Toyota Innova HyCross: ವಿಶ್ವದ ಮೊದಲ ಪರ್ಯಾಯ ಇಂಧನ ಚಾಲಿತ ಟೊಯೊಟಾ ಇನ್ನೋವಾ ಹೈಕ್ರಾಸ್ ಲಾಂಚ್
ಭಾರತದಲ್ಲಿ ಮಾಲಿನ್ಯ ರಹಿತ ಶುದ್ಧ ಪರಿಸರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ ಮಹತ್ವದ ಹೆಜ್ಜೆ ಇಡುತ್ತಿದ್ದು, ಇಂದು ವಿಶ್ವದ ಮೊದಲ ಪರ್ಯಾಯ ಇಂಧನ ಚಾಲಿತ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova HyCross) ಎಂಪಿವಿಯನ್ನು ಬಿಡುಗಡೆಗೊಳಿಸಲಾಗಿದೆ.
ಕೇಂದ್ರ ಸಾರಿಗೆ ಸಚಿವ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೊಯೊಟಾ ಮೋಟಾರ್, ಪರ್ಯಾಯ ಇಂಧನವಾದ ಎಥೆನಾಲ್ (ethanol) ಬೆಂಬಲಿಸುವ ಹಾಗೂ ಎಲೆಕ್ಟ್ರಿಫೈಡ್ ಫ್ಲೆಕ್ಸ್ - ಫ್ಯುಯೆಲ್ (flex - fuel) ಎಂಜಿನ್ ಹೊಂದಿರುವ ಇನ್ನೋವಾ ಹೈಕ್ರಾಸ್ ಎಂಪಿಪಿಯನ್ನು ಲಾಂಚ್ ಮಾಡಿದೆ. ಇದರ ಎಂಜಿನ್, ಬಿಎಸ್6 ಹಂತ 2ರ ಮಾನದಂಡಗಳ ಪ್ರಕಾರವಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಫ್ಲೆಕ್ಸ್ - ಫ್ಯುಯೆಲ್ ಎಂಪಿವಿ, ಸಂಪೂರ್ಣ ಎಥೆನಾಲ್ (E100)ನಿಂದ ಚಲಿಸುತ್ತದೆ (ನಿಮಗೆ ತಿಳಿದಿರಲಿ.. ಈ ಎಥೆನಾಲ್ ಇಂಧನವನ್ನು ಕೃಷಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ). ಜೊತೆಗೆ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಇದು ಎಂಪಿವಿ ಇವಿ ಮೋಡ್‌ನಲ್ಲಿ ಸುಲಭ ಚಲಿಸಲು ಸಾಧ್ಯವಾಗುವಂತೆ ಪವರ್ ಉತ್ಪಾದಿಸುತ್ತದೆ.
ಪ್ರಸ್ತುತ, ಎಲೆಕ್ಟ್ರಿಫೈಡ್ ಫ್ಲೆಕ್ಸ್ - ಫ್ಯುಯೆಲ್ ಟೊಯೊಟಾ ಇನ್ನೋವಾ ಹೈಕ್ರಾಸ್, ಯಾವಾಗ ಬಿಡುಗಡೆಯಾಗುತ್ತದೆ. ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಭಾರತದಲ್ಲಿ ಖರೀದಿಗೆ ಸಿಗುವ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ವೇರಿಯೆಂಟ್ ಹಾಗೂ ಫ್ಲೆಕ್ಸ್ - ಫ್ಯುಯೆಲ್ ಎಂಜಿನ್ ವೇರಿಯೆಂಟ್ ಬಹುತೇಕ ಬೇರೆ - ಬೇರೆಯಾಗಿವೆ.
ಹೈಬ್ರಿಡ್ ಪವರ್ ಟ್ರೈನ್ ಹೊಂದಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, 2.0 - ಲೀಟರ್ 4 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 184.8 bhp ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಹೊರಹಾಕುತ್ತದೆ. e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, 23.24 kmpl ಮೈಲೇಜ್ ನೀಡುತ್ತದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 'ಪರ್ಯಾಯ ಇಂಧನ ಬಳಕೆಯು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿ, ನಮ್ಮ ಆರ್ಥಿಕತೆಗೆ ದೊಡ್ಡ ಲಾಭವನ್ನು ತಂದುಕೊಡುತ್ತದೆ. ಇದರೊಟ್ಟಿಗೆ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ದೇಶದಲ್ಲಿ ಶೇಕಡ 40% ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದ್ದು, ದೆಹಲಿಯ ನಿವಾಸಿಗಳು ಅದರ ಪರಿಣಾಮವನ್ನು ಎದುರಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಭಾರತದಲ್ಲಿ ಜೈವಿಕ ಇಂಧನ ಅಥವಾ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ಪಡುತ್ತಿದ್ದು, ಕಳೆದ ವರ್ಷ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪರಿಚಯಿಸಿತ್ತು. ಬಹುತೇಕ, ದೇಶದ ಎಲ್ಲ ವಾಹನಗಳಲ್ಲಿ 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇಕಡ 20% ಎಥೆನಾಲ್ ಇಂಧನವನ್ನು ಬಳಕೆ ಮಾಡಲು ಸರ್ಕಾರ ಉದ್ದೇಶಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ಈಗಲೇ, ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಥೆನಾಲ್ ಬೆಂಬಲಿಸುವ ಎಂಜಿನ್ ಹೊಂದಿರುವ ಬೈಕ್, ಸ್ಕೂಟರ್ ಬಿಡುಗಡೆಗೊಳಿಸುತ್ತಿವೆ. ಕಳೆದ ವರ್ಷ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಟೊಯೊಟಾ, ಹೈಡ್ರೋಜನ್ ಚಾಲಿತ ಮಿರಾಯ್ ಇವಿಯನ್ನು ಬಿಡುಗಡೆಗೊಳಿಸಿತ್ತು. ಇದು, ರೂ.60 ಲಕ್ಷ ದರದಲ್ಲಿ ಖರೀದಿಗೆ ಸಿಗಲಿದ್ದು, 646 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಇನ್ನು, ದೇಶದಲ್ಲಿ ಮಾಲಿನ್ಯ ರಹಿತ ಶುದ್ಧ ಪರಿಸರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತದೆ. ಅದಕ್ಕಾಗಿ ಪರ್ಯಾಯ ಇಂಧನ (ಎಲೆಕ್ಟ್ರಿಕ್, ಎಥೆನಾಲ್, ಸೋಲಾರ್, ಹೈಡ್ರೋಜನ್) ಚಾಲಿತ ವಾಹನ ಬಳಕೆಯನ್ನು ಉತ್ತೇಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆ ನಿಟ್ಟಿನಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಬಿಡುಗಡೆಯಾಗಿದ್ದು, ದೇಶದ ರಸ್ತೆಗೆ ಬಂದ ಮೇಲೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications