Affordable CNG Suv's: ಭಾರತದ ಕೈಗೆಟುಕುವ ಬೆಲೆಯ ಬೆಸ್ಟ್ ಸಿಎನ್‌ಜಿ ಎಸ್‌ಯುವಿಗಳಿವು!
ಇತ್ತೀಚಿನ ವರ್ಷಗಳಲ್ಲಿ ಇಂಧನ ಬೆಲೆಗಳು ಹೆಚ್ಚಾಗಿರುವ ಕಾರಣ ಸಿಎನ್‌ಜಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಎಂಟ್ರಿ ಲೆವೆಲ್, ಸಣ್ಣ ಸಿಎನ್‌ಜಿ ಕಾರುಗಳನ್ನು ಖರೀದಿಸಲು ಯೋಜಿಸಿರುವ ಗ್ರಾಹಕರಿಗಾಗಿ ಮಾರ್ಚ್ 2024 ರಲ್ಲಿ ಭಾರತದಲ್ಲಿ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
1. ಹ್ಯುಂಡೈ ಎಕ್ಸ್ಟರ್: Hyundai Exter ಆರಂಭಿಕ ಬೆಲೆಯು 6.43 ಲಕ್ಷ ರೂ. ಇದೆ. ಇದು ಮಾರ್ಚ್ 2024 ರಲ್ಲಿ ಭಾರತದ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಯಾಗಿದ್ದು, 1.2- ಲೀ. ಪೆಟ್ರೋಲ್ ಎಂಜಿನ್ ಹೊಂದಿದೆ. ಎಕ್ಸ್‌ಟರ್ ಸಿಎನ್‌ಜಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ. ಇದು ಪ್ರತಿ ಕೆ.ಜಿ.ಗೆ 27.10 ಕಿ.ಮೀ ಮೈಲೇಜ್ ನೀಡುತ್ತದೆ.

2. ಟಾಟಾ ಪಂಚ್ ಸಿಎನ್‌ಜಿ: Tata Punch CNG ಆರಂಭಿಕ ಬೆಲೆಯು 7.23 ಲಕ್ಷ ರೂ. ಇದೆ. ಇದು ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ. ಟಾಟಾ ಪಂಚ್ ಸಿಎನ್‌ಜಿ ಭಾರತದ ಎರಡನೇ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಯಾಗಿದೆ. ಇದು 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 26.99 km/kg ಮೈಲೇಜ್ ನೀಡುತ್ತದೆ.
3. ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ: Maruti Suzuki Fronx CNG ಆರಂಭಿಕ ಬೆಲೆಯು 8.46 ಲಕ್ಷ ರೂ. ಇದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ MT ಯೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಪ್ರತಿ ಕೆ.ಜಿಗೆ 28.51 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಫ್ರಾಂಕ್ಸ್ ಸಿಎನ್‌ಜಿಯನ್ನು ಎಂಟ್ರಿ ಲೆವೆಲ್ ಸಿಗ್ಮಾ ರೂಪಾಂತರದಲ್ಲಿ ಅಥವಾ ಮಧ್ಯಮ ಮಟ್ಟದ ಡೆಲ್ಟಾ ಟ್ರಿಮ್‌ನಲ್ಲಿ ಪಡೆಯಬಹುದು.

4. ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ: Maruti Suzuki Brezza CNG ಆರಂಭಿಕ ಬೆಲೆಯು 9.29 ಲಕ್ಷ ರೂ. ಬ್ರೆಝಾ ತನ್ನ 1.5-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮತ್ತೊಂದು ಮಾರುತಿ ಸುಜುಕಿ ಎಸ್ ಯುವಿಯಾಗಿದ್ದು, ಕಾರ್ಖಾನೆಯಿಂದ ನೇರವಾಗಿ ಸಿಎನ್ ಜಿ ಆಯ್ಕೆಯೊಂದಿಗೆ ಲಭ್ಯವಿದೆ. ಸಿಎನ್ ಜಿ ಮೋಡ್ ನಲ್ಲಿ, ಪವರ್ ಟ್ರೇನ್ 88 ಬಿಹೆಚ್ ಪಿ ಮತ್ತು 121.5 ಎನ್ಎಂ ಅನ್ನು ಉತ್ಪಾದಿಸುತ್ತದೆ. ಬ್ರೆಝಾ ಸಿಎನ್ ಜಿ 5-ಸ್ಪೀಡ್ ಎಂಟಿಯನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ ಮತ್ತು ಪ್ರತಿ ಕೆಜಿಗೆ 25.51 ಕಿ.ಮೀ ಮೈಲೇಜ್ ನೀಡುತ್ತದೆ.
5. ಟೊಯೊಟಾ ಹೈರೈಡರ್ ಸಿಎನ್‌ಜಿ: Toyota Hyryder CNG ಆರಂಭಿಕ ಬೆಲೆಯು 13.71 ಲಕ್ಷ ರೂ. ಇದೆ. ಇದು ಭಾರತದ ಅತ್ಯಂತ ಪ್ರೀಮಿಯಂ ಸಿಎನ್‌ಜಿ ಎಸ್‌ಯುವಿಯಾಗಿದ್ದು, 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದೆ. 5-ಸ್ಪೀಡ್ ಮ್ಯಾನುವಲ್‌ಗೆ ಜೋಡಿಸಲಾಗಿದೆ. ಪ್ರತಿ ಕೆ.ಜಿಗೆ 26.60 ಕಿ.ಮೀ ಮೈಲೇಜ್ ನೀಡುತ್ತದೆ.

6. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ: Maruti Suzuki Grand Vitara CNG ಆರಂಭಿಕ ಬೆಲೆಯು 13.15 ಲಕ್ಷ ರೂ. ಇದೆ. ಇದು ಡೆಲ್ಟಾ ಮತ್ತು ಝೀಟಾ ರೂಪಾಂತರಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡುತ್ತದೆ. ಮಾರ್ಚ್ 2024 ರಲ್ಲಿ, ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಮಾತ್ರ ಸಿಎನ್‌ಜಿ ಆಯ್ಕೆಯೊಂದಿಗೆ ನೀಡಲಾಗುವ ಭಾರತದ ಎರಡು ಮಧ್ಯಮ ಗಾತ್ರದ ಎಸ್‌ಯುವಿಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








