ್ತವೆ. ಈ ಬೃಹತ್ ವಾಹನದ ಎಲ್ಲಾ ತೂಕವನ್ನು ಟೈರ್‌ಗಳು ಸಾಗಿಸಬೇಕಾಗಿರುವುದರಿಂದ, ಅವು ಕೂಡ ಬೇಗನೇ ಸವೆದುಹೋಗುತ್ತವೆ. SUV ಅನ್ನು ನಿಲ್ಲಿಸಲು ಹೆಚ್ಚಿನ ಘರ್ಷಣೆಯ ಅಗತ್ಯವಿರುವುದರಿಂದ, ಬ್ರೇಕ್‌ಗಳು ಸರಳವಾಗಿ ಸವೆಯುತ್ತವೆ. ನೀವು ಆಗೊಮ್ಮೆ ಈಗೊಮ್ಮೆ ಹೊಸ ಟೈರ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹಾಗಾಗಿ SUV ನಿರ್ವಹಣಾ ತುಂಬಾ ತುಬಾರಿಯಾಗಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications