ಫ್ಯಾಮಿಲಿ ವಾಹನಗಳಿಗಾಗಿ ಮುಗಿಬಿದ್ದ ಗ್ರಾಹಕರು.. ನಮ್ಮ ಮಣ್ಣಿನ ಕಂಪನಿಯ ಈ ಕಾರು ನಂಬರ್ 1

ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಬಹುತೇಕರು ತಮ್ಮ ಕುಟುಂಬದ ಬಳಕೆಗಾಗಿ ಅಧಿಕ ಆಸನವನ್ನು ಹೊಂದಿರುವ ಕಾರುಗಳನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಏಪ್ರಿಲ್ (2024)ನಲ್ಲಿ ಫ್ಯಾಮಿಲಿ ಎಸ್‌ಯುವಿ ಹಾಗೂ ಎಂಪಿವಿಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ

ಪ್ರಮುಖ ದೇಶೀಯ ವಾಹನ ತಯಾರಕ ಮಹೀಂದ್ರಾ (Mahindra) ಅತಿಹೆಚ್ಚಿನ ಸಂಖ್ಯೆಯಲ್ಲಿ 7 ಆಸನದ ಕಾರುಗಳನ್ನು ಮಾರಿದ್ದು, ಕಂಪನಿಯ ಜನಪ್ರಿಯ ಸ್ಕಾರ್ಪಿಯೋ (Scorpio) ಎಸ್‌ಯುವಿ ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು ಸ್ಕಾರ್ಪಿಯೋ ಎನ್ ಹಾಗೂ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಗಳನ್ನು ಒಟ್ಟುಗೂಡಿ 14,807 ಯುನಿಟ್ ಮಾರಾಟ ಮಾಡಲಾಗಿದೆ. 2023ರ ಏಪ್ರಿಲ್‌ಗೆ ಹೋಲಿಸಿದರೆ (9,617 ಯುನಿಟ್) ಶೇಕಡ 54% ಬೆಳವಣಿಗೆಯನ್ನು ಸಾಧಿಸಿದೆ.

7-Seater Family Cars April 2024 Mahindra Scorpio Become Number 1 Ertiga Bolero Innova Also In List

ಸದ್ಯ, ನೂತನ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ರೂ.13.60 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಜೊತೆಯಲ್ಲಿ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಕಾರ್ಪಿಯೋ ಕ್ಲಾಸಿಕ್ ರೂ.13.59 ರಿಂದ ರೂ.17.35 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ.

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ಇದ್ದು, ಈ ಕಾರನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಿಂದ ಮಾರಾಟ ಪ್ರಮಾಣ ದ್ವಿಗುಣಗೊಂಡಿದ್ದು, ಏಪ್ರಿಲ್‌ನಲ್ಲಿ 13,544 ಯುನಿಟ್ ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಲಾಗಿದೆ. ಹೋದ ವರ್ಷದ ಇದೇ ಅವಧಿಯ 5,532 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ಶೇಕಡ 145% ಪ್ರಗತಿಯಾಗಿದೆ. ಈ ಕಾರು ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.

7-Seater Family Cars April 2024 Mahindra Scorpio Become Number 1 Ertiga Bolero Innova Also In List

ಮಹೀಂದ್ರಾ ಬೊಲೆರೊ (Mahindra Bolero) ಮೂರನೇ ಸ್ಥಾನದಲ್ಲಿದ್ದು, ಮಾರಾಟದಲ್ಲಿ ಸಮಾಧಾನಕರ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. ಹೋದ ತಿಂಗಳು 9,537 ಯುನಿಟ್ ಬೊಲೆರೋ ಕಾರುಗಳನ್ನು ಮಾರಲಾಗಿದ್ದು, 2023ರ ಏಪ್ರಿಲ್‌ಗೆ ಹೋಲಿಸಿದರೆ (9,054 ಯುನಿಟ್) ಶೇಕಡ 5% ಅಭಿವೃದ್ಧಿ ಕಂಡಿದೆ. ಸಾಮಾನ್ಯ ಬೊಲೆರೊ ರೂ.9.90 ಲಕ್ಷದಿಂದ ರೂ.10.91 ಲಕ್ಷ ಹಾಗೂ ಬೊಲೆರೊ ನಿಯೋ ಮಾದರಿಯು ರೂ.9.90 ಲಕ್ಷದಿಂದ ರೂ.12.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ನಾಲ್ಕನೇ ಸ್ಥಾನದಲ್ಲಿ ಟೊಯೊಟಾ ಇನ್ನೋವಾ (Toyota Innova) ಎಂಪಿವಿ ಇದ್ದು, ಏಪ್ರಿಲ್‌ನಲ್ಲಿ 7,103 ಯುನಿಟ್ ಕಾರುಗಳು ಮಾರಾಟವಾಗಿವೆ. ಅದೇ ಕಳೆದ ವರ್ಷದ ಮಾರಲಾಗಿದ್ದ 4,837 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ಶೇಕಡ 47% ಬೆಳವಣಿಗೆಯಾಗಿದೆ. ಇನ್ನೋವಾ ಹೈಕ್ರಾಸ್ ರೂ.19.77 ಲಕ್ಷದಿಂದ ರೂ.30.98 ಲಕ್ಷ ಮತ್ತು ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.26.55 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ.

7-Seater Family Cars April 2024 Mahindra Scorpio Become Number 1 Ertiga Bolero Innova Also In List

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಐದನೇ ಸ್ಥಾನದಲ್ಲಿದೆ. ಕಳೆದ ತಿಂಗಳು 6,134 ಯುನಿಟ್ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 29% ಪ್ರಗತಿಯನ್ನು ಕಾಣಲಾಗಿದೆ. ಈ ಕಾರು ರೂ.13.99 ಲಕ್ಷದಿಂದ ರೂ.26.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ನಂತರ ಸ್ಥಾನಗಳಲ್ಲಿ ಕಿಯಾ ಕ್ಯಾರೆನ್ಸ್, ಮಾರುತಿ ಸುಜುಕಿ ಎಕ್ಸ್ಎಲ್6, ಟೊಯೊಟಾ ಫಾರ್ಚುನರ್, ಟಾಟಾ ಸಫಾರಿ ಹಾಗೂ ರೆನಾಲ್ಟ್ ಟ್ರೈಬರ್ ಕಾರುಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, May 12, 2024, 8:30 [IST]
English summary
7 seater family cars april 2024 mahindra scorpio become number 1 ertiga bolero innova also in list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+