ಭಾತದಲ್ಲಿ 4 ಹೊಸ ಫ್ಯಾಮಿಲಿ ಕಾರುಗಳು ಬಿಡುಗಡೆಗೆ ಸಜ್ಜಾಗುತ್ತಿವೆ!

ನೀವು ಆಧುನಿಕ ವೈಶಿಷ್ಟ್ಯಗಳು ಹಾಗೂ ಕೈಗೆಟುಕುವ ಫ್ಯಾಮಿಲಿ ಕಾರುಗಳಿಗೆ ಆದ್ಯತೆ ನೀಡುತ್ತಿದ್ದರೇ, ಈ MPV ಗಳ ಭವಿಷ್ಯವು ಆಶಾದಾಯಕವಾಗಿ ಉತ್ತಮ ಲಾಭ ತಂದುಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಏಕೆಂದರೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲು ಒಂದಷ್ಟು ಎಂಪಿವಿಗಳು ಸಿದ್ಧವಾಗುತ್ತಿವೆ. ಈ ಮುಂಬರುವ MPV ಗಳ ಒಂದು ನೋಟ ಇಲ್ಲಿದೆ.

ಭಾರತದ ಆಟೋ ಉದ್ಯಮ ವಿಕಸನಗೊಳ್ಳುತ್ತಿದ್ದು, MPV ವಿಭಾಗವು ಹೊಸ ಕಾರುಗಳ ಎಂಟ್ರಿಗೆ ಸಾಕ್ಷಿಯಾಗಲಿದೆ. ಫೇಸ್‌ ಲಿಫ್ಟೆಡ್ ಮಾಡೆಲ್‌ಗಳಿಂದ ಹಿಡಿದು ಎಲ್ಲಾ ಹೊಸ ಕೊಡುಗೆಗಳವರೆಗೆ, ವಾಹನ ತಯಾರಕರು ಭಾರತೀಯ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ಸಜ್ಜಾಗುತ್ತಿದ್ದಾರೆ, ವಿವಿಧ ಆದ್ಯತೆಗಳು ಮತ್ತು ಬಜೆಟ್‌ಗಳನ್ನು ಪೂರೈಸಲು ನೋಡುತ್ತಿದ್ದಾರೆ.

4-new-mpvs-are-getting-ready-to-launch-in-india

ಹೊಸ ಟಾಟಾ MPV: ಟಾಟಾ ಮೋಟಾರ್ಸ್ MPV ವಿಭಾಗದಲ್ಲಿ ಸದ್ಯ ಯಾವುದೇ ಕಾರನ್ನು ಬಿಟ್ಟಿಲ್ಲ. ವರದಿಯ ಪ್ರಕಾರ ಹೊಸ MPV ಅನ್ನು ತರುವ ಕೆಲಸದಲ್ಲಿದೆ, ಇದು ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾ ನಡುವೆ ಸ್ಥಾನ ಪಡೆಯಲಿದೆ. ಈ ಹೊಸ ವಾಹನವು ವಾಣಿಜ್ಯ ಫ್ಲೀಟ್‌ಗಳು ಮತ್ತು ವೈಯಕ್ತಿಕ ಚಲನಶೀಲತೆ ಎರಡನ್ನೂ ಪೂರೈಸುತ್ತದೆ. ಈ ಕುರಿತ ವಿವರಗಳನ್ನು ಸದ್ಯಕ್ಕೆ ಮುಚ್ಚಿಡಲಾಗಿದೆ.

ಹೊಸ ತಲೆಮಾರಿನ ಕಿಯಾ ಕಾರ್ನೀವಲ್: ಕಿಯಾ ಇಂಡಿಯಾ ಮುಂದಿನ ವರ್ಷ ನಾಲ್ಕನೇ ತಲೆಮಾರಿನ ಕಾರ್ನಿವಲ್ ಅನ್ನು ತರುತ್ತಿದೆ. ಇದು ಐಷಾರಾಮಿ MPV ಆಗಿದ್ದು, Kia ನ ಇತ್ತೀಚಿನ ಮಾದರಿಗಳಾದ ಸೆಲ್ಟೋಸ್‌ನಿಂದ ಪ್ರಭಾವವನ್ನು ಹೊಂದಿದೆ. ಉನ್ನತ-ಮಟ್ಟದ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ. ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಪವರ್‌ಟ್ರೇನ್ ಜೊತೆಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.

4-new-mpvs-are-getting-ready-to-launch-in-india

ಕಿಯಾ ಎಲೆಕ್ಟ್ರಿಕ್ MPV: ಮುಂಬರುವ ಎಲೆಕ್ಟ್ರಿಕ್ MPV ರೂಪದಲ್ಲಿ ಕಿಯಾವು ನಮಗೆ ಅದ್ಬುತ ಕಾರನ್ನು ನೀಡಲು ಸಜ್ಜಾಗಿದೆ. ಬೃಹತ್ ಮೊತ್ತದ ಭಾಗವಾಗಿ EV ಕಾರುಗಳ ಅಭಿವೃದ್ಧಿಗೆ ರೂ. 2,000 ಕೋಟಿ ಹೂಡಿಕೆ ಮಾಡಿದ್ದು, Kia 2025 ರ ವೇಳೆಗೆ ಎರಡು ಎಲೆಕ್ಟ್ರಿಕ್ ವಾಹನಗಳ್ನು ಪರಿಚಯಿಸಲು ಯೋಜಿಸಿದೆ ಎಂದು ತಿಳಿದುಬಂದಿದೆ.

ಈ ಎರಡು ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಒಂದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ SUV ಆಗಿದ್ದರೇ ಇನ್ನೊಂದು ಎಲೆಕ್ಟ್ರಿಫೈಡ್ MPV ಆಗಿದ್ದು, ಕುಟುಂಬ ಪ್ರಯಾಣಕ್ಕಾಗಿ ದೊಡ್ಡ ಕಾರನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ. ಈ ಕುರಿತ ವಿಶೇಷತೆಗಳು ಸದ್ಯ ಸಂಪೂರ್ಣ ರಹಸ್ಯವಾಗಿದೆ, ಮುಂಬರುವ ದಿನಗಳಲ್ಲಿ ಕಿಯಾ ಮಾಹಿತಿಯನ್ನು ಬಹಿರಂಗಪಡಿಸಲಿದೆ.

4-new-mpvs-are-getting-ready-to-launch-in-india

ಹೊಸ ನಿಸ್ಸಾನ್ MPV: ನಿಸ್ಸಾನ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಮೀಟರ್ MPV ಅನ್ನು ಹೊರತರಲು ಯೋಜಿಸುತ್ತಿದೆ. ಇದು ರೆನಾಲ್ಟ್ ಟ್ರೈಬರ್ ಆಧಾರಿತ ಕಾಂಪ್ಯಾಕ್ಟ್ ಫ್ಯಾಮಿಲಿ ಕ್ರೂಸರ್ ಹಾಗೂ ಮಾರುತಿ ಎರ್ಟಿಗಾಗೆ ಕೈಗೆಟುಕುವ ಪರ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಇದು ಮ್ಯಾಗ್ನೈಟ್‌ನ 1.0 ಲೀ. NA ಪೆಟ್ರೋಲ್ ಮತ್ತು 1.0 ಲೀ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, January 28, 2024, 9:00 [IST]
English summary
4 new mpvs are getting ready to launch in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+