10 ಲಕ್ಷ ಬೆಲೆ.. ಜನಪ್ರಿಯ ಕಂಪನಿಗಳ ಪ್ರಮುಖ ಕಾರುಗಳಿವು: ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
ಹೊಸ ಕಾರು ಖರೀದಿಸಬೇಕೆಂದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಕನಸಾಗಿರುತ್ತದೆ. ಆದರೆ, ಯಾವುದನ್ನು ಕೊಂಡುಕೊಳ್ಳಬೇಕು ಎಂಬ ಗೊಂದಲವಿರುತ್ತದೆ. ಇಲ್ಲಿ ರೂ.10 ಲಕ್ಷ ಬೆಲೆಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಸಿಗುವ ಮಾರುತಿ ಬ್ರೆಝಾ, ಟಾಟಾ ಪಂಚ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಮೊದಲಿಗೆ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಕಾರಿನ ಕುರಿತು ಮಾತನಾಡೋಣ. ಇದು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 1.5-ಲೀಟರ್ ಪೆಟ್ರೋಲ್, ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 5-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ನೊಂದಿಗೂ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 17.38 ರಿಂದ 19.8 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 25.51 ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ.

ಈ ಬ್ರೆಝಾ ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, 5 ಮಂದಿ ಪ್ರಯಾಣಿಸಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಫೋನ್ ಚಾರ್ಜಿಂಗ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಅನ್ನು ಪಡೆದಿದೆ.
ಟಾಟಾ ಪಂಚ್ (Tata Punch) ಮೆಕ್ರೋ ಎಸ್‌ಯುವಿಯಾಗಿದ್ದು, ರೂ.6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಪಡೆದಿದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿಯೂ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 18.8 ರಿಂದ 20.09 ಕೆಎಂಪಿಎಲ್, ಸಿಎನ್‌ಜಿ ರೂಪಾಂತರ 26.99 ಕೆಎಂ/ಕೆಜಿ ಮೈಲೇಜ್ ನೀಡುತ್ತದೆ.

ಈ ಪಂಚ್ ಕಾರು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ರೇರ್ ವ್ಯೂ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಮಹೀಂದ್ರಾ ಎಕ್ಸ್‌ಯುವಿ300 (Mahindra XUV300) ಕಾರು ರೂ.7.99 ಲಕ್ಷದಿಂದ ರೂ.14.76 ಲಕ್ಷ ಎಕ್ಷ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿದೆ. 2WD (ಟೂ ವೀಲ್ ಡ್ರೈವ್) ತಂತ್ರಜ್ಞಾವನ್ನು ಒಳಗೊಂಡಿದ್ದು, 20.1 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಈ ಎಕ್ಸ್‌ಯುವಿ300ಕಾರು ಡಬ್ಲ್ಯೂ2, ಡಬ್ಲ್ಯೂ4, ಡಬ್ಲ್ಯೂ6 ಒಳಗೊಂಡಂತೆ 5 ರೂಪಾಂತರ ಮತ್ತು ವಿವಿಧ ಬಣ್ಣಗಳ ಆಯ್ಕೆಯೊಂದಿಗೂ ಲಭ್ಯವಿದ್ದು, 5 ಮಂದಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸನ್‌ರೂಫ್, ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.
ಇನ್ನು, ಮಾರುತಿ ಸುಜುಕಿ ಬ್ರೆಝಾ, ಟಾಟಾ ಪಂಚ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳು ಒಂದಕ್ಕಿಂತ ಒಂದು ಅತ್ಯಾಧುನಿಕವಾಗಿವೆ. ಭರ್ಜರಿ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಬಹುತೇಕರ ಆಯ್ಕೆಯ ವಾಹನಗಳಾಗಿದ್ದು, ಮುಂಬರುವ ದಿನಗಳಲ್ಲಿ ಈ ಕಾರುಗಳಿಗೆ ಮತ್ತಷ್ಟು ಬೇಡಿಕೆ ಬಂದರೂ ಅಚ್ಚರಿ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








