ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಯುವನಟಿ
ಮರ್ಸಿಡಿಸ್ ಬೆಂಝ್ (Mercedes Benz) ಸೆಲೆಬ್ರೆಟಿಗಳ ಮೆಚ್ಚಿನ ಕಾರ್ ಆಗಿದೆ. ಸೆಲೆಬ್ರೆಟಿಗಳ ಐಷಾರಾಮಿ ಜೀವನದಲ್ಲಿ ಈ ಮರ್ಸಿಡಿಸ್ ಬೆಂಝ್ ಹೇಳಿದ ಮಾಡಿದ ಬ್ರ್ಯಾಂಡ್ ಆಗಿದೆ. ಇತ್ತೀಚೆಗೆ ಬಾಲಿವುಡ್ ನಟಿ ನಟಿ ಸೌಮ್ಯಾ ಟಂಡನ್ ಅವರು ಹೊಸ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಿದ್ದಾರೆ. ನಟಿ ಸೌಮ್ಯಾ ಟಂಡನ್ (Saumya Tandon) ಅವರು 'ಜಬ್ ವಿ ಮೆಟ್ ಶಾಹಿದ್ ಕಪೂರ್' ಮತ್ತು ಕರೀನಾ ಕಪೂರ್ ಅಭಿನಯದ ಬಾಲಿವುಡ್ (Bollywood ) ಚಿತ್ರದಲ್ಲಿ ನಾಯಕಿ ಸಹೋದರಿ ರೂಪ್ ಕುಮಾರ್ ಧಿಲ್ಲೋನ್ ಪಾತ್ರವನ್ನು ನಿರ್ವಹಿಸಿದ ಮಿಂಚಿದರು.
ಬಾಲಿವುಡ್ ಅಲ್ಲದೆ, ಸೌಮ್ಯಾ ಕೆಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ಅವರು ಟಿವಿ ಕಾರ್ಯಕ್ರಮಗಳ ಮೂಲಕ ಹೆಚ್ಚು ಜನಪ್ರಿಯಗಳಿಸಿದ್ದಾರೆ. ಸೌಮ್ಯಾ ಅವರ ಜನಪ್ರಿಯ ಕಾರ್ಯಕ್ರಮಗಳು, ಐಸಾ ದೇಸ್ ಹೈ ಮೇರಾ, ಮೇರಿ ಆವಾಸ್ ಕೋ ಮಿಲ್ ಗೈ ರೋಶ್ನಿ, ಖುಷಿ, ಕಾಮಿಡಿ ನೈಟ್ಸ್ ವಿತ್ ಕಪಿಲ್, ಎಂಟರ್‌ಟೈನ್‌ಮೆಂಟ್ ಕಿ ರಾತ್, ಮಲ್ಲಿಕಾ ಇ-ಕಿಚನ್ ಸೇರಿವೆ.

ಇದೀಗ ಸೌಮ್ಯಾ ಹಿಂದಿ ಚಿತ್ರರಂಗದ ಮರ್ಸಿಡಿಸ್ ಬೆಂಜ್ ಕಾರನ್ನು ಹೊಂದಿರುವ ಲಿಸ್ಟ್ ಸೇರಿದ ಹೊಸ ಸೆಲೆಬ್ರಿಟಿಯಾಗಿದ್ದಾರೆ. ಒಟ್ಟಾರೆ ಭಾರತದಲ್ಲಿ ಇದೀಗ ಎಸ್‍ಯುವಿ ತರಂಗವಿದೆ. ಆದರೆ ಸೌಮ್ಯಾ ಅವುಗಳಿಗಿಂತ ಭಿನ್ನವಾದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಸೆಡಾನ್ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಟ ಐಷಾರಾಮಿ ಸೆಡಾನ್‌ನ ಪೋಲಾರ್ ವೈಟ್ ಶೇಡ್ ಮಾದರಿಯನ್ನು ಹೊಂದಿದ್ದಾರೆ.
ಪ್ರಸ್ತುತ, ಸೌಮ್ಯಾ ಯಾವ ರೂಪಾಂತರವನ್ನು ಆರಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಜಾಗತಿಕವಾಗಿ ಮರ್ಸಿಡಿಸ್ ಬೆಂಝ್ ಅತ್ಯಂತ ಜನಪ್ರಿಯ ಮಾದರಿಯಾದ ಇ-ಕ್ಲಾಸ್ ಅನ್ನು ಪ್ರಸ್ತುತ ಭಾರತದಲ್ಲಿ ಲಾಂಗ್ ವೀಲ್‌ಬೇಸ್ (LWB) ರೂಪಾಂತರದಲ್ಲಿ ನೀಡಲಾಗುತ್ತದೆ. ಮರ್ಸಿಡಿಸ್ ಬೆಂಝ್ ಇಂಡಿಯಾ-ಸ್ಪೆಕ್ ಸೆಡಾನ್ E 200, E 220d ಮತ್ತು E 350d ಮೂರು ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.
ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರಿನ ಆರಂಭಿಕ ಬೆಲೆಯು ರೂ. 76.05 ಲಕ್ಷವಾಗಿದೆ. ಜರ್ಮನ್ ಬ್ರ್ಯಾಂಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಐಷಾರಾಮಿ ಸೆಡಾನ್ ಅನ್ನು ನೀಡುತ್ತದೆ. ಇವುಗಳಲ್ಲಿ ಕ್ರಮವಾಗಿ 196 bhp ಮತ್ತು 192 bhp ಪವರ್ ಉತ್ಪಾದಿಸುವ 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮತ್ತು 285 bhp ಪವರ್ ಮತ್ತು 600 Nm ಟಾರ್ಕ್ ಉತ್ಪಾದಿಸುವ 3.0-ಲೀಟರ್ ಡೀಸೆಲ್ ಎಂಜಿನ್ ಸೇರಿವೆ.
ಎಲ್ಲಾ ಯುನಿಟ್ ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಸೆಡಾನ್‌ನ ಅತ್ಯಂತ ಶಕ್ತಿಶಾಲಿ ಡೀಸೆಲ್ ರೂಪಾಂತರವು ಕೇವಲ 6 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳೊಂದಿಗೆ ಕಾರು ಬರುತ್ತದೆ.
ಇದಲ್ಲದೆ, ಇಂಡಿಯಾ-ಸ್ಪೆಕ್ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಪನೋರಮಿಕ್ ಸನ್‌ರೂಫ್, 3-ವಲಯ ಕ್ಲೈಮೆಂಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ (ಮುಂಭಾಗ ಮತ್ತು ಹಿಂಭಾಗ) ಮತ್ತು ಅಬೈಂಟ್ ಲೈಟಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಏಳು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ನಂತಹ ಸುರಕ್ಷತಾ ವೈಶಿಷ್ಟ್ಯಗಳು ಕಾರಿನ ಸುರಕ್ಷತೆಯನ್ನು ಖಚಿತಪಡಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








