ಕೋಟಿ ಬೆಲೆಯ ಲ್ಯಾಂಡ್‌ರೋವರ್‌ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!

ಭಾರತದಲ್ಲಿ ಲ್ಯಾಂಡ್‌ರೋವರ್‌ ರೇಂಜ್‌ ರೋವರ್‌ ಕಾರುಗಳೆಂದರೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಒಂಥರಾ ಹೇಳಲಾಗದ ಕ್ರೇಜ್‌. ನಟ ಯಶ್‌ ಸೇರಿ ಸ್ಯಾಂಡಲ್‌ವುಡ್ ಮತ್ತು ಭಾರತದ ಇತರ ಹಲವಾರು ಚಿತ್ರರಂಗದವರು, ರಾಜಕಾರಣಿಗಳು, ಬ್ಯುಸಿನೆಸ್‌ಮೆನ್‌ಗಳು ಹೀಗೆ ಹಲವು ರಂಗದವರ ನೆಚ್ಚಿನ ಕಾರು ಬ್ರಾಂಡ್‌ ಆಗಿದೆ.

ಇದೀಗ ಆ ಸಾಲಿಗೆ ಬಾಲಿವುಡ್‌ ಗಾಯಕಿ ನೇಹಾ ಕಕ್ಕರ್‌(Neha Kakkar) ಸಹ ಸೇರಿದ್ದಾರೆ. ಹಲವಾರು ಹಿಟ್‌ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಕೇವಲ ಹಾಡುಗಾರ್ತಿ ಮಾತ್ರವಾಗಿರದ ನೇಹಾ ಕಕ್ಕರ್‌, ಹಲವಾರು ಟಿವಿ ಶೋಗಳಿಗೆ ಜಡ್ಜ್‌ ಆಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಹೊಸ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಅನ್ನು ಖರೀದಿ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Bollywood Singer Neha Kakkar Brought Land Rover Defender

ಹೊಸ ಲ್ಯಾಂಡ್‌ ರೋವರ್‌ ಡಿಫೆಂಡರ್ (Land Rover Defender) ಲಕ್ಷುರಿ ಕಾರನ್ನು ಖರೀದಿ ಮಾಡುವ ಮೂಲಕ ಈ ದುಬಾರಿ ಕಾರನ್ನು ಖರೀದಿಸಿದ ಮೊದಲ ಬಾಲಿವುಡ್‌ ಸಿಂಗರ್‌ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಹೌದು, ಇದಕ್ಕೂ ಮೊದಲು ಯಾವೊಬ್ಬ ಬಾಲಿವುಡ್‌ ಸಿಂಗರ್‌ ಸಹ ಲ್ಯಾಂಡ್‌ ರೋವರ್‌ ಡಿಫೆಂಡರ್ ಕಾರನ್ನು ಖರೀದಿ ಮಾಡಿರಲಿಲ್ಲ.

ಇನ್ನು ನೇಹಾ ಕಕ್ಕರ್‌ ಖರೀದಿ ಮಾಡಿರುವ ಈ ಲ್ಯಾಂಡ್‌ ರೋವರ್‌ ಡಿಫೆಂಡರ್, 110 HSE ಮಾದರಿಯದ್ದಾಗಿದ್ದು ಇದರ ಬೆಲೆ ಸುಮಾರು ೧.೫ ಕೋಟಿ ರೂಗಳು ಎಕ್ಸ್‌ ಶೋ ರೂಮ್. ಮಾತ್ರವಲ್ಲದೇ, 20 ಇಂಚ್‌ ಅಲಾಯ್‌ ವ್ಹೀಲ್‌ ಇರುವ ಮಾದರಿಯನ್ನು ಈ ಗಾಯಕಿ ಆಯ್ಕೆ ಮಾಡಿಕೊಂಡಿದ್ದಾರೆ. ಆಫ್‌ರೋಡ್‌ನಲ್ಲಿ ಅದ್ಭುತ‌ ಪರ್ಫಾಮೆನ್ಸ್‌ ನೀಡುವ ಈ ಕಾರು ಹಲವರ ನೆಚ್ಚಿನ ವಾಹನವಾಗಿದೆ.

Bollywood Singer Neha Kakkar Brought Land Rover Defender

ಇನ್ನು ಸದ್ಯ ಮಾರುಕಟ್ಟೆಯಲ್ಲಿರುವ ಡಿಫೆಂಡರ್‌ ಬಗ್ಗೆ ಮಾತನಾಡುವುದಾದರೆ, ಪ್ರಸ್ತುತ ಹೊಸ ಲ್ಯಾಂಡ್ ರೋವರ್ 90, 110, ಮತ್ತು 130 ಎಂಬ ಮೂರು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ 130 ವೇರಿಯೆಂಟ್ ಬ್ರ್ಯಾಂಡ್‌ನಿಂದ ಹೊರಬಂದ ಹೊಸ ಬಿಡುಗಡೆಯಾಗಿದ್ದು, ಇದು 110 ಮಾದರಿಯಂತೆಯೇ 5 ಡೋರ್ ಆವೃತ್ತಿಯಾಗಿದೆ. ಇದು ಏಳು ಜನರು ಪ್ರಯಾಣಿಸುವ ಆಸನ ವಿನ್ಯಾಸವನ್ನು ಒಳಗೊಂಡಿದೆ. ಇವುಗಳ ಬೆಲೆಯು 93 ಲಕ್ಷದಿಂದ ಆರಂಭವಾಗಿ 2.30 ಕೋಟಿ ರೂ.ವರೆಗೆ ಹೋಗುತ್ತದೆ.

ಮೂರರಲ್ಲಿ ಎರಡು ಪೆಟ್ರೋಲ್, ಒಂದು ಡೀಸೆಲ್ ಎಂಜಿನ್ ಆಯ್ಕೆಯಿದೆ. ಟರ್ಬೊ ಪೆಟ್ರೋಲ್ ಎಂಜಿನ್‌ಗಳು 2.0-ಲೀಟರ್ 4-ಸಿಲಿಂಡರ್ ಘಟಕವನ್ನು ಒಳಗೊಂಡಿದ್ದು, 300 bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 3.0-ಲೀಟರ್ 6-ಸಿಲಿಂಡರ್ ಸಹ ಕೊಡುಗೆಯಲ್ಲಿದ್ದು, ಇದು ಗರಿಷ್ಠ 400 bhp ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Bollywood Singer Neha Kakkar Brought Land Rover Defender

ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿರುವ ಟರ್ಬೊ ಡೀಸೆಲ್ ಎಂಜಿನ್ 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್ ಯುನಿಟ್ ಆಗಿದ್ದು, ಇದು 300 bhp ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂತಹ ಅದ್ಬುತ ಕಾರನ್ನು ತೀರಾ ಇತ್ತೀಚೆಗೆ, ಪ್ರಸಿದ್ಧ ಬಾಲಿವುಡ್ ನಟಿ ಖರೀದಿಸಿದ್ದಾರೆ. ಅವರ ಹೊಸ ಡಿಫೆಂಡರ್‌ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 18, 2024, 11:00 [IST]
English summary
Bollywood singer neha kakkar brought land rover defender
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+