ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್ ತಯಾರಕ Xiaomi EV ಕಾರು
ಭಾರತವು ವಿಶ್ವದ ಜನಪ್ರಿಯ ವಾಹನ ತಯಾರಕರಿಗೆ ಪ್ರಮುಖ ಮಾರುಕಟ್ಟೆಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವು ಹೊಸ ವಿದೇಶಿ ಬ್ರಾಂಡ್‌ಗಳು ಭಾರತಕ್ಕೆ ಎಂಟ್ರಿ ಕೊಟ್ಟು ತಮ್ಮ ವಾಹನಗಳನ್ನು ಇಲ್ಲಿ ಮಾರಾಟ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದೀಗ ಪ್ರಮುಖ ಮೊಬೈಲ್ ಫೋನ್ ಕಂಪನಿ ಎಲೆಕ್ಟ್ರಿಕ್ ಕಾರನ್ನು ಭಾರತಕ್ಕೆ ಪರಿಚಯಿಸಲು ಸಜ್ಜಾಗಿದೆ.
ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi EV ವಾಹನಗಳನ್ನು ತಯಾರಿಸಲು ದೇಶದ ರಾಜ್ಯ ಯೋಜಕ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದಿಂದ (NDRC) ಅನುಮೋದನೆಯನ್ನು ಪಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮುಂದಿನ ವರ್ಷದ ಆರಂಭದಲ್ಲಿ ಕಾರುಗಳನ್ನು ಉತ್ಪಾದಿಸಲು ಈ ಸ್ಮಾರ್ಟ್‌ಫೋನ್ ತಯಾರಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಪ್ರಾರಂಭಿಸಲು ಕಂಪನಿಯು ಕೈಗಾರಿಕೆ ಮತ್ತು ಮಾಹಿತಿ ಸಚಿವಾಲಯದಿಂದ (MIIT) ಅನುಮತಿಯನ್ನು ಪಡೆಯಬೇಕು ಎಂದು ವರದಿಯಾಗಿದೆ. Xiaomi ಈಗಾಗಲೇ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಮೊಡೆನಾವನ್ನು ಬಹಿರಂಗಪಡಿಸಿದೆ, ಇದಕ್ಕೆ ಆಂತರಿಕವಾಗಿ MS11 ಕೋಡ್ ನೇಮ್ ನೀಡಲಾಗಿದೆ. ಇದು ಟೆಸ್ಲಾ ಮಾಡೆಲ್ ಎಸ್ ಗಿಂತ ಅಗ್ಗವಾಗಿ ಸಿಗಲಿದೆ ಎಂದು ನಂಬಲಾದ ಎಲೆಕ್ಟ್ರಿಕ್ ಸೆಡಾನ್ ಆಗಿದೆ.
Xiaomi ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಪ್ರಾರಂಭಿಸಿದ ನಂತರ, ಪ್ರಪಂಚದಾದ್ಯಂತ ಹಲವಾರು ಟೆಕ್ ದೈತ್ಯ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿದ್ದಾರೆ. ಉದಾಹರಣೆಗೆ, ಆಪಲ್ ಮತ್ತು ಸೋನಿಯಂತಹ ಜಾಗತಿಕ ಟೆಕ್ ದೈತ್ಯರು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿರುವುದು ಎಲ್ಲರಿಗು ತಿಳಿದೇ ಇದೆ.

ಸೋನಿ ತನ್ನ ಎಲೆಕ್ಟ್ರಿಕ್ ಕಾರಿನ ಮೂಲಮಾದರಿಯನ್ನು ಪ್ರದರ್ಶಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಈ ಕಾರನ್ನು ಕಂಪನಿಯು ಹೋಂಡಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಈ ಟೆಕ್ ಕಂಪನಿಗಳಿಗೆ ಡಿಸೈನ್ ಹಾಗೂ ವಾಹನ ರಚನೆಗೆ ಆಟೋ ಕಂಪನಿಗಳ ಸಹಕಾರ ಕಂಡಿತ ಬೇಕಾಗಿರುವುದರಿಂದ ಆರಂಭದಲ್ಲಿ ವಾಹನ ತಯಾರಕರು ಸಹಕರಿಸುವುದು ಅತಿ ಮುಖ್ಯವಾಗಿರುತ್ತದೆ ಎನ್ನಲಾಗಿದೆ.
ಇನ್ನು Xiaomi ಕುರಿತು ಹೇಳುವುದಾದರೆ ಕಂಪನಿಯು ಆಟೋಮೊಬೈಲ್ ವ್ಯವಹಾರದಲ್ಲಿ ಒಂದು ದಶಕದಲ್ಲಿ $ 10 ಶತಕೋಟಿ ಹೂಡಿಕೆಯನ್ನು ವಾಗ್ದಾನ ಮಾಡಿದೆ. EV ಮಾರುಕಟ್ಟೆಯನ್ನು ಪ್ರವೇಶಿಸಲು ಉದ್ದೇಶಿಸಿರುವ ಟೆಕ್ ಕಂಪನಿಯು 2024 ರ ಮೊದಲಾರ್ಧದಲ್ಲಿ ತನ್ನ ಮೊದಲ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಎಲ್ಲವು ಅಂದುಕೊಂಡಂತಾದರೆ ಟೆಕ್ ದೈತ್ಯರು ಆಟೋ ತಯಾರಕರಿಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಲಿದ್ದಾರೆ.
ಈಗಾಗಲೇ ಆಪಲ್ ತಯಾರಕರು ಭಾರತದಲ್ಲಿ ಉತ್ತಮ ಮಾರಾಕಟ್ಟೆಯಿರುವುದನ್ನು ಮನಗಂಡಿದ್ದಾರೆ. ನಮ್ಮ ಕಾರುಗಳಿಗೆ ಉತ್ತಮ ಬೇಡಿಕೆ ಲಭ್ಯವಾದರೆ ಕಂಡಿತ ಪರಿಚಯಿಸುವುದಾಗಿ ಇತ್ತೀಚೆಗೆ ಕಂಪನಿಯು ಹೆಳಿಕೊಂಡಿತ್ತು. ಇನ್ನೇನು ಟೆಕ್ ದೈತ್ಯರ ಆಟೋ ವಲಯಕ್ಕೆ ಎಂಟ್ರಿ ಕೊಡುವುದು ತುಂಬಾ ದೂರವೇನಿಲ್ಲ, ಮುಂಬರುವ ಕೆಲವೇ ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನನೊಂದಿಗೆ ತಮ್ಮ ಕಾರುಗಳನ್ನು ಮಾರುಕಟ್ಟೆಗೆ ಇಳಿಸಲಿದ್ದಾರೆ.
ಈ ಎಲೆಕ್ಟ್ರಿಕ್ ವಾಹನಗಳ ವಾಹನ ರಚನೆಯೊಂದನ್ನು ಬಿಟ್ಟರೆ ಮಿಕ್ಕೆಲ್ಲವೂ ಟೆಕ್ನಾಲಜಿಯ ಮೇಲೆಯೇ ಆಧಾರವಾಗಿರುತ್ತವೆ. ಹಾಗಾಗಿ ಮೊಬೈಲ್ ಫೋನ್ ತಯಾರಕರಿಗೆ ಬ್ಯಾಟರಿ, ಟೆಕ್ನಾಲಜಿಯ ಬಗ್ಗೆ ಆಳವಾದ ಅನುಭವವಿರುವುದರಿಂದ ಇವಿ ಕಾರುಗಳ ತಯಾರಿಗೆ ಅವರು ತುಂಬಾ ಶ್ರಮಿಸುವ ಅಗತ್ಯವಿಲ್ಲ ಎಂಬುದು ಅವರ ವಿಶ್ವಾಸವಾಗಿದೆ. ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications