ಅಣ್ಣನ ಪ್ರೀತಿ.. ನಟ ರಾಘವ ಲಾರೆನ್ಸ್‌ರಿಂದ ಮುದ್ದಿನ ತಮ್ಮನಿಗೆ ದುಬಾರಿ ಬೆಲೆಯ ಎಂಜಿ ಕಾರು ಗಿಫ್ಟ್

ಕಾಲಿವುಡ್ ನಟ ರಾಘವ ಲಾರೆನ್ಸ್‌ (Raghava Lawrence) ಅವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತೆಲುಗು ಸಿನಿಮಾ ಮೂಲಕ ನಟನಾಗಿ ವೃತ್ತಿಜೀವನವನ್ನು ಆರಂಭಿಸಿದ್ದರು. ಇಂದು ಕೇವಲ ಸ್ಟಾರ್ ಆಗಿ ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಹಲವರಿಗೆ ನೆರವಾಗುವ ಮೂಲಕ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ನಟ ರಾಘವ ಲಾರೆನ್ಸ್ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ಟ್ರಸ್ಟ್​ವೊಂದನ್ನು ಸ್ಥಾಪಿಸಿ, ರೂ.1 ಕೋಟಿ ದೇಣಿಗೆಯನ್ನು ನೀಡಿದ್ದರು. ಸದ್ಯ ಬದುಕು ಕಟ್ಟಿಕೊಳ್ಳಲು ಹೊರಡುವ ಶ್ರಮಿಕರನ್ನು ಗುರುತಿಸಿ, ಅವರಿಗೆ ನೆರವಾಗುತ್ತಿದ್ದಾರೆ.

ನಟ ರಾಘವ ಲಾರೆನ್ಸ್ ಸಹೋದರ ಎಲ್ವಿನ್ ಕೂಡ ಅಣ್ಣನಂತೆಯೇ ತಮಿಳು ಚಿತ್ರರಂಗದಲ್ಲಿ ದುಡಿಯಲು ಇಚ್ಚಿಸಿದ್ದು, 'ಬುಲೆಟ್' ಸಿನಿಮಾ ಮೂಲಕ ಆಕ್ಟಿಂಗ್ ಕೆರಿಯರ್ ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ಇನಾಸಿ ಪಾಂಡಿಯನ್ ಅವರ ನಿರ್ದೇಶನವಿದೆ. ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಟ ರಾಘವ ಲಾರೆನ್ಸ್ ಮಾನಿಟರ್ ರೂಮ್‌ನಲ್ಲಿ ಎಲ್ವಿನ್ ಅಭಿನಯದ ಕೆಲವು ದೃಶ್ಯಗಳನ್ನು ನೋಡಿದ್ದು, ಆತನ ಮನೋಜ್ಞವಾದ ನಟನೆಯನ್ನು ಮೆಚ್ಚಿ ದುಬಾರಿ ಬೆಲೆಯ ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ.

Actor Raghava Lawrence Gifts MG Gloster Car To His Brother Elviin Details

ಈ ಕುರಿತಂತೆ ಸ್ವತಃ ರಾಘವ ಲಾರೆನ್ಸ್ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಸಹೋದರನಿಗೆ ಗಿಫ್ಟ್ ನೀಡಿರುವ ಹೊಸ ಕಾರಿನ ಮುಂದೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. 'ಈ ವಿಶೇಷ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಸಹೋದರನ ನಟನೆಯನ್ನು ನೋಡಿ ತುಂಬಾ ಸಂತೋಷವಾಗಿದೆ. ಇದು ನನ್ನ ಉಡುಗೊರೆಯಾಗಿದ್ದು, ಇಡೀ ಚಿತ್ರತಂಡಕ್ಕೆ ಶುಭಾಶಯಗಳು. ಎಲ್ವಿನ್‌ಗೆ ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.

ರಾಘವ ಲಾರೆನ್ಸ್ ಸಹೋದರ ಎಲ್ವಿನ್‌ಗೆ ಉಡೊಗೊರೆಯಾಗಿ ನೀಡಿರುವ ಕಾರು ಎಂಜಿ ಗ್ಲೋಸ್ಟರ್ (MG Gloster) ಎಂದು ತಿಳಿದುಬಂದಿದೆ. ಆದರೆ, ಯಾವ ರೂಪಾಂತರ (ವೇರಿಯೆಂಟ್) ಎಂಬುದರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಈ ಎಸ್‌ಯುವಿಯು ರೂ.38.80 ಲಕ್ಷದಿಂದ ರೂ.43.87 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

Actor Raghava Lawrence Gifts MG Gloster Car To His Brother Elviin Details

ನೂತನ ಎಂಜಿ ಗ್ಲೋಸ್ಟರ್ ಕಾರು ಶಾರ್ಪ್, ಸ್ಯಾವಿ ರೂಪಾಂತರಗಳು ಮತ್ತು ಬ್ಲ್ಯಾಕ್‌ಸ್ಟಾರ್ಮ್, ಸ್ನೋ ಸ್ಟಾರ್ಮ್, ಡೆಸರ್ಟ್‌ಸ್ಟಾರ್ಮ್ ಎಂಬ ಮೂರು ವಿಶೇಷ ಆವೃತ್ತಿ (ಸ್ಪೆಷಲ್ ಎಡಿಷನ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಜೊತೆಗೆ 6, 7 ಆಸನ ವ್ಯವಸ್ಥೆಯನ್ನು ಹೊಂದಿದ್ದು, ಸ್ನೋ, ಮಡ್, ಸ್ಯಾಂಡ್, ಇಕೋ, ಸ್ಪೋರ್ಟ್, ಆಟೋ ಮತ್ತು ರಾಕ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಈ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ 2-ಲೀಟರ್ ಟರ್ಬೊ ಡಿಸೇಲ್ ಹಾಗೂ 2-ಲೀಟರ್ ಟ್ವಿನ್ ಟರ್ಬೊ ಡಿಸೇಲ್ ಎಂಜಿನ್‌ನ್ನು ಹೊಂದಿದ್ದು, 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 2WD (ಟೂ ವೀಲ್ ಡ್ರೈವ್) ಹಾಗೂ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, 12 ರಿಂದ 14 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.

ಹೊಸ ಎಂಜಿ ಗ್ಲೋಸ್ಟರ್ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ರೈನ್-ಸೆನ್ಸಿಂಗ್ ವೈಪರ್ಸ್, 3-ಜೋನ್ ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 12, 2024, 18:19 [IST]
English summary
Actor raghava lawrence gifts mg gloster car to his brother elvin details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+