Toyota Innova: ವಿಶ್ವದ ಮೊದಲ ಪರ್ಯಾಯ ಇಂಧನ ಚಾಲಿತ ಟೊಯೊಟಾ ಇನ್ನೋವಾ ನಾಳೆ ಅನಾವರಣ

ದೇಶದಲ್ಲಿ ಮಾಲಿನ್ಯ ರಹಿತ ಶುದ್ಧ ಪರಿಸರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪರ್ಯಾಯ ಇಂಧನ ಚಾಲಿತ ವಾಹನ (ಎಲೆಕ್ಟ್ರಿಕ್, ಎಥೆನಾಲ್, ಸೋಲಾರ್) ಬಳಕೆಯ ಉತ್ತೇಜಿಸುತ್ತಿದ್ದು, ನಾಳೆ (ಮಂಗಳವಾರ) ವಿಶ್ವದಲ್ಲೇ ಮೊದಲ ಎಥೆನಾಲ್ ಇಂಧನ ಚಾಲಿತ ಟೊಯೊಟಾ ಇನ್ನೋವಾ (Toyota Innova) ರೂಪಾಂತರವನ್ನು ಅನಾವರಣಗೊಳ್ಳಲಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, 100% ಎಥೆನಾಲ್ ಇಂಧನ ಚಾಲಿತ ಹೊಸ ರೂಪಾಂತರವನ್ನು ಪರಿಚಯಿಸಲಿದ್ದಾರೆ. ಈ ಬಗ್ಗೆ ಕೆಲವೇ ದಿನಗಳ ಹಿಂದೆ, ಮಾಹಿತಿ ನೀಡಿದ್ದರು. ಪರ್ಯಾಯ ಇಂಧನವಾದ ಎಥೆನಾಲ್ ಮೂಲಕ ಚಲಿಸುವ ಟೊಯೊಟಾ ಇನ್ನೋವಾದ ಎಂಜಿನ್ ಅನ್ನು ಬಿಎಸ್ -VI ಹಂತ 2ರ ಅನ್ವಯ ಮೇಲ್ದರ್ಜೆರಿಸಲಾಗಿದೆ.

Toyota Innova: ವಿಶ್ವದ ಮೊದಲ ಪರ್ಯಾಯ ಇಂಧನ ಚಾಲಿತ ಟೊಯೊಟಾ ಇನ್ನೋವಾ ನಾಳೆ ಅನಾವರಣ

'ನಾವು ಸ್ವಾವಲಂಬಿ ಆದಾಗ ಮಾತ್ರ, ತೈಲ ಆಮದನ್ನು ಶೂನ್ಯಕ್ಕೆ ತರಬಹುದು. ಇದು, ನಮ್ಮ ಆರ್ಥಿಕತೆಗೆ ದೊಡ್ಡ ನಷ್ಟವಾಗುವುದನ್ನು ತಪ್ಪಿಸುತ್ತದೆ. ಜೊತೆಗೆ ಸರಿ ಸುಮಾರು ರೂ.16 ಲಕ್ಷ ಕೋಟಿ ಉಳಿತಾಯ ಮಾಡಬಹುದು. ದೇಶದಲ್ಲಿ ವಾಯುಮಾಲಿನ್ಯ ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ತಡೆಗಟ್ಟಲು ಪರ್ಯಾಯ ಇಂಧನ ಬಳಕೆಯಿಂದ ಸಾಧ್ಯವಾಗುತ್ತದೆ' ಎಂದು ನಿತಿನ್ ಗಡ್ಕರಿ ಅವರ ವಾದವಾಗಿದೆ.

ಸದ್ಯ, ದೇಶದಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.100 ಗಡಿಯಲ್ಲಿದೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬಿದಿದ್ದು, ಅದರಲ್ಲಿಯೂ ಎಥೆನಾಲ್ ಅನ್ನು ಕೃಷಿ ತ್ಯಾಜ್ಯ (ಭತ್ತದ ಹುಲ್ಲು)ದಿಂದ ತಯಾರಿಸಲಾಗುತ್ತದೆ. ಆ ಕಾರಣಕ್ಕೆ ಅದರ ದರವು ಕಡಿಮೆಯಿರಲಿದ್ದು, ಗ್ರಾಹಕರಿಗೆ ನೇರವಾಗಿ ಲಾಭವಾಗುತ್ತದೆ. ಜೊತೆಗೆ ರೈತರು ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ.

ಪರ್ಯಾಯ ಇಂಧನ ಚಾಲಿತ ಟೊಯೊಟಾ ಇನ್ನೋವಾದ ಬೆಲೆ, ಕಾರ್ಯಕ್ಷಮತೆ, ವೈಶಿಷ್ಟ್ಯದ ಬಗ್ಗೆ ಸದ್ಯಕ್ಕೆ ಯಾವುದೇ ಖಚಿತತೆ ಇಲ್ಲ. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಸರಣಿ ಕಾರುಗಳು, ಹೈಕ್ರಾಸ್ ಹಾಗೂ ಇನ್ನೋವಾ ಕ್ರಿಸ್ಟಾ ಎಂಬ ಎರಡು ರೂಪಾಂತರಗಳಲ್ಲಿ ಸಿಗುತ್ತವೆ. ಮೊದಲಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಬಗ್ಗೆ ಮಾತನಾಡೋಣ. ಇದು, ರೂ.18.82 - 30.26 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಇನ್ನೋವಾ ಹೈಕ್ರಾಸ್ ಎಂಪಿವಿ, ಜಿ, ಜಿಎಕ್ಸ್ ಸೇರಿದಂತೆ ಆರು ರೂಪಾಂತರಗಳಲ್ಲಿ ಸಿಗಲಿದ್ದು, 2.0 ಲೀಟರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ CVT ಗೇರ್ ಬಾಕ್ಸ್ ಹೊಂದಿದ್ದು, 21 kmpl ಮೈಲೇಜ್ ನೀಡುತ್ತದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ರೂ.19.99 - 26.05 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಸಿಗಲಿದೆ. ಇದರ 2.4 ಲೀಟರ್ ಡೀಸೆಲ್ ಎಂಜಿನ್, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 - ಸ್ವೀಡ್ ಮಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯಲಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒಟ್ಟಾರೆ, ವಿಶ್ವದ ಪ್ರಥಮ ಪರ್ಯಾಯ ಇಂಧನ (ಎಥೆನಾಲ್) ಚಾಲಿತ ಟೊಯೊಟಾ ಇನ್ನೋವಾ, ನಾಳೆ ಅನಾವರಣಗೊಳ್ಳಲಿದ್ದು, ಈ ಎಂಪಿವಿ ಮೇಲೆ ಗ್ರಾಹಕರಿಗೆ ದೊಡ್ಡಮಟ್ಟದ ನಿರೀಕ್ಷೆಗಳು ಹೆಚ್ಚಾಗಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಈ ರೀತಿಯ ವೆಹಿಕಲ್ ಬಿಡುಗಡೆಯಾದರೆ ಇಂಧನ ಚಾಲಿತ (ಪೆಟ್ರೋಲ್, ಡೀಸೆಲ್) ವಾಹನಗಳಿಗೆ ಬೇಡಿಕೆ ಕುಸಿತವಾಗುವುದು ಕಟ್ಟಿಟ್ಟ ಬುತ್ತಿ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 28, 2023, 15:53 [IST]
English summary
World first 100 ethanol fueled toyota innova unveil tomorrow
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+