Ashok Leyland: ಕರ್ನಾಟಕಕ್ಕೆ 1,225 ಬಸ್ ವಿತರಿಸಲು ಬೃಹತ್ ಆರ್ಡರ್ ಪಡೆದುಕೊಂಡ ಅಶೋಕ್ ಲೇಲ್ಯಾಂಡ್

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿ ಅಶೋಕ್ ಲೇಲ್ಯಾಂಡ್ (Ashok Leyland) ಗುರುತಿಸಿಕೊಂಡಿದೆ. ಏಪ್ರಿಲ್ 2024ರೊಳಗೆ 1,225 ವೈಕಿಂಗ್ ಬಸ್‌ಗಳನ್ನು (Viking buses) ಪೂರೈಸಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಬೃಹತ್ ಆರ್ಡರ್ ಪಡೆದುಕೊಂಡಿದೆ. ಇದರ ಅಂದಾಜು ವೆಚ್ಚ ರೂ.522 ಕೋಟಿಯಾಗಿದೆ.

ಸದ್ಯ ಅಶೋಕ್ ಲೇಲ್ಯಾಂಡ್, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ (Karnataka State Transport Undertakings - STUs) ಮೆಚ್ಚಿನ ಬ್ರಾಂಡ್ ಆಗಿದೆ. ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಸೇರಿದಂತೆ ವಿವಿಧ ನಿಗಮಗಳಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯ 11,680 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ವೈಕಿಂಗ್ ಬಸ್‌ಗಳು ಎಐಎಸ್153 (AIS153) ಮಾನದಂಡಗಳಿಗೆ ಅನುಗುಣವಾಗಿವೆ.

Ashok Leyland: ಕರ್ನಾಟಕಕ್ಕೆ 1,225 ಬಸ್ ವಿತರಿಸಲು ಬೃಹತ್ ಆರ್ಡರ್ ಪಡೆದುಕೊಂಡ ಅಶೋಕ್ ಲೇಲ್ಯಾಂಡ್

ಇವು ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಚಾಲಕರಿಗೆ ಸುಲಭವಾಗಿ ಬಸ್‌ಗಳನ್ನು ಓಡಿಸಲು ಅನುವು ಮಾಡಿಕೊಡುತ್ತವೆ. ಸಾರ್ವಜನಿಕರಿಗೂ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತವೆ. ಸುರಕ್ಷತೆಯ ವಿಚಾರದಲ್ಲಿಯೂ ಅತ್ಯಾಧುನಿಕವಾಗಿವೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಸೇರ್ಪಡೆಯಾಗುವ ಅಶೋಕ್ ಲೇಲ್ಯಾಂಡ್ ಬಸ್‌ಗಳು ಒಬಿಡಿ-II (OBD-II) ಪ್ರಮಾಣೀಕೃತ ಹೆಚ್-ಸೀರಿಯಸ್ 6-ಸಿಲಿಂಡರ್ 147 ಕೆಡಬ್ಲ್ಯೂ (197 ಹೆಚ್‌ಪಿ) ಎಂಜಿನ್ ಹೊಂದಿವೆ.

ಈ ಕುರಿತು ಮಾತನಾಡಿರುವ ಅಶೋಕ್ ಲೇಲ್ಯಾಂಡ್‌ನ ಎಂಡಿ & ಸಿಇಒ ಶೇನು ಅಗರ್ವಾಲ್ ಅವರು, 'ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳೊಂದಿಗೆ ನಮ್ಮ ಸುದೀರ್ಘ ಒಡನಾಟವನ್ನು ಮುಂದುವರಿಸಲು ಹರ್ಷಿಸುತ್ತಿವೆ. ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯಲ್ಲಿ ಸ್ಥಳೀಯ ಸಾರಿಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತಾಂತ್ರಿಕವಾಗಿ ಅತ್ಯುತ್ತಮವಾಗಿರುವ ವಾಹನವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಪರಿಣಿತರ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ' ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಪ್ರಯಾಣಿಕರ ಅನುಕೂಲಕ್ಕಾಗಿ 884 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಈಗಾಗಲೇ 375 ಬಸ್‌ ಕೊಂಡುಕೊಳ್ಳಲು ಟೆಂಡರ್‌ ಕರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಹಿಂದೆ ಹುಬ್ಬಳ್ಳಿಯಲ್ಲಿ ಹೇಳಿದ್ದರು. ರಾಜ್ಯಾದ್ಯಂತ ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ, ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳಗೊಂಡಿದೆ. ಹೊಸ ಬಸ್‌ಗಳು ಆಗಮನವಾದಾಗ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈ ವರ್ಷ 2,000 ನೂತನ ಬಸ್‌ಗಳನ್ನು ಬಿಡಲು ಯೋಜಿಸಿದೆ. ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ & ಮಾನಿಟರಿಂಗ್ ಸಿಸ್ಟಮ್), ಮೊಬೈಲ್ ಅಪ್ಲಿಕೇಶನ್, ನಗದು ರಹಿತ ಪ್ರಯಾಣದಂತಹ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. 'ನಮ್ಮ ಕಾರ್ಗೋ' ಸೇವೆಯನ್ನು ಸದ್ಯವಿರುವ 20 ಟ್ರಕ್‌ಗಳಿಂದ ವರ್ಷಾಂತ್ಯದೊಳಗೆ 500 ಟ್ರಕ್‌ಗಳಿಗೆ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ.

ಕೇಂದ್ರ ಸರ್ಕಾರದ 'ಫಾಸ್ಟ್ ಅಡಾಪ್ಷನ್ & ಎಲೆಕ್ಟ್ರಿಕ್ ವೆಹಿಕಲ್ಸ್' (FAME-II) ಯೋಜನೆ ಭಾಗವಾಗಿ 921 ಇ-ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ನಿರ್ಧರಿಸಿದೆ. ಅದರ ಮೊದಲ ಬ್ಯಾಚ್‌ನಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳು ಕಳೆದ ತಿಂಗಳು ನಿಗಮಕ್ಕೆ ಸೇರ್ಪಡೆಗೊಂಡಿವೆ. ಟಾಟಾ ಮೋಟಾರ್ಸ್ ಲಿಮಿಟೆಡ್‌ ಅಂಗಸಂಸ್ಥೆಯಾಗಿರುವ ಟಿಎಂಎಲ್ ಸ್ಮಾರ್ಟ್ ಮೊಬಿಲಿಟಿ ಲಿಮಿಟೆಡ್ (TML Smart Mobility Ltd) ಈ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 18, 2024, 17:41 [IST]
English summary
Ashok leyland take big order delivery 1225 buses for karnataka state transport undertaking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+