ಕಾಯುವಿಕೆ ಅಂತ್ಯ.. ನಾಳೆ ಜನಪ್ರಿಯ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ, 5-ಸೀಟರ್.. ಬೆಲೆ ಎಷ್ಟಿರಲಿದೆ?

ಎಂಜಿ ಮೋಟಾರ್ (MG Motor) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ನಾಳೆ (ಸೆಪ್ಟೆಂಬರ್ 11) ಹೊಚ್ಚ ಹೊಸ ವಿಂಡ್ಸರ್ ಇವಿಯನ್ನು (Windsor EV) ಬಿಡುಗಡೆ ಮಾಡಲಿದೆ. ಇದೊಂದು ಎಲೆಕ್ಟ್ರಿಕ್ ಕಾರಾಗಿದ್ದು, ಹಲವಾರು ಬಾರಿ ಪ್ರಾಯೋಗಿಕ ಸಂಚಾರ ನಡೆಸುವಾಗಲೂ ಕಂಡುಬಂದಿದೆ. ಟೀಸರ್ ಮೂಲಕ ಕಂಪನಿಯು ಈ ಕಾರಿನ ಕುರಿತಂತೆ ಒಂದಷ್ಟು ವಿಚಾರಗಳನ್ನು ಬಹಿರಂಗಪಡಿಸಿದೆ. ಬನ್ನಿ.. ನೂತನ ಕಾರಿನ ನಿರೀಕ್ಷಿತ ಬೆಲೆ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ತಿಳಿಯೋಣ.

ಬೆಲೆ: ನೂತನ ಎಂಜಿ ವಿಂಡ್ಸರ್ ಇವಿ (MG Windsor EV) ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಸರಿ ಸುಮಾರು ರೂ.20 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿರಬಹುದು ಎನ್ನಲಾಗಿದೆ. ಈ ಕಾರಿಗೆ ಟಾಟಾ ಕರ್ವ್ ಇವಿ (Tata Curvv EV) ಮತ್ತು ಬಿವೈಡಿ ಇ6 (BYD e6) ಮಾದರಿಗಳು ತೀವ್ರವಾಗಿ ಸ್ಪರ್ಧೆಯೊಡ್ಡಲಿವೆ.

2024 New MG Windsor Electric Car Launch Tomorrow Expected Price And Features Details

ವಿನ್ಯಾಸ: ಈ ಕಾರಿನ ವಿನ್ಯಾಸ (ಡಿಸೈನ್) ಹೇಗಿರಲಿದೆ ಎಂಬುದು ಕಂಪನಿಯು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ಹಲವು ಟೀಸರ್‌ಗಳಿಂದ ಬಹುತೇಕ ಖಚಿತವಾಗಿದೆ. ಹೊಸ ಎಂಜಿ ವಿಂಡ್ಸರ್ ಇವಿ ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾಗಿಲಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಮುಂಭಾಗದ (ಫ್ರಂಟ್) ಫೆಂಡರ್‌ನಲ್ಲಿ ಮೌಂಟೆಡ್ ಚಾರ್ಜಿಂಗ್ ಪೋರ್ಟ್ ಹಾಗೂ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ಷಮತೆ: ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು, 50.6 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ನಿರೀಕ್ಷೆಯಿದೆ. ಭರ್ತಿ ಚಾರ್ಜ್‌ನಲ್ಲಿ ಸರಿ ಸುಮಾರು 460 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡಬಹುದು ಎಂದು ಹೇಳಲಾಗಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 136 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಧ್ಯತೆಯಿದೆ.

ಆಸನ ಆಯ್ಕೆ & ವೈಶಿಷ್ಟ್ಯಗಳು: ಎಂಜಿ ವಿಂಡ್ಸರ್, 5-ಆಸನ ವ್ಯವಸ್ಥೆಯಲ್ಲಿ ಮಾರಾಟಕ್ಕೆ ಬರಬಹುದು. ಈ ಮೊದಲೇ ನೂತನ ಕಾರು ದೊಡ್ಡದಾಗಿರುವ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಪನೊರೊಮಿಕ್ ಸನ್‌ರೂಫ್‌ ಒಳಗೊಂಡಿರಲಿದೆ ಎಂಬುದು ಟೀಸರ್ ಫೋಟೋಗಳಿಂದ ಸ್ಪಷ್ಟವಾಗಿದೆ. ಇದರೊಂದಿಗೆ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಡಿಜಿಟಲ್-ಇನ್ಸ್ಟ್ರುಮೆಂಟ್ ಪ್ಯಾನೆಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಸುರಕ್ಷತಾ ವೈಶಿಷ್ಟ್ಯಗಳು: ಈ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುವ ನಿರೀಕ್ಷೆಯಿದೆ. ಸುರಕ್ಷತೆಯ ಸಲುವಾಗಿ 6 - ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಆದರೆ, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ರಕ್ಷಣಾತ್ಮಕ ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ ಎನ್ನಲಾಗಿದೆ.

ಒಟ್ಟಾರೆ, ನಾಳೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಂಜಿ ವಿಂಡ್ಸರ್ ಇವಿ ಬಗ್ಗೆ ಗ್ರಾಹಕರಿಗೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಈ ಕಾರು ನಿರೀಕ್ಷಿತ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಮುಂಬರುವ ಹಬ್ಬದ ಋತುವಿನಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಬೇಕು ಎಂದು ನೀವು ಆಲೋಚಿಸಿದ್ದರೆ.. ಇದು ಉತ್ತಮ ಆಯ್ಕೆಯಾಗಲಿದೆ ಎಂಬುದು ಆಟೋಮೊಬೈಲ್ ತಜ್ಞರ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, September 10, 2024, 15:26 [IST]
English summary
2024 new mg windsor electric car launch tomorrow expected price and features details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+