ಈ ಕಾರಿನ ಫೇಸ್‌ಲಿಫ್ಟ್ ಪೆಟ್ರೋಲ್, ಡೀಸೆಲ್ ಆಯ್ಕೆಯಲ್ಲಿ ಶೀಘ್ರವೇ ಮಾರುಕಟ್ಟೆಗೆ: ಇನ್ನೋವಾ ಎದೆಯಲ್ಲಿ ನಡುಕ!
ಭಾರತಕ್ಕೆ ಕಾಲಿಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಅತೀ ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದಿದ ಕಾರು ಕಂಪನಿಗಳಲ್ಲಿ ಕಿಯಾ ಪ್ರಮುಖವಾದುದು. ಭಾರತದಲ್ಲಿ ಈ ಕಂಪನಿ ತನ್ನ ಕೆಲವೇ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದೆಯಾದರೂ, ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಿಯಾದ ಪ್ರಮುಖ ಕಾರು ಮಾದರಿಗಳೆಂದರೆ ಸೆಲ್ಟೋಸ್, ಸಾನೆಟ್ ಮತ್ತು ಕಿಯಾ ಕಾರೆನ್ಸ್.
ಇತ್ತೀಚೆಗಷ್ಟೇ ಕಿಯಾ, ತನ್ನ ಸೆಲ್ಟೋಸ್ ಮತ್ತು ಸಾನೆಟ್ ಕಾರು ಮಾದರಿಗಳಿಗೆ ಫೇಸ್‌ಲಿಫ್ಟ್ ಟಚ್ ಅನ್ನು ನೀಡಿ ಮಾರುಕಟ್ಟೆಗೆ ತಂದಿತ್ತು . ಇದೀಗ ಕಿಯಾ ಕಾರೆನ್ಸ್ ತನ್ನ ಕಂಪನಿ ಕಡೆಯಿಂದ ಫೇಸ್‌ಲಿಫ್ಟ್ ಟಚ್ ಪಡೆಯಲು ಕಾಯುತ್ತಿದ್ದು, ಈಗಾಗಲೇ ಈ ಕೆಲಸದಲ್ಲಿ ಕಿಯಾ ತೊಡಗಿದ್ದು ಮಾಹಿತಿಗಳ ಪ್ರಕಾರ ಮುಂದಿನ ವರ್ಷ ಈ ಕಾರಿನ ಫೇಸ್‌ಲಿಫ್ಟ್ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಈಗಾಗಲೇ ಈ ಕಾರಿನ ಪರೀಕ್ಷಾರ್ಹ ಡ್ರೈವ್‌ಗಳು ಭಾರತೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದು ಅಲ್ಲೊಮ್ಮೆ ಇ್ಲೊಮ್ಮೆ ಈ ಕಾರಿನ ಚಿತ್ರವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ. ಮಾಹಿತಿಗಳ ಪ್ರಕಾರ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮತ್ತು ಕಾರೆನ್ಸ್ ಪೇಸ್‌ಲಿಫ್ಟ್‌ಗಳ ನಡುವೆ ಡಿಸೈನ್‌ನಲ್ಲಿ ಹಲವಾರು ಹೋಲಿಕೆಗಳನ್ನು ಕಾಣಬಹುದಾಗಿದೆ ಎನ್ನಲಾಗುತ್ತಿದೆ.
ಕಿಯಾ ಸೆಲ್ಟೋಸ್ ಪೇಸ್‌ಲಿಫ್ಟ್ ಕಾರಿನ ಹೆಡ್‌ಲೈಟ್ ಮತ್ತು ಟೇಲ್ ಲೈಟ್‌ಗಳ ರೀತಿಯ ವಿನ್ಯಾಸವನ್ನೇ ನಾವು ಕಿಯಾ ಕಾರೆನ್ಸ್ ಫೇಸ್‌ಲಿಫ್ಟ್‌ನಲ್ಲೂ ಕಾಣಬಹುದು ಎನ್ನಲಾಗುತ್ತಿದೆ. ಈ ಕಾರು ಹೆದ್ದಾರಿಗೆ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ರೂಪಾಂತರದಲ್ಲಿ ಲಗ್ಗೆ ಇಡಲಿದ್ದು, ಇದರಿಂದಾಗಿ ಈ ಕಾರಿನ ಮಾರಾಟ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳಿದೆ ಎಂಬುದು ಕಾರು ಪಂಡಿತರ ಅಭಿಪ್ರಾಯ.

ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರೆನ್ಸ್ ಬಗ್ಗೆ ನೋಡುವುದಾದರೆ, ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.
ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡುತ್ತಿದೆ.

ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿತ್ತು. ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಿದ್ದು ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








