ಹೆಚ್ಚು ರೇಂಜ್, ಕೈಗೆಟುಕುವ ಬೆಲೆಯಲ್ಲಿ Wuling BinguoEV ಕಾರು ಬಿಡುಗಡೆ: ಭಾರತಕ್ಕೆ ಬರುತ್ತಾ?

ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯಯತೆಯನ್ನು ನೀಡುತ್ತಿದೆ. ಜನಪ್ರಿಯ ಕಾರು ತಯಾರಕ ಕಂಪನಿಯಾದ Wuling ತನ್ನ ಈ ಹೊಸ Wuling BinguoEV ಕಾರನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ.

ಇಂಡೋನೇಷ್ಯಾದಲ್ಲಿ, ವುಲಿಂಗ್ BinguoEV ಬೆಲೆ IDR 358 ಮಿಲಿಯನ್ (ರೂ. 19 ಲಕ್ಷ) ಮತ್ತು IDR 408 ಮಿಲಿಯನ್ (ರೂ. 21.9 ಲಕ್ಷ) ನಡುವೆ ಇದೆ. Wuling Bingo ಮತ್ತು Wuling BinguoEV ಎರಡು ವಿಭಿನ್ನ ವಾಹನಗಳು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅವುಗಳು ಅಲ್ಲ. ಕಂಪನಿಯು ಇದನ್ನು ಇಂಡೋನೇಷ್ಯಾದಲ್ಲಿ BinguoEV ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದೆ.

Wuling BinguoEV

Wuling Binguo ಎಲೆಕ್ಟ್ರಿಕ್ ಕಾರು 3,950 ಎಂಎಂ ಉದ್ದ, 1,708 ಎಂಎಂ ಅಗಲ, 1,580 ಎಂಎಂ ಎತ್ತರ ಮತ್ತು 2,560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ Wuling Binguo ಎಲೆಕ್ಟ್ರಿಕ್ ಕಾರು BYD ಸೀಗಲ್‌ಗಿಂತ ಗಣನೀಯವಾಗಿ ದೊಡ್ಡದಾಗಿದೆ. DC ಚಾರ್ಜಿಂಗ್ ಹೊಂದಾಣಿಕೆಯೊಂದಿಗೆ ಇಂಡೋನೇಷ್ಯಾಕ್ಕೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಿವೆ.

ಈ ಹೊಸ ಕಾರಿನಲ್ಲಿ 31.9 kWh ಜೊತೆಗೆ 41 bhp ಮೋಟಾರ್ ಮತ್ತು 333 km ರೇಂಜ್ ಅನ್ನು ನೀಡುತ್ತದೆ. ಇನ್ನು 37.9 kWh ಜೊತೆಗೆ 68 bhp ಮೋಟಾರ್ ಮತ್ತು 410 ಕಿ.ಮೀ ರೇಂಜ್ ಅನ್ನು ನೀಡುತ್ತದೆ. Wuling Binguo ಎಲೆಕ್ಟ್ರಿಕ್ ಕಾರು ಮೌಸ್ಸ್ ಗ್ರೀನ್, ಗ್ಯಾಲಕ್ಸಿ ಬ್ಲೂ ಮತ್ತು ಮಿಲ್ಕ್ ಟೀ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Wuling BinguoEV

ಈ Wuling Binguo ಎ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ. ಬಿಂಗೊ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳಲ್ಲಿ ಅದರ X-ಆಕಾರದ LED DRL ಸಹಿ, ನಯವಾದ ಪ್ರೊಜೆಕ್ಟರ್ ಹೆಡ್‌ಲೈಟ್, ಕರ್ವೇಸಿಯಸ್ ಮತ್ತು ಮಿನಿಮಲ್ ಶೀಟ್ ಮೆಟಲ್ ಡಿಟೇಲಿಂಗ್, ವಾಟರ್ ಸ್ಪ್ಲಾಶ್ ವಿನ್ಯಾಸ 15-ಇಂಚಿನ ವೀಲ್ ಕವರ್‌ಗಳು ಮತ್ತು ಒಟ್ಟಾರೆ ಕ್ಲಾಸಿ ಮತ್ತು ಮುದ್ದಾದ ಆಕರ್ಷಣೆಯನ್ನು ಹೊಂದಿದೆ.

ಈ ಹೊಸ Wuling Binguo ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ ಬಿಡುಗಡೆಯಾದ MG ಕಾಮೆಟ್ ಇವಿ ಯೊಂದಿಗೆ ನಾವು ಕೆಲವು ಹೋಲಿಕೆಗಳನ್ನು ನೋಡಬಹುದು. ಒಂದೇ ಹೌಸಿಂಗ್‌ನಲ್ಲಿ ಡ್ಯುಯಲ್ 10-ಇಂಚಿನ ಸಮತಲ ಡಿಸ್‌ಪ್ಲೇಗಳು, ಪಾಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್ ಮತ್ತು ಗೇರ್ ಆಯ್ಕೆ ಮಾಡುವ ಡಯಲ್ ಕಾಮೆಟ್ ಇವಿಗೆ ಹೋಲುತ್ತವೆ. ಕೀ ಫೋಬ್ ಕೂಡ ಒಂದೇ ಆಗಿರುತ್ತದೆ.

Wuling Binguo ಇವಿ ವ್ಯಾಪಕವಾದ ಸಾಫ್ಟ್-ಟಚ್ ಪ್ಲಾಸ್ಟಿಕ್‌ಗಳೊಂದಿಗೆ ಕ್ಲಾಸಿ ಆಂತರಿಕ ವಿನ್ಯಾಸವನ್ನು ಹೊಂದಿದೆ. ಇವುಗಳಲ್ಲಿ ಲೆಥೆರೆಟ್ ಹೊದಿಕೆಯ ಡ್ಯಾಶ್‌ಬೋರ್ಡ್ ಮತ್ತು ಕ್ಲಾಡಿಂಗ್ ಮತ್ತು ಸ್ಟಿಚಿಂಗ್‌ನೊಂದಿಗೆ ದೊಡ್ಡ ಡೋರ್‌ಪ್ಯಾಡ್‌ಗಳು ಸೇರಿವೆ. ಇನ್ನು ಈ ಕಾರಿನಲ್ಲಿ ಬೂಟ್ ಸ್ಪೇಸ್ 310 ಲೀಟರ್ ಆಗಿದ್ದು, 2ನೇ ಸಾಲನ್ನು ಮಡಚಿದರೆ 790 ಲೀಟರ್ ನಷ್ಟು ವಿಸ್ತರಿಸಬಹುದು. ಈ ಹೊಸ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಹೊಂದಿದ್ದು, ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಪಾರುಪತ್ಯ ಸಾಧಿಸುತ್ತಿದೆ. ಭಾರತದಲ್ಲಿ ಗ್ರಾಹಕರ ಉತ್ತಮ ಪ್ರತಿಕ್ರಿಯೆಯಿಂದಾಗಿ ತನ್ನ ಎಲೆಕ್ಟ್ರಿಕ್ ಕಾರು ವಿಭಾಗವನ್ನು ವಿಸ್ತರಿಸಲು ಹೊರಟಿರುವ ಟಾಟಾ ಮೋಟಾರ್ಸ್, ಇದೀಗ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆದ ಪಂಚ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಅತಿ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದ್ದು ಬಿಡುಗಡೆ ದಿನಾಂಕವೀಗ ಬಹಿರಂಗವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 20, 2023, 11:55 [IST]
English summary
Wuling binguoev likely india launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+