230 ಕಿಮೀ ರೇಂಜ್‌ 7 ಲಕ್ಷ ರೂ. ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು: ಟಾಟಾ, ಮಹೀಂದ್ರಾ ಕಂಪನಿಯದ್ದಲ್ಲ!

ಎಲೆಕ್ಟ್ರಿಕ್‌ ಕಾರುಗಳು ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಕಾಲದಲ್ಲಿ ಹಲವಾರು ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಧುಮುಕುತ್ತಿವೆ. ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಬಹುತೇಕ ಎಲ್ಲಾ ಕಾರು ನಿರ್ಮಾಣ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆ ಗೊಳಿಸುತ್ತಿದೆ. ಸಾಧಾರಣವಾಗಿ ಪೆಟ್ರೋಲ್‌ ಅಥವಾ ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್‌ ಕಾರುಗಳ ಬೆಲೆ ಸಾಕಷ್ಟು ಹೆಚ್ಚಿರುತ್ತದೆ. ಅದು ಆಯಾ ಕಾರಿನಲ್ಲಿ ಇಟ್ಟಿರುವ ಬ್ಯಾಟರಿ ಮತ್ತು ಮೋಟಾರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವಿಂದು ಭಾರತದಲ್ಲಿನ ಸಾಮಾನ್ಯ ವರ್ಗದವರೂ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರಿನ ಕುರಿತಾಗಿ ನೋಡಲಿದ್ದೇವೆ.

ಹೌದು, ಈ ಕಾರಿನ ಬೆಲೆ ಆರಂಭವಾಗುವುದು 7 ಲಕ್ಷ ರೂಗಳಿಂದ. ಈ ಬೆಲೆಗೆ ಇದರ (MG Comet) ರೇಂಜ್‌ ಸುಮಾರು 230 ಕಿಮೀ. ಹೌದು, ನಾವು ಮಾತನಾಡುತ್ತಿರುವುದು ಸಾಮಾನ್ಯ ವರ್ಗದವರೂ ಖರೀದಿಸಬಹುದಾದ ಎಂಜಿ ಕಾಮೆಟ್‌ ಬಗ್ಗೆ. ಹತ್ತು ಲಕ್ಷ ಬಜೆಟ್‌ ಇರುವವರಿಗೆ ಒಂದು ಎಲೆಕ್ಟ್ರಿಕ್‌ ಕಾರು ಬೇಕೆಂದರೆ, ನೀವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಉಪಯೋಗಿಸಲು ಇದು ಸಾಕಷ್ಟು ಉಪಯೋಗಕಾರಿ.

230km Range Rs 7 Lakh Price Meet India s Most Affordable Electric Car MG Comet

ವಿನ್ಯಾಸ: ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಇನ್ನು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಲೈಟ್ ಬಾರ್ ಅಡಿಯಲ್ಲಿ ಮುಂಭಾಗದಲ್ಲಿ ಇರಿಸಲಾಗುತ್ತದೆ ಮತ್ತು ಅದರ ಫ್ಲಾಪ್ ಪ್ರಕಾಶಿತ MG ಲೋಗೋವನ್ನು ಹೊಂದಿದೆ.

ಫೀಚರ್ಸ್: ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ.ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ.

230km Range Rs 7 Lakh Price Meet India s Most Affordable Electric Car MG Comet

ಫೀಚರ್ಸ್‌: ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ. ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ.

ಸುರಕ್ಷತೆ: ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ, ABS, EBD, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಸೇರಿವೆ.3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ISOFIX ಆಂಕರ್ ಪಾಯಿಂಟ್‌ಗಳು ಮಕ್ಕಳ ಸೀಟ್ ಗಳಿಗೆ ಅದರ ಸುರಕ್ಷತೆಯ ಆರ್ಸೆನಲ್‌ನ ಭಾಗವಾಗಿದೆ.

ಬ್ಯಾಟರಿ ಪ್ಯಾಕ್‌: ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ, ಇದು ARAI- ಸ್ಟ್ಯಾಂಡರ್ಡ್ ಆಗಿ 230 ಕಿ.ಮೀ ರೇಂಜ್ ಅನ್ನು ನೀಡುತ್ತದೆ, ಕಾಮೆಟ್ ಇವಿ ಕೇವಲ AC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 3.3kW ಚಾರ್ಜಿಂಗ್ ಕೇಬಲ್‌ನೊಂದಿಗೆ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಕಾಮೆಟ್ ಇವಿಯ ಬಹು ರೀಜೆನ್ ಮೋಡ್‌ಗಳನ್ನು ಸಹ ಹೊಂದಿದೆ, ಅದು ಬ್ರೇಕಿಂಗ್‌ಗೆ ಸಹಾಯ ಮಾಡುತ್ತದೆ ಈ ಎಂಜಿ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಗಲ್ ಚಾರ್ಜ್‌ನಲ್ಲಿ 230 ಕಿಮೀ ರೇಂಜ್ ಅನ್ನು ನೀಡುತ್ತದೆ ಎಂದು ಎಂಜಿ ಕಂಪನಿ ಹೇಳಿದೆ, ಇದನ್ನು ಪರೀಕ್ಷಿಸಲು ದೆಹಲಿಯಲ್ಲಿ ನಮಗೆ ಸಾಕಷ್ಟು ಸಮಯ ಸಿಗದಿದ್ದರೂ, 170 ಕಿಲೋಮೀಟರ್‌ಗಳವರೆಗಿನ ರೇಂಜ್ ಅನ್ನು ಪಡೆದುಕೊಂಡಿದ್ದೇವೆ.

More from DriveSpark

Article Published On: Monday, June 24, 2024, 16:25 [IST]
English summary
230km range rs 7 lakh price meet indias most affordable electric car mg comet
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+