ಅತ್ಯಾಧುನಿಕ ಹೊಸ ಶ್ರೇಣಿಯ ಬ್ಯಾಕ್ಸಿ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳ ಬಿಡುಗಡೆ
ಪ್ರಮುಖ ತ್ರಿ-ಚಕ್ರ ವಾಹನ ತಯಾರಕ ಕಂಪನಿಯಾದ ಬ್ಯಾಕ್ಸಿ (BAXY) ಮೊಬಿಲಿಟಿಯು ಹೊಸ ಶ್ರೇಣಿಯ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ. ಹೊಸ ವಾಹನ ಶ್ರೇಣಿಯು ಸುಧಾರಿತ ಲೀಡ್-ಆಸಿಡ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ತಂತ್ರಜ್ಞಾನದೊಂದಿಗೆ ಪ್ರಯಾಣಿಕ ಮತ್ತು ಕಾರ್ಗೋ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳನ್ನು ಒಳಗೊಂಡಿದೆ. ವೆಚ್ಚ-ಪರಿಣಾಮಕಾರಿ ಪ್ರವೇಶ ಮಟ್ಟದ ಮಾದರಿಗಳಿಂದ ಹಿಡಿದು ಪ್ರೀಮಿಯಂ ಹೈ-ಪರ್ಫಾಮೆನ್ಸ್ ಆಯ್ಕೆಗಳವರೆಗೆ, ವಿಶ್ವಾಸಾರ್ಹ ವಾಹನಗಳನ್ನು ಬಯಸುವ ಗ್ರಾಹಕರಿಗೆ ಸುಲಭ ಮತ್ತು ಅನುಕೂಲಕರ ವಾಹನಗಳನ್ನು ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬ್ಯಾಕ್ಸಿ ಕಂಪನಿಯು ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ (ICE) ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಇದೀಗ ಹೊಸ ಶ್ರೇಣಿಯ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳ ಬಿಡುಗಡೆಯು ಭಾರತದ ಸುಸ್ಥಿರ ಚಲನಶೀಲತೆಯ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಫೀಚರ್ಸ್‌ನೊಂದಿಗೆ ನಮ್ಮ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

BAXY ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಬಕ್ಷಿ ಮಾತನಾಡಿ, ಭಾರತದ ಜನರಿಗೆ ಸುಸ್ಥಿರ ಚಲನಶೀಲತೆಯನ್ನು ತರುವ ನಮ್ಮ ಬಹು-ಪಾಲನೆಯ ಕನಸನ್ನು ಈಡೇರಿಸುವ ಮೂಲಕ ಹೊಸ ವಾಹನಗಳ ಬಿಡುಗಡೆಯು BAXY ಗ್ರೂಪ್‌ಗೆ ಬಹಳ ವಿಶೇಷವಾಗಿದೆ. ನಗರಗಳಾದ್ಯಂತ ಕೈಗೆಟುಕುವ ವಾಹನಗಳನ್ನು ಉತ್ತೇಜಿಸುವಲ್ಲಿ ನಮ್ಮ ಕಂಪನಿಯು ಪ್ರಮುಖ ಪಾತ್ರ ವಹಿಸಲಿದೆ. ಖಂಡಿತವಾಗಿಯೂ ಭಾರತದ ಸುಸ್ಥಿರ ಚಲನಶೀಲತೆಯ ಗುರಿಗಳಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದರು.
ಬ್ಯಾಕ್ಸಿ ಮೊಬಿಲಿಟಿಯ ಸಿಇಒ ಕುಮಾರ್ ರಾಮಮೂರ್ತಿ ಮಾತನಾಡಿ, ಹೊಸ ಶ್ರೇಣಿಯ ವಾಹನಗಳು ಸುಸ್ಥಿರತೆ ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡುವ ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ಕೊನೆಯ ಮೈಲಿ ಸಾರಿಗೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುವ ಜೊತೆಗೆ ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ತಲುಪಿಸುವ ನಮ್ಮ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ.

BAXY ಮೊಬಿಲಿಟಿಯ ನವೀನ ತ್ರಿಚಕ್ರ ವಾಹನಗಳು ಗ್ರಾಹಕರ ವಿಕಾಸದ ಅಗತ್ಯಗಳಿಗೆ ಶಕ್ತಿ-ಸಮರ್ಥ ಮತ್ತು ಆರ್ಥಿಕ ಪರಿಹಾರಗಳನ್ನು ನೀಡುತ್ತವೆ. ಈ ವಾಹನಗಳು ಅನುಕೂಲತೆ, ದಕ್ಷತೆ ಮತ್ತು ಪರಿಸರ ಜವಾಬ್ದಾರಿಯನ್ನು ಮರು ವ್ಯಾಖ್ಯಾನಿಸುತ್ತವೆ. ಸುಸ್ಥಿರ, ಅತ್ಯಾಧುನಿಕ ಪರಿಹಾರಗಳೊಂದಿಗೆ ನಗರ ಮತ್ತು ಗ್ರಾಮೀಣ ಚಲನಶೀಲತೆಯ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ವಾಹನಗಳ ಅತ್ಯಾಧುನಿಕ ಶ್ರೇಣಿಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.
ನಾಲ್ಕು ದಶಕಗಳ ಶ್ರೇಷ್ಠತೆಯೊಂದಿಗೆ ಉದ್ಯಮಿ ಅಮರ್ಜಿತ್ ಬಕ್ಷಿ ಸ್ಥಾಪಿಸಿದ BAXY ಗ್ರೂಪ್ ಸುಸ್ಥಿರ ನಾವೀನ್ಯತೆಯ ಮುಂಚೂಣಿಯಲ್ಲಿದೆ. ಭಾರತ ಮತ್ತು ಆಫ್ರಿಕಾ, US, EU ಮತ್ತು ಏಷ್ಯಾದಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಾದ್ಯಂತ ಉಪಸ್ಥಿತಿಯೊಂದಿಗೆ, ಕಂಪನಿಯು ನಾಲ್ಕು ಕಾರ್ಯತಂತ್ರದ ವ್ಯಾಪಾರ ಘಟಕಗಳ (SBUs) ಮೂಲಕ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದೆ.
ಆಟೋ ಕಾಂಪೊನೆಂಟ್ ತಯಾರಿಕೆಯಲ್ಲಿ 'ಬ್ಯಾಕ್ಸಿ ಇಂಜಿನಿಯರಿಂಗ್', ಮೂರು-ಚಕ್ರ ವಾಹನಗಳಲ್ಲಿ ಪ್ರವರ್ತಕ ಮತ್ತು ಪರಿಸರ ಸ್ನೇಹಿ ಸಾರಿಗೆ ಚಾಲನೆಗೆ ಬ್ಯಾಕ್ಸಿ ಮೊಬಿಲಿಟಿ, ಪರಿಸರ ನಿರ್ವಹಣೆ ಮತ್ತು ತ್ಯಾಜ್ಯ ಪರಿಹಾರಗಳ ಮೇಲೆ ಕೇಂದ್ರೀಕರಿಸಲು ಬ್ಯಾಕ್ಸಿ ಎನ್‌ವಿರೊ ಹಾಗೂ ಅತ್ಯಾಧುನಿಕ ಸ್ಮಾರ್ಟ್ ಸಿಟಿ ಪರಿಹಾರಗಳನ್ನು ನೀಡಲು ಬ್ಯಾಕ್ಸಿ ಇನ್ಫೋಟೆಕ್ ಕಾರ್ಯ ನಿರ್ವಹಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








