ಭರ್ಜರಿ ಮೈಲೇಜ್‌ನ ಹೊಸ ಎಂಜಿ ZS ಹೈಬ್ರಿಡ್ ಎಸ್‍ಯುವಿಯ ವಿಶೇಷತೆಗಳು
ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡ ಎಂಜಿ ತನ್ನ 2025ರ ಎಂಜಿ ZS ಹೈಬ್ರಿಡ್+ (MG ZS Hybrid+) ಎಸ್‍ಯುವಿಯನ್ನು ಅನಾವರಣಗೊಳಿಸಿತು. ಎಂಜಿಯ ZS ಹೈಬ್ರಿಡ್+ ಮಾದರಿಯನ್ನು ಎಂಜಿ ZS ಸರಣಿಗೆ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪರಿಚಯಿಸಿದೆ. ಭಾರತೀಯ ಗ್ರಾಹಕರು ಈಗಾಗಲೇ ಎಂಜಿ ZS ಇವಿ ಮತ್ತು ಐಸಿಇ-ಚಾಲಿತ ಪ್ರತಿರೂಪವಾದ ಎಂಜಿ ಆಸ್ಟರ್‌ನೊಂದಿಗೆ ಪರಿಚಿತರಾಗಿದ್ದಾರೆ. ಹೊಸ ಎಂಜಿ ZS ಹೈಬ್ರಿಡ್ ZS ಕುಟುಂಬಕ್ಕೆ ಮೂರನೇ ಪವರ್‌ಟ್ರೇನ್ ಆಯ್ಕೆಯನ್ನು ಕೂಡ ಈಗ ಸೇರಿಸಿದ್ದಾರೆ. ಇದರೊಂದಿಗೆ ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಒಳಗೊಂಡಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಎಂಜಿನ್: ಹೊಸ ಎಂಜಿ ZS ಹೈಬ್ರಿಡ್+ ಎಸ್‍ಯುವಿಯಲ್ಲಿ MG3 ಮಾದರಿಯಿಂದ 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು 101 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮಾರ್ಥ್ಯವನ್ನು ಹೊಂದಿದೆ. ಇದರೊಂದಿಗೆ 100 kW (134 bhp) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಸಂಯೋಜಿತವಾಗಿ 192 bhp ಮತ್ತು 465 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು 1.83 kWh ಬ್ಯಾಟರಿ ಪ್ಯಾಕ್‌ನಿಂದ ಬೆಂಬಲಿತವಾಗಿದೆ. ಹೊಸ ZS ಹೈಬ್ರಿಡ್ ಸುಧಾರಿತ ಡ್ರೈವರ್-ಅಸಿಸ್ಟ್ ಸಿಸ್ಟಂ (ADAS) ಸಹ ಹೊಂದಿದೆ. ಇದು ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್-ಕೀಪ್ ಅಸಿಸ್ಟ್, ಲೇನ್ ನಿರ್ಗಮನ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಹಿಂಬದಿ ಕ್ರಾಸ್-ಟ್ರಾಫಿಕ್ ಎವಾನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಇತರ ವೈಶಿಷ್ಟ್ಯಗಳಿಗಾಗಿ ಪಾದಚಾರಿ ಮತ್ತು ಸೈಕ್ಲಿಸ್ಟ್ ಪತ್ತೆಯನ್ನು ಒಳಗೊಂಡಿದೆ.
ವಿನ್ಯಾಸ: ಹೊಸ ಎಂಜಿ ZS ಹೈಬ್ರಿಡ್ ಎಸ್‍ಯುವಿಯು ಸಂಪೂರ್ಣವಾಗಿ ಪರಿಷ್ಕರಿಸಿದ ಬಾಹ್ಯ ವಿನ್ಯಾಸವನ್ನು ಹೊಂದಿದೆ. ಇದು ಈಗ ಕೆಳಭಾಗದಲ್ಲಿ ದೊಡ್ಡದಾದ ಗ್ರಿಲ್‌ನೊಂದಿಗೆ ಸ್ಪೋರ್ಟಿಯರ್ ನೋಟವನ್ನು ಹೊಂದಿದೆ. ಅಗ್ರೇಸಿವ್ ಲುಕ್ ಹೊಂದಿರುವ ಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಏರ್ ಇನ್‌ಟೇಕ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಅನ್ನು ಹೊಂದಿದೆ.

ಈ ಹೊಸ ಎಂಜಿ ZS ಹೈಬ್ರಿಡ್ ಎಸ್‍ಯುವಿಯು ಪರಿಷ್ಕೃತ ವ್ಹೀಲ್ ಅರ್ಚಾರ್ ಮತ್ತು ಹೊಸ ಅಲಾಯ್ ವ್ಹೀಲ್ ಗಳನ್ನು ಹೊರತುಪಡಿಸಿ ಪ್ರೊಫೈಲ್ ಹೆಚ್ಚಾಗಿ ಬದಲಾಗದೆ ಉಳಿದಿದೆ. ಹಿಂಭಾಗದಲ್ಲಿ, ಇದು ಹೊಸ LED ಟೈಲ್‌ಲೈಟ್‌ಗಳು, ನವೀಕರಿಸಿದ ಬಂಪರ್ ಮತ್ತು ಹಿಂದಿನ ತಲೆಮಾರಿನ BMW X1 ನ ಹಿಂಭಾಗಕ್ಕೆ ಗಮನಾರ್ಹವಾದ ಹೋಲಿಕೆಯನ್ನು ಹೊಂದಿರುವ ನವೀಕರಿಸಿದ ಟೈಲ್‌ಗೇಟ್ ಅನ್ನು ಪಡೆಯುತ್ತದೆ.
2025ರ ಎಂಜಿ ZS ಹೈಬ್ರಿಡ್ ಎಸ್‍ಯುವಿಯ ಒಳಭಾಗದಲ್ಲಿ ಗಮನಾರ್ಹವಾದ ನವೀಕರಣಗಳನ್ನು ನೋಡುತ್ತದೆ. ಇದು ಟ್ವಿನ್ ಡಿಸ್ ಪ್ಲೇಗಳನ್ನು ಒಳಗೊಂಡಿದೆ. ಈ ಎಸ್‍ಯುವಿ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು 12.3-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಇತರ ಬದಲಾವಣೆಗಳಲ್ಲಿ ಲಂಬವಾಗಿ ಜೋಡಿಸಲಾದ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಹೊಸ ಏರ್ ವೆಂಟ್‌ಗಳು ಮತ್ತು ನವೀಕರಿಸಿದ ಸ್ಟೀರಿಂಗ್ ವ್ಹೀಲ್ ಅನ್ನು ಸೇರಿವೆ.

ಫೀಚರ್ಸ್: ಪ್ರಮುಖ ಫೀಚರ್ಸ್ ಗಳೆಂದರೆ ಆಟೋ ಹೆಡ್‌ಲ್ಯಾಂಪ್‌ಗಳು, ಕೀಲೆಸ್ ಎಂಟ್ರಿ, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳನ್ನು ಹೊಂದಿವೆ. ಈ ಎಸ್‍ಯುವಿಯು ಇಕೋ, ಸ್ಪೋರ್ಟ್, ನಾರ್ಮಲ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ. ಮುಂಭಾಗದಲ್ಲಿ ಕ್ಯಾಬಿನ್ ಹಿಟೆಡ್ ಸೀಟುಗಳು ಮತ್ತು ಸ್ಟೀರಿಂಗ್ ವೀಲ್, 6ವೇ ಪವರ್ ಹೊಂದಾಣಿಕೆ ಚಾಲಕ ಸೀಟು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ 360-ಡಿಗ್ರಿ ಕ್ಯಾಮೆರಾವನ್ನು ಸಹ ನೀಡುತ್ತದೆ.
ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳ ಜೊತೆಗೆ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ನವೀಕರಿಸಿದ ಎಂಜಿ ZS ಆಸ್ಟರ್ ಮತ್ತು ZS ಇವಿ ಮಾದರಿಗಳಲ್ಲಿ ಈ ದೃಶ್ಯ ಮತ್ತು ವೈಶಿಷ್ಟ್ಯ ಬದಲಾವಣೆಗಳೊಂದಿಗೆ ಭಾರತಕ್ಕೆ ದಾರಿ ಮಾಡಿಕೊಡಲು ಸಿದ್ಧವಾಗಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನಂತಹ ಅಸ್ತಿತ್ವದಲ್ಲಿರುವ ಹೈಬ್ರಿಡ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








