ಟಿವಿಎಸ್ ಐಕ್ಯೂಬ್‌ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಲ್ಲಿ ಬಜಾಜ್ ಸಹ ಒಂದು. ಬಜಾಜ್, ಎಲೆಕ್ಟ್ರಿಕ್ ಲೋಕಕ್ಕೆ ಕಾಲಿಟ್ಟು ಕೆಲವಷ್ಟೇ ವರ್ಷಗಳಾಗಿದೆ. ಬಜಾಜ್, ಚೇತಕ್ ಎಂಬ ಕೇವಲ ಒಂದೇ ಒಂದು ಎಲೆಕ್ಟ್ರಿಕ್ ಮಾದರಿಯನ್ನಷ್ಟೇ ಮಾರುಕಟ್ಟೆಗೆ ಪರಿಚಯಿಸಿದ್ದರೂ, ಈ ಸ್ಕೂಟರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.
ಬಜಾಜ್ ಚೇತಕ್ (Bajaj Chetak) ಬಗ್ಗೆ ಹೇಳುವುದಾದರೆ, 80ರ ದಶಕದಲ್ಲಿ ಭಾರತೀಯರ ಪ್ರೀತಿಯ ಸಾರಥಿಯಾಗಿತ್ತು. ಹೆಚ್ಚಿನ ಜನರ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಇದಾಗಿದ್ದು, ಅಷ್ಟರಮಟ್ಟಿಗೆ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. 2005ರ ಈ ಜನಪ್ರಿಯ ಹಮಾರ ಬಜಾಜ್ ಸ್ಕೂಟರ್ ಸ್ಥಗಿತಗೊಂಡಿತು. ಮತ್ತೆ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಭಾರತದ ರಸ್ತೆಗಿಳಿಯಿತು.

ಇದೀಗ ಬಜಾಜ್ ಚೇತಕ್ ಕುರಿತಾಗಿ ಹೊಸ ಸುದ್ದಿಯೊಂದು ಟ್ರೆಂಡಿಂಗ್‌ನಲ್ಲಿದೆ. ಈಗಿರುವ ಚೇತಕ್ ಎಲೆಕ್ಟ್ರಿಕ್‌ಗಿಂತಲೂ ಕಡಿಮೆ ಬೆಲೆಗೆ ಕಂಪನಿ ಹೊಸ ಚೇತಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕಡಿಮೆ ಬೆಲೆಗೆ ಬಜಾಜ್ ಚೇತಕ್ ಖರೀದಿ ಮಾಡಬೇಕು ಎಂದುಕೊಂಡವರ ಕನಸು ಕೊಂಚ ದಿನದಲ್ಲಿಯೇ ನನಸಾಗಲಿದೆ.
ಇನ್ನು ಹೊಸ ಈ ಚೇತಕ್‌ನಲ್ಲಿ ಈಗಿರುವ ಮಾದರಿಯ ಬ್ಯಾಟರಿಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿಯನ್ನು ಬಳಸಲಾಗುತ್ತದೆ ಮತ್ತು ಹಬ್ ಮೌಂಟೆಡ್ ಮೋಟಾರ್ ಸಹ ಇರಬಹುದು ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿಯೇ ಇದರ ಬೆಲೆ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್ ಅನ್ನು ಕಂಪನಿ ಮೇ ತಿಂಗಳಲ್ಲಿ ಲಾಂಚ್ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಬಜಾಜ್ ಚೇತಕ್ ಇವಿ ಬಗ್ಗೆ ಹೇಳುವುದಾದರೆ, ಹೊಸ 2024ರ ಬಜಾಜ್ ಚೇತಕ್ ಪ್ರೀಮಿಯಂ ದೊಡ್ಡದಾದ 3.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 126 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು 5.63bhp ಅನ್ನು 22.7Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 73 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಚೇತಕ್ ಸ್ಪೋರ್ಟ್ಸ್ ಮೋಡ್, ಹಿಲ್-ಹೋಲ್ಡ್, ಸೀಕ್ವೆನ್ಷಿಯಲ್ ಬ್ಲಿಂಕರ್‌ಗಳು, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಈ ಕೆಲವು ವೈಶಿಷ್ಟ್ಯಗಳನ್ನು ಆಯ್ಕೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

2024ರ ಬಜಾಜ್ ಚೇತಕ್ ಪ್ರೀಮಿಯಂ ರೆಟ್ರೊ ಲುಕ್, ಮೆಟಲ್ ಬಾಡಿ ಮತ್ತು ಓಹ್-ಸೋ-ಕಾಂಫರ್ಟೆಬಲ್ ಸೀಟ್ ಅನ್ನು ಉಳಿಸಿಕೊಂಡು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ನವೀಕರಣಗಳೊಂದಿಗೆ ಅಗ್ಗದ ಬೆಲೆಗೆ ಬಜಾಜ್ ಚೇತಕ್ ಇ-ಸ್ಕೂಟರ್ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಅತ್ಯಾಧುನಿಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಬೇಡಿಕೆ ಬಂದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








