ರೂ.6 ಲಕ್ಷದೊಳಗಿನ ಬೆಸ್ಟ್ ಎಸ್‌ಯುವಿಗಳು... 30 ಕಿ.ಮೀ ಮೈಲೇಜ್... ನಿಮ್ಮಿಷ್ಟದ ಕಾರು ಆಯ್ಕೆ ಮಾಡಿ!
ಭಾರತದಲ್ಲಿ ಎಸ್‌ಯುವಿಗಳಿಗೆ ಭರ್ಜರಿ ಬೇಡಿಕೆಯಿದೆ, ಆದ್ರೆ ಬಜೆಟ್ ಬೆಲೆಯಲ್ಲಿ ಸಿಗುವ ಎಸ್‌ಯುವಿಗಳಿಗಾಗಿ ಮಧ್ಯಮ ವರ್ಗದ ಜನರು ಹುಡುಕಾಡುತ್ತಾರೆ. ಅಂಥವರಿಗಾಗಿಯೇ ಕಡಿಮೆ ಬೆಲೆಯಲ್ಲಿ ಲಭ್ಯವಿರುವ SUV ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಕಾರುಗಳ ಮೈಲೇಜ್ ಕೂಡ ಅದ್ಭುತವಾಗಿದ್ದು, ನಿರ್ವಹಣೆಗಾಗಿ ನೀವು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ.
ಟಾಟಾ ಪಂಚ್: ಈ ಪಟ್ಟಿಯಲ್ಲಿ ಮೊದಲ ಕಾರು ಟಾಟಾದ ಅತ್ಯಂತ ಜನಪ್ರಿಯ ಮೈಕ್ರೋ SUV ಪಂಚ್ (Tata punch) ಆಗಿದೆ. ಕಂಪನಿಯು ಪಂಚ್‌ನಲ್ಲಿ ಅದ್ಭುತ ವೈಶಿಷ್ಟ್ಯಗಳ ಜೊತೆಗೆ, ಅತ್ಯುತ್ತಮ ಸುರಕ್ಷತಾ ರೇಟಿಂಗ್ (5 ನಕ್ಷತ್ರಗಳು)ನೊಂದಿಗೆ ಬರುತ್ತದೆ. ಇದರ ಮೂಲ ಮಾದರಿಯು ರೂ. 5.99 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟಾಟಾ ಪಂಚ್ 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಲ್ಲೂ ಲಭ್ಯವಿದೆ. ಹಾಗೆಯೇ ಕಾರು ನಿಮಗೆ ಸಿಎನ್‌ಜಿನಲ್ಲೂ ಲಭ್ಯವಿದೆ. CNG ಯಲ್ಲಿ ಬರೋಬ್ಬರಿ 30 km/kg ಮೈಲೇಜ್ ನೀಡುತ್ತದೆ. ವೈಶಿಷ್ಟ್ಯಗಳನ್ನು ನೋಡುವುದಾದ್ರೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲ್ ಪಡೆಯಬಹುದು.
ನಿಸ್ಸಾನ್ ಮ್ಯಾಗ್ನೈಟ್: Nissan Magnite ಪವರ್‌ಫುಲ್ ಎಂಜಿನ್ ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ವಿನ್ಯಾಸ ಹೊಂದಿರುವ ಬಜೆಟ್ ಕಾರು. ವೈಶಿಷ್ಟ್ಯಗಳು ಸಹ ಅದ್ಭುತವಾಗಿವೆ. ಉತ್ತಮ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳಂತಹ ಅನೇಕ ವೈಶಿಷ್ಟ್ಯಗಳನ್ನು ಪಡೆಯಬಹುದು.

ಈ ಕಾರು ರೂ. 5.99 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಈ ಕಾರನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ. ಇದು ನಿಮಗೆ 1.0 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ 71 bhp ಪವರ್ ಮತ್ತು ಟರ್ಬೊ ಎಂಜಿನ್ 99 bhp ಪವರ್ ಉತ್ಪಾದಿಸುತ್ತದೆ.
ರೆನಾಲ್ಟ್ ಕೈಗರ್: Renault Kiger ಸಹ ನಿಮಗೆ ಬಜೆಟ್ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಿದೆ. ನಿಸ್ಸಾನ್ ಮ್ಯಾಗ್ನೈಟ್, ಕೈಗರ್ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಕಾರುಗಳಾಗಿವೆ. ಆದರೆ ಕೈಗರ್‌ನ ವೈಶಿಷ್ಟ್ಯಗಳಲ್ಲಿ ನೀವು ಖಂಡಿತವಾಗಿಯೂ ಕೆಲವು ಹೆಚ್ಚಿನ ವ್ಯತ್ಯಾಸಗಳನ್ನು ನೋಡುತ್ತೀರಿ. ಹಾಗಾಗಿ ಕಾರಿನ ಬೆಲೆ ಕೂಡ ಮ್ಯಾಗ್ನೈಟ್‌ಗಿಂತ ಸ್ವಲ್ಪ ಹೆಚ್ಚಾಗಿದೆ.

ರೆನಾಲ್ಟ್ ಕೈಗರ್ನಲ್ಲೂ ನೀವು 1.0 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳನ್ನು ನೋಡಬಹುದು. ಈ ಕಾರಿನಲ್ಲಿ 5 ಸ್ಪೀಡ್ ಮ್ಯಾನುವಲ್, CVT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಬಹುದು. ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 24 ಕಿ.ಮೀ ವರೆಗೆ ಬರುತ್ತದೆ. ಇದರ ಬೆಲೆಯು ರೂ. 6.49 ಲಕ್ಷ ಎಕ್ಸ್ ಶೋ ರೂಂ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








