ಫೋಕ್ಸ್‌ವಾಗನ್‌ ಪೊಲೋ ಜಿಟಿಯನ್ನು ಖರೀದಿಸಲು ಕೊಟಿ ಬೆಲೆಯ ಫೆರಾರಿ ಮಾರಿದ ನಟ: ಇದು ನಿಜವಾದ ಕ್ರೇಜ್‌!

ಕೋಟಿ ಕೋಟಿ ದುಡಿಯುತ್ತಿದ್ದ ನಟನೊಬ್ಬ ಒಂದು ಸಾಧಾರಣ ಕಾರನ್ನು ಖರೀದಿಸುವುದಕ್ಕಾಗಿ ತನ್ನ ಬಳಿ ಇದ್ದ ಕೋಟಿ ಬೆಲೆಯ ಫೆರಾರಿಯನ್ನೇ ಮಾರಿದ್ದ ಎಂದರೆ ನಿಮಗೆ ನಂಬಲು ಸಾಧ್ಯವೇ. ನೀವು ನಂಬದಿದ್ದರೂ, ನಂಬಲೇ ಬೇಕಾದ ಘಟನೆ ಇದು. ಬಾಲಿವುಡ್‌ ನಟನೊಬ್ಬ ತನ್ನ ಜೀವನದಲ್ಲಿ ನಡೆದ ಈ ಘಟನೆಯನ್ನು ಇದೀಗ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದು, ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿದ್ದಾರೆ. ಈ ನಟ ತನ್ನ ಬಳಿಯಿದ್ದ ಫೆರಾರಿ ಕಾರನ್ನು ಮಾರಾಟ ಮಾಡಿ, ಫೋಕ್ಸ್‌ವಾಗನ್‌ ಪೊಲೋ ಜಿಟಿಯನ್ನು ಖರೀದಿ ಮಾಡಿದ್ದ ಎಂಬುದನ್ನು ನೀವು ನಂಬಲೇ ಬೇಕು.

ಹೌದು, ನಾವಿಂದು ಮಾತನಾಡುತ್ತಿರುವುದು ಬಾಲಿವುಡ್‌ ನಟ ಇಮ್ರಾನ್‌ ಖಾನ್‌ ಬಗ್ಗೆ. ಮಾಶಬಲ್‌ ಇಂಡಿಯಾ ಎಂಬ ಯ್ಯೂಟ್ಯೂಬ್‌ ಪೇಜ್‌ ಮೂಲಕ ಈ ಘಟನೆ ಜಗಜ್ಜಾಹೀರಾಗಿದೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಪೊಲೋ ಜಿಟಿ ಇಲ್ಲದಿದ್ದರೂ ಈ ಕಾರಿನ ಅಭಿಮಾನಿಗಳಿಗೆ ಮಾತ್ರ ಭಾರತದಲ್ಲಿ ಯಾವುದೇ ಕಮ್ಮಿಯಿಲ್ಲ.

Bollywood Actor Imran Khan Revealed Why he Sold His Ferrari To Buy Volkswagen Polo GT

ಮೂಲತಃ ಇಮ್ರಾನ್‌ ಖಾನ್ ಒಬ್ಬ ಪಕ್ಕಾ ಕಾರು ಪ್ರೇಮಿ. ಇವರ ಬಳಿಯಿದ್ದ ಫೆರಾರಿ ಕಾರನ್ನು ಪ್ರತಿನಿತ್ಯ ಮುಂಬಯಿಯ ಗದ್ದ ಕೂಡಿದ ರಸ್ತೆಗಳಲ್ಲಿ ಓಡಿಸುವುದು ತೀರಾ ಕಷ್ಟವಾಗುತ್ತಿತ್ತಂತೆ. ಈ ಕಾರಣದಿಂದಲೇ ಇವರು ತಮ್ಮ ಕಾರನ್ನು ಕೊಟ್ಟು ಅದರ ಬದಲಿಗೆ ಫೋಕ್ಸ್‌ವಾಗನ್‌ನ ಪ್ರಸಿದ್ದ ಪೊಲೋ ಜಿಟಿಯನ್ನು ಖರೀದಿಸಿ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಮಾಡಿಫೈ ಮಾಡಿಸಿಕೊಂಡು ಡ್ರೈವ್‌ ಮಾಡುತ್ತಿದ್ದರು ಎಂದು ತಮ್ಮ ಮನದಾಳದಲ್ಲಿ ಹುದುಗಿದ್ದ ಮಾತುಗಳನ್ನು ಆಡಿದ್ದಾರೆ.

2010 ರಲ್ಲಿ ಪೋಕ್ಸ್‌ವಾಗನ್‌ ಭಾರತದಲ್ಲಿ ಪೊಲೋ ಹ್ಯಾಚ್‌ಬಾಕ್‌ ಕಾರನ್ನು ಲಾಂಚ್‌ ಮಾಡಿತ್ತು. ಭಾರತಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಪೊಲೋ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಸಾಲಿಗೆ ಸೇರಿಕೊಂಡಿತು. ಈ ಕಾರಿನ ಗಾತ್ರ, ಇದರ ವೇಗ, ಅದ್ಭುತ ಪರ್ಫಾಮನ್ಸ್‌ಗೆ ಮನಸೋತ ಭಾರತೀಯರು ಈ ಕಾರನ್ನು ಬಹುಬೇಗ ತಮ್ಮ ಮಡಿಲಿಗೆ ಸೇರಿಸಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದಾಗಿ ಫೋಕ್ಸ್‌ವಾಗನ್‌ ಸಂಸ್ಥೆ (Volkswagen Polo) 2022 ರಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿದ್ದರು.

Bollywood Actor Imran Khan Revealed Why he Sold His Ferrari To Buy Volkswagen Polo GT

ಇನ್ನು ಮಾಹಿತಿಗಳ ಪ್ರಕಾರ ಕಂಪನಿ ಈ ಕಾರಿನ ಎಲೆಕ್ಟ್ರಿಕ್‌ ಮಾದರಿಯನ್ನು ಮಾರುಕಟ್ಟೆಗೆ ತರಲಿದೆ ಎಂಬ ಮಾತುಗಳು ಕೇಳಿ ಬರತ್ತಿದೆ. ಈ ನಿಟ್ಟಿನಲ್ಲಿ ಕಂಪನಿ ಕೆಲಸವನ್ನು ಸಹ ಮಾಡುತ್ತಿದೆ. ಭಾರತಕ್ಕೆ ಈ ಕಾರು ಎಸ್‌ಯುವಿ ಅಥವಾ ಎಲೆಕ್ಟ್ರಿಕ್‌ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಫೋಕ್ಸ್‌ವಾಗನ್‌ ಸಂಸ್ಥೆಯ ವಾರ್ಷಿಕ ಬ್ರಾಂಡ್‌ ಮೀಟಿಂಗ್‌ 2024 ರಲ್ಲಿ ಫೋಕ್ಸ್‌ವಾಗನ್‌ ಸಂಸ್ಥೆಯ ಬ್ರಾಂಡ್‌ ಡೈರೆಕ್ಟರ್‌ ಆದ ಆಶಿಶ್‌ ಗುಪ್ತಾ ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪೊಲೋ ಮಾದರಿಯ ಮರು ಆಗಮನವನ್ನು ಖಚಿತ ಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಹೆಚ್ಚು ಅಗ್ರೇಸಿವ್ ಆದ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ (Volkswagen Polo Track) ಕಾರನ್ನು ಕಂಪನಿ ಬಿಡುಗಡೆ ಮಾಡಿತ್ತು. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ 'ಕ್ರಾಸ್ ಪೋಲೊ' ರೀತಿಯಲ್ಲಿ ಸಂಪೂರ್ಣವಾಗಿ ಹಾರ್ಡ್‌ಕೋರ್‌ಗೆ ಹೋಗದಿದ್ದರೂ, ಹೊಸ ಪೋಲೊ ಒರಟಾದ ರಸ್ತೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುವಲ್ಲಿ ಸಮರ್ಥವಾಗಿದೆ.

ಇನ್ನು ಈ ಪೊಲೊ ಟ್ರ್ಯಾಕ್ ಅನ್ನು ಬ್ರೆಜಿಲ್‌ನಲ್ಲಿನ ಕೃಷಿಭೂಮಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ. ಕಂಪನಿಯು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಇತರ ನವೀಕರಣಗಳೊಂದಿಗೆ ದೇಶದಲ್ಲಿ ತನ್ನ ಎಂಟ್ರಿ ಲೆವೆಲ್ ಒರಟಾದ ಕೊಡುಗೆಯಾಗಿ ಹೊಸ ಪೋಲೋ ಟ್ರ್ಯಾಕ್‌ನೊಂದಿಗೆ ರೈತರನ್ನು ಗುರಿಯಾಗಿಸಿಕೊಂಡಿದೆ.

ಬ್ರೆಜಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ 1.0-ಲೀಟರ್ ಎಂಜಿನ್‌ ಅನ್ನು ನೀಡಿದ್ದು, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಬ್ರೆಜಿಲ್‌ನಲ್ಲಿನ ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನಲ್ಲಿ ಪೋಲೊ ರೋಬಸ್ಟ್ ಸ್ವಲ್ಪ ಎತ್ತರದ ಸಸ್ಪೆಕ್ಷನ್ ಅನ್ನು ಪಡೆಯುತ್ತದೆ. ಇದು ವಿನೈಲ್ ಸೀಟ್‌ಗಳನ್ನು ಸಹ ಪಡೆಯುತ್ತದೆ. ಇದು ಹೊಲಗಳಿಂದ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಿದ ನಂತರ ತೊಳೆಯಲು ಸುಲಭವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 28, 2024, 18:42 [IST]
English summary
Bollywood actor imran khan revealed why he sold his ferrari to buy volkswagen polo gt
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+