ಬೈಕ್ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಬಿಡುಗಡೆ
First Auto Works (FAW) ಬೆಸ್ಟ್ಯೂನ್ ಬ್ರ್ಯಾಂಡ್ ಅಡಿಯಲ್ಲಿ Xiaoma ಎಂಬ ಸಣ್ಣ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ತಿಂಗಳಿನಿಂದ ಪೂರ್ವ ಮಾರಾಟ ಪ್ರಾರಂಭವಾಗಲಿದೆ. ಬಿಡುಗಡೆಯಾದ ಹೊಸ ಕಾರು Wuling Hongguang MINI EV ಗೆ ಪ್ರತಿಸ್ಪರ್ಧಿಯಾಗಿದೆ.
Wuling Hongguang MINI EV ಪ್ರಸ್ತುತ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೈಕ್ರೋ ಕಾರ್ ಆಗಿದ್ದು, ಇದೀಗ ಇದಕ್ಕೆ ಪೈಪೋಟಿ ನೀಡಿ ಮಾರುಕಟ್ಟೆಯಲ್ಲಿ ಸದ್ದು ಮಾಡಲು Bestune Xiaoma 30,000- 50,000 ಯುವಾನ್ (ಅಂದಾಜು ರೂ. 3.47 ಲಕ್ಷದಿಂದ ರೂ. 5.78 ಲಕ್ಷ) ಬೆಲೆಗೆ ಬಿಡುಗಡೆಯಾಗಿದೆ.

ವಿಷಯಕ್ಕೆ ಬಂದರೆ ಇವು ಭಾರತದಲ್ಲಿ ಮಾರಾಟಕ್ಕಿಲ್ಲ. ಸದ್ಯ ಚೀನಾದಲ್ಲಿ ಬಿಡುಗಡೆಯಾಗಿದ್ದು, ಮುಂಬರುವ ದಿನಗಳಲ್ಲಿ ನಮ್ಮ ಭಾರತದಲ್ಲಿ ಚೀನಾ ಕಾರುಗಳು ಅಲ್ಲದಿದ್ದರೂ ಸ್ವದೇಶಿ ನಿರ್ಮಿತ ಮೈಕ್ರೋ ಇವಿಗಳು ಬಿಡುಗಡೆಯಾಗಲಿವೆ. ಮೈಕ್ರೋ ಇವಿಗಳು ಭಾರತದಲ್ಲಿ ಇನ್ನೂ ತಮ್ಮ ಛಾಪು ಮೂಡಿಸದಿದ್ದರೂ, ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ.
ಮೈಕ್ರೊ ಕಾರ್ ಕೈಗೆಟುಕುವ ಬೆಲೆ, ಸುಲಭವಾದ ಪಾರ್ಕಿಂಗ್, ಸಾಕಷ್ಟು ಮೈಲೇಜ್ ಮತ್ತು ಕಾರ್ಬನ್ ಮುಕ್ತ ಬಹು ಪ್ರಯೋಜನಗಳನ್ನು ನೀಡುತ್ತದೆ. Xiaoma ಡಿಸೈನ್ ಕುರಿತು ಹೇಳುವುದಾದ್ರೆ ಬಾಕ್ಸಿ ಲುಕ್ ಹೊಂದಿದ್ದು, ಡ್ಯುಯಲ್-ಟೋನ್ ಬಣ್ಣದಲ್ಲಿ ಬರುತ್ತದೆ. ದುಂಡಗಿನ ಅಂಚುಗಳೊಂದಿಗೆ ದೊಡ್ಡ ಚೌಕಾಕಾರದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಟೈಲ್ ಲ್ಯಾಂಪ್‌ಗಳು ಮತ್ತು ಬಂಪರ್ ಮುಂಭಾಗದಲ್ಲಿ ಇರುವಂತೆಯೇ ಇವೆ.

ಫ್ಲಾಟ್ ಡ್ಯಾಶ್‌ಬೋರ್ಡ್ ಮತ್ತು ರೋಟರಿ ಕಂಟ್ರೋಲ್ ಡಯಲ್‌ಗಳನ್ನು ಒಳಗೊಂಡಿರುವ ಇಂಟೀರಿಯರ್ ಅಷ್ಟೇ ಮುದ್ದಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಸಹ ಇದ್ದು, ಡ್ಯಾಶ್‌ಬೋರ್ಡ್ ಆಕರ್ಷಕ ಡ್ಯುಯಲ್-ಟೋನ್ ಥೀಮ್ ಹೊಂದಿದೆ. ಇದರ ಪ್ಲಾಟ್‌ಫಾರ್ಮ್ ಬಗ್ಗೆ ಹೇಳುವುದಾದರೆ, FME ಪ್ಲಾಟ್‌ಫಾರ್ಮ್ ಇದಕ್ಕೆ ಆಧಾರವಾಗಿದೆ. ಇದು EV ಮತ್ತು ರೇಂಜ್ ಎಕ್ಸ್ಟೆಂಡರ್ ಡೆಡಿಕೇಟೆಡ್ ಚಾಸಿಸ್ ಎರಡನ್ನೂ ಒಳಗೊಂಡಿದೆ.
ಈ ಹಿಂದೆ, NAT ಹೆಸರಿನ ರೈಡ್-ಹೇಲಿಂಗ್ EV ಅನ್ನು ಅದೇ ವೇದಿಕೆಯಲ್ಲಿ ನಿರ್ಮಿಸಲಾಗಿತ್ತು. FME ವೇದಿಕೆಯು A1 ಮತ್ತು A2 ಎಂಬ ಎರಡು ಉಪ-ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. A1 ಉಪ-ಪ್ಲಾಟ್‌ಫಾರ್ಮ್ 2700-2850 ಮಿ.ಮೀ ವೀಲ್‌ಬೇಸ್ ಹೊಂದಿರುವ ಸಬ್‌ಕಾಂಪ್ಯಾಕ್ಟ್‌ಗಳು ಮತ್ತು ಕಾಂಪ್ಯಾಕ್ಟ್‌ಗಳನ್ನು ಪೂರೈಸುತ್ತದೆ.

A2 ಅನ್ನು 2700-3000 ಮಿ.ಮೀ ವೀಲ್‌ಬೇಸ್ ಹೊಂದಿರುವ ಕಾರುಗಳಿಗೆ ಬಳಸಲಾಗುತ್ತದೆ. ಇವು ಸಿಂಗಲ್ ಚಾರ್ಜ್‌ನಲ್ಲಿ EV ಗಳಿಗೆ 800 ಕಿಮೀ ಮತ್ತು ವಿಸ್ತರಣೆಗಳಿಗೆ 1,200 ಕಿಮೀಗಿಂತ ಹೆಚ್ಚು ರೇಂಜ್ ಒದಗಿಸುತ್ತವೆ. ಎರಡೂ ವೇದಿಕೆಗಳು 800 V ಆರ್ಕಿಟೆಕ್ಚರ್ ಅನ್ನು ಬೆಂಬಲಿಸುತ್ತವೆ. ಮೈಕ್ರೋ ಇವಿಗೆ 20 kW ವಿದ್ಯುತ್ ಮೋಟರ್ ಒದಗಿಸಲಾಗಿದೆ.
ಪವರ್‌ಟ್ರೇನ್ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಸುರಕ್ಷತೆಯ ದೃಷ್ಟಿಯಿಂದ, ಬೆಸ್ಟೂನ್ Xiaoma ಡ್ರೈವರ್ ಸೈಡ್ ಏರ್‌ಬ್ಯಾಗ್ ಅನ್ನು ಪಡೆಯುತ್ತದೆ. ಆಯಾಮದಲ್ಲಿ, 3-ಬಾಗಿಲಿನ ಬೆಸ್ಟೂನ್ Xiaoma 3,000 mm ಉದ್ದ, 1,510 mm ಅಗಲ ಮತ್ತು 1,630 mm ಎತ್ತರವಿದೆ. ಇದು 1,953 ಎಂಎಂ ವೀಲ್‌ಬೇಸ್ ಹೊಂದಿದೆ.

FAW Bestune ಈ ವರ್ಷದ ಆರಂಭದಲ್ಲಿ ಶಾಂಘೈ ಆಟೋ ಶೋನಲ್ಲಿ ಬೆಸ್ಟೂನ್ Xiaoma ವನ್ನು ಅನಾವರಣಗೊಳಿಸಿತ್ತು. ಹಾರ್ಡ್‌ಟಾಪ್ ಮತ್ತು ಕನ್ವರ್ಟಿಬಲ್ ಎರಡೂ ಆವೃತ್ತಿಗಳನ್ನು ಪ್ರದರ್ಶಿಸಲಾಗಿದ್ದರೂ, ಕೇವಲ ಹಾರ್ಡ್‌ಟಾಪ್ ರೂಪಾಂತರವು ಪ್ರಸ್ತುತ ಬಿಡುಗಡೆಯಾಗಿದೆ. ಕನ್ವರ್ಟಿಬಲ್ ಆವೃತ್ತಿಯನ್ನು ನಂತರದ ದಿನಗಳಲ್ಲಿ ಪರಿಚಯಿಸಲಾಗುತ್ತದೆಯೇ ಎಂಬುದು ಖಚಿತವಾಗಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications