ಟಾಟಾದ ಈ ಕಾರಿಗೆ ಬರೋಬ್ಬರಿ 3.15 ಲಕ್ಷದವರೆಗೆ ಡಿಸ್ಕೌಂಟ್: ಇದಕ್ಕಿಂತ ಒಳ್ಳೆ ಆಫರ್ ಸಿಗಲಾರದು!
ಟಾಟಾ ಮೋಟಾರ್ಸ್‌ನ ಕಾರುಗಳೆಂದರೆ ಅದು ಕೇವಲ ಕಾರು ಮಾತ್ರವಲ್ಲ. ಜನ ಸಾಮಾನ್ಯನ ರಕ್ಷಾ ಕವಚ. ಈ ಟಾಟಾ ಕಾರುಗಳಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಕಾರು ಮಾದರಿಯ ಪಟ್ಟಿಯಲ್ಲಿ ಪ್ರಮುಖವಾದ ಕಾರುಗಳ ಸಾಲಿಗೆ ಸೇರುವ ಕಾರು ಟಾಟಾ ನೆಕ್ಸಾನ್. ಅದರಲ್ಲೂ ಟಾಟಾ ನೆಕ್ಸಾನ್ ಇವಿಯಂತೂ ಎಲ್ಲರಿಗೂ ಅಚ್ಚುಮೆಚ್ಚು.
ಇದೀಗ ಟಾಟಾ ನೆಕ್ಸಾನ್ ಇವಿ (TATA Nexon EV) ಕಾರಿನ ಮೇಲೆ ಟಾಟಾ ನಂಬಲಾರದಷ್ಟು ದೊಡ್ಡ ಮೊತ್ತದ ಆಫರ್ ಅನ್ನು ನೀಡಿದೆ. ಹೌದು, ಈಗ ನಿಮ್ಮಲ್ಲಿ ಯಾರಾದರೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಅನ್ನು ಕೊಳ್ಳುವವರಿದ್ದರೆ, ಬರೋಬ್ಬರಿ 3.15 ಲಕ್ಷದವೆರೆಗೆ ಡಿಸ್ಕೌಂಟ್ ಸಿಗುತ್ತಿದ್ದು, ಹೊಸ ಕಾರು ಪ್ರೀಯರಿಗೆ ಈ ಆಫರ್ ವರದಾನವಾಗಿ ಪರಿಣಮಿಸಲಿದೆ.

ಮಾಹಿತಿಗಳ ಪ್ರಕಾರ ಹಳೆ ಮಾದರಿಯ ಟಾಟಾ ನೆಕ್ಸಾನ್ ಇವಿಗಳಿಗೆ ಈ ಆಫರ್ ಸಿಗುತ್ತಿದ್ದು, 2023 ರಲ್ಲಿ ತಯಾರಾದ ಕಾರುಗಳನ್ನು ಮಾರುವುದಕ್ಕಾಗಿ ಟಾಟಾ ಈ ಆಫರ್ ಅನ್ನು ನೀಡುತ್ತಿದೆ ಎಂದು ತಿಳಿದು ಬಂದಿದೆ. ಟಾಟಾ ನೆಕ್ಸಾನ್ ಪ್ರೈಮ್ ಇವಿಯು 2.30 ಲಕ್ಷದ ಕ್ಯಾಶ್ ಡಿಸ್ಕೌಂಟ್ ಅನ್ನು ಪಡೆಯಲಿದ್ದು, ಇದರ ಜೊತೆಗೆ 50 ಸಾವಿರ ರೂಗಳ ಎಕ್ಸ್‌ಚೇಂಜ್ ಆಫರ್ ಸಹ ಸಿಗಲಿದೆ.
ಇದೇ ಸಂಧರ್ಭದಲ್ಲಿ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಸುಮಾರು 2.65 ಲಕ್ಷ ಕ್ಯಾಶ್ ಡಿಸ್ಕೌಂಟ್ ಮತ್ತು ಸುಮಾರು 50 ಸಾವಿರ ರೂಗಳ ಎಕ್ಸ್‌ಚೇಂಜ್ ಆಫರ್ ಸಹ ಸಿಗಲಿದೆ. ಈ ಆಫರ್ ಈ ತಿಂಗಳವರೆಗೆ ಇದ್ದು, ಹಳೆಯ ಕಾರುಗಳ ಸ್ಟಾಕ್ ಮುಗಿಯುವವರೆಗೂ ಗ್ರಾಹಕರಿಗೆ ಈ ಡಿಸ್ಕೌಂಟ್ ಸಿಗಲಿದೆ ಎನ್ನಲಾಗುತ್ತಿದೆ.

ನೆಕ್ಸಾನ್ ಇವಿ ಪ್ರೈಮ್‌ನಲ್ಲಿ ನಿಮಗೆ 30.2kWh ಬ್ಯಾಟರಿ ಪ್ಯಾಕ್ ಸಿಗಲಿದ್ದು, ಈ ಕಾರಿನಲ್ಲಿ ಸುಮಾರು 129 ಹೆಚ್‌ಪಿ ಎಲೆಕ್ಟ್ರಿಕ್ ಮೋಟಾರ್ ಸಿಗುತ್ತದೆ. ARAI ಪ್ರಕಾರ ಈ ಕಾರು 312 ಕಿಮೀ ರೇಂಜ್ ನೀಡುತ್ತದೆ. ಅದೇ ರೀತಿ ಸುಮಾರು 143 ಹೆಚ್‌ಪಿ ಮೋಟಾರ್ ಜೊತೆಗೆ ಬರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ARAI ಪ್ರಕಾರ ಸುಮಾರು 437 ಕಿಮೀ ರೇಂಜ್ ಅನ್ನು ನೀಡುತ್ತದೆ.
ಇನ್ನು ಹೊಸ ನೆಕ್ಸಾನ್ ಫೇಸ್‌ಲಿಫ್ಟ್‌ನ ವಿಶೇಷತೆಗಳನ್ನು ನೋಡುವುದಾದರೆ, ನೆಕ್ಸಾನ್ ಇವಿಯೂ ಕಂಪನಿಯ ಕರ್ವ್ವ್ (ಕಾನ್ಸೆಪ್ಟ್) ಎಸ್‌ಯುವಿಯ ವಿನ್ಯಾಸವನ್ನು ಆಧರಿಸಿದೆ. ಅತ್ಯಾಧುನಿಕ ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ ಸ್ಟ್ರಿಪ್, ನೂತನ ಕನೆಕ್ಟ್ದ್ ರೇರ್ ಲೈಟ್ಸ್, ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ. ಜೊತೆಗೆ, ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್ ಫ್ಲೇಮ್ ರೆಡ್ ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಈ ಕಾರು, ಯುವ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಪಡೆದಿದ್ದು, ಮುಖ್ಯವಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನ್, ಏರ್ ಪ್ಯೂರಿಫೈಯರ್, JBL ಆಡಿಯೊ ಸಿಸ್ಟಮ್ ಮತ್ತು ಸನ್‌ರೂಫ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications