ವರ್ಷಾಂತ್ಯದ ಭರ್ಜರಿ ಡಿಸ್ಕೌಂಟ್... ಎಲೆಕ್ಟ್ರಿಕ್ ಕಾರುಗಳ ಮೇಲೆ ರೂ. 4 ಲಕ್ಷದವೆರೆಗೆ ರಿಯಾಯಿತಿ
ಭಾರತದ ಆಟೋ ಉದ್ಯಮಲ್ಲಿ ವರ್ಷಾಂತ್ಯದ ಡಿಸೆಂಬರ್ ತಿಂಗಳು ಪ್ರಮುಖ ಪಾತ್ರ ವಹಿಸುತ್ತದೆ. ಹಳೆಯ ಸ್ಟಾಕ್ ಅನ್ನು ಮಾರಾಟ ಮಾಡಲು ಹೆಚ್ಚು ಡಿಸ್ಕೌಂಟ್‌ಗಳನ್ನು ನೀಡಲು ಮುಂದಾಗುತ್ತಾರೆ. ಸದ್ಯ ವಿವಿಧ ಕಾರು ಕಂಪನಿಗಳ ಎಲೆಕ್ಟ್ರಿಕ್ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಯಾವೆಲ್ಲಾ ಮಾದರಿಗಳಿಗೆ ಎಷ್ಟು ಡಿಸ್ಕೌಂಟ್ ಎಂಬುದನ್ನು ಇಲ್ಲಿ ನೋಡೋಣ.
ಭಾರತದಲ್ಲಿ ಡಿಸೆಂಬರ್ ತಿಂಗಳಿಗೆ mahindra XUV400 ಎಲೆಕ್ಟ್ರಿಕ್ SUV ಅನ್ನು ರೂ. 4.2 ಲಕ್ಷದ ವರೆಗಿನ ಬೃಹತ್ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಆಫರ್‌ಗಳು ಡಿಸೆಂಬರ್ ತಿಂಗಳಾಂತ್ಯದವರೆಗೆ ಮಾತ್ರ ಇರುತ್ತವೆ ಎಂಬುದನ್ನು ಗಮನಿಸಬೇಕು. ಹಾಗೆಯೇ ಪ್ರಾಂತ್ಯವಾರು ಆಫರ್‌ಗಳಲ್ಲಿ ವ್ಯತ್ಯಾಸ ಇರುವುದರಿಂದ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಇನ್ನು ಮಹೀಂದ್ರಾ XUV400 ಎಲೆಕ್ಟ್ರಿಕ್ ಮಾದರಿಯ ಪ್ರತಿಸ್ಪರ್ಧಿಗಳಲ್ಲಿ ಒಂದಾದ MG ZS EV ಕಾರಿನ ಬೆಲೆಗಳನ್ನು ಕೆಲ ತಿಂಗಳ ಹಿಂದೆಯಷ್ಟೆ 2.2 ಲಕ್ಷ ರೂ. ಕಡಿಮೆ ಮಾಡಲಾಗಿದೆ. ಇದೀಗ ವರ್ಷಾಂತ್ಯದ ಡಿಸ್ಕೌಂಡ್ ಕೂಡ ಘೋಷಿಸಿದ್ದಾರೆ. MG ZS EV ರೂ.50,000 ವರೆಗಿನ ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ. ರೂ.50,000 ವಿನಿಮಯ ಬೋನಸ್ ಜೊತೆಗೆ ಕಾರ್ಪೊರೇಟ್ ಮತ್ತು ಲಾಯಲ್ಟಿ ಬೋನಸ್‌ಗಳು ಕೂಡ ಒಳಗೊಂಡಿವೆ.
ಟಾಟಾ ಮೋಟಾರ್ಸ್ ಇತ್ತೀಚೆಗೆ ಫೇಸ್‌ಲಿಫ್ಟೆಡ್ ನೆಕ್ಸಾನ್ EV ಅನ್ನು ಪರಿಚಯಿಸಿತು. ಇದು ಈ ತಿಂಗಳು ಗಮನಾರ್ಹ ರಿಯಾಯಿತಿಗಳನ್ನು ಪಡೆದಿಲ್ಲವಾದರೂ, ಹಳೆ-ಫೇಸ್‌ಲಿಫ್ಟೆಡ್ ಮಾಡೆಲ್ ಕಂಡುಬಂದರೆ, ಉತ್ತಮ ಕೊಡುಗೆಗಳನ್ನು ವಿತರಕರೊಂದಿಗೆ ಮಾತುಕತೆ ನಡೆಸಬಹುದು. Tata Tigo EV ಗಾಗಿ ಯಾವುದೇ ಕೊಡುಗೆಗಳಿಲ್ಲದಿದ್ದರೂ, Kia EV6 ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಕ್ರಾಸ್‌ಒವರ್ ಉತ್ತಮ ಡೀಲರ್-ಮಟ್ಟದ ಪ್ರಯೋಜನಗಳನ್ನು ಹೊಂದಬಹುದು ಎಂದು ಹೇಳಲಾಗುತ್ತಿದೆ.

Tata Tigor EV ಅನ್ನು ಸ್ಟಾಕ್ ಲಭ್ಯತೆ ಮತ್ತು ಸ್ಥಳವನ್ನು ಆಧರಿಸಿ ಆಯ್ದ ಟ್ರಿಮ್‌ಗಳಲ್ಲಿ ಡೀಲರ್-ಎಂಡ್ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ. ಹಾಗೆಯೇ ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ MG ಕಾಮೆಟ್ EV ಅನ್ನು ಈ ತಿಂಗಳು ಲಾಯಲ್ಟಿ ಬೋನಸ್‌ನೊಂದಿಗೆ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ರೂ.20,000 ಲಾಯಲ್ಟಿ ಬೋನಸ್ ಮತ್ತು ಮೊದಲ ವರ್ಷ ವಿಮೆ ಜೊತೆಗೆ 5,000 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ.
ಹ್ಯುಂಡೈ Ioniq 5 ಸೇರಿದಂತೆ ಹಲವು ಇನ್ನೂ ಹಲವು ಮಾದರಿಗಳಿಗೆ ವರ್ಷಾಂತ್ಯದಲ್ಲಿ ಯಾವುದೇ ಗಮನಾರ್ಹ ಕೊಡುಗೆಗಳನ್ನು ನೀಡಿಲ್ಲ. ಉಳಿದಂತೆ ಮೇಲೆ ತಿಳಿಸಿರುವ ಮಾದರಿಗಳು ತಿಂಗಳಾಂತ್ಯದವರೆಗೆ ಮಾತ್ರ ಆಫರ್‌ನಲ್ಲಿ ಇರುತ್ತವೆ. ಹಾಗೆಯೇ ನಾವು ಇಲ್ಲಿ ಹೇಳಲಾಗಿರುವ ಎಲ್ಲಾ ರಿಯಾಯಿತಿ ಡೀಲ್‌ಗಳು ಸ್ಟಾಕ್, ಡೀಲರ್ ಮತ್ತು ಸ್ಥಳದ ಲಭ್ಯತೆಗೆ ಒಳಪಟ್ಟಿರುತ್ತವೆ.

ದೇಶದಲ್ಲಿ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಭಾರೀ ಸಂಖ್ಯೆಯಲ್ಲಿ ಬಿಡುಗಡೆಯಾಗಲಿವೆ. ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಟೊಯೋಟಾ ಮತ್ತು ಹೋಂಡಾದಂತಹ ಬ್ರ್ಯಾಂಡ್‌ಗಳು ಮಿಡ್ ಸೈಜ್ ಎಲೆಕ್ಟ್ರಿಕ್ SUV ಸೆಗ್‌ಮೆಂಟ್‌ಗಳನ್ನು ಗುರಿಯಾಗಿರಿಸಿಕೊಂಡು ಹೊಸ ಇವಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಿದ್ದಾರೆ.
2024 ರಲ್ಲಿ ಟಾಟಾದ Curvv EV ಮತ್ತು XUV700 ಆಧಾರಿತ ಮಹೀಂದ್ರಾ XUV.e8 ಅನ್ನು ಈಗಾಗಲೇ ದೃಢೀಕರಿಸಲಾಗಿದೆ. ಆದರೆ ಮಾರುತಿ ಸುಜುಕಿ eVX ಮತ್ತು ಇದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಳ್ಳಲಿರುವ ಟೊಯೋಟಾದ ಇವಿಯನ್ನು 2025 ರಲ್ಲಿ ತರಲು ಯೋಜಿಸಲಾಗಿದೆ. ಮುಂಬರಲಿರುವ ಈ ಇವಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








