ಮಾರ್ಚ್‌ 5 ರಂದು ಬಿವೈಡಿ ಸೀಲ್‌ ಲಾಂಚ್: 570 ರೇಂಜ್‌ ಮತ್ತು ಇತರ ಹೈಲೈಟ್ಸ್‌ ನೋಡಿ!

ಚೀನಾದ ಪ್ರತಿಷ್ಟಿತ ಕಾರು ನಿರ್ಮಾಣ ಕಂಪನಿಯಾದ ಬಿವೈಡಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ಪರಿಚಯಿಸಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಬಿವೈಡಿ ತನ್ನ ಶೋರೂಮ್‌ಗಳನ್ನು ತೆರೆದು ಕಾರ್ಯ ಪೃವೃತ್ತವಾಗಿದೆ. ಬಿವೈಡಿ ಭಾರತದಲ್ಲಿ ಹೊಸ ಕಾರಾದ ಸೀಲ್‌ ಅನ್ನು ಮಾರ್ಚ್‌ 5 ರಂದು ಲಾಂಚ್‌ ಮಾಡಲಿದ್ದು ಈ ಕಾರಿನ ಪ್ರಮುಖ ವಿಷಯಗಳನ್ನು ನೋಡೋಣ.

ಇಂದಿನ ಈ ಲೇಖನದಲ್ಲಿ ಭಾರತದಲ್ಲಿ ಇದೇ ಮಾರ್ಚ್‌ 5 ರಂದು ಲಾಂಚ್‌ ಮಾಡಲಿರುವ ಬಿವೈಡಿ ಸೀಲ್‌ ಕಾರಿನ ಟಾಪ್‌ ಹೈಲೈಟ್ಸ್‌ ಏನೆಂದು ನೋಡಲಿದ್ದು, ಈ ಕಾರಿನ ಕುರಿತಾದ ಇಂಟರೆಸ್ಟಿಂಗ್‌ ವಿಷಯಗಳನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೆ ಓದಿ ಮತ್ತು ಈ ಕಾರಿನ ವಿಡಿಯೋಗಳನ್ನು ನೋಡಲು ಕನ್ನಡ ಡ್ರೈವ್‌ಸ್ಪಾರ್ಕ್‌ ಚಾನಲ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿ.

BYD Seal

ವೇರಿಯಂಟ್ಸ್‌: ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು ಸ್ಟ್ಯಾಂಡರ್ಡ್, ಎಕ್ಸೆಂಡೆಡ್ ರೇಂಜ್ ಮತ್ತು ಪರ್ಫಾಮೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರು ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಅಟ್ಲಾಂಟಿಸ್ ಗ್ರೇ ಮತ್ತು ಆರ್ಕ್ಟಿಕ್ ಬ್ಲೂ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ಪವರ್‌: ಈ ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು 82.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿರುತ್ತದೆ. ಇದರೊಂದಿಗೆ, ಸಿಂಗಲ್ ಚಾರ್ಜ್‌ನಲ್ಲಿ 570km (WLTP ಸೈಕಲ್) ರೇಂಜ್ ಅನ್ನು ನೀಡುತ್ತದೆ. ಇದರ ಪವರ್ ಔಟ್‌ಪುಟ್‌ಗೆ ಬರುವುದಾದರೆ, ಹಿಂಭಾಗದ ಆಕ್ಸಲ್-ಮೌಂಟೆಡ್ ಮೋಟಾರ್ ಅನ್ನು 230bhp ಮತ್ತು 360Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು ಆರು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

BYD Seal

ಬೆಲೆ: ಕೆಲವೇ ದಿನಗಳಲ್ಲಿ ಈ ಸೆಡಾನ್ ಬೆಲೆಯನ್ನು ಘೋಷಿಸುವ ನೀರಿಕ್ಷೆಯಿದೆ. ರೂ .60 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಬಿವೈಡಿ ಆಟ್ಟೋ 3 ಕಾರಿನ ಬೆಲೆ ಸುಮಾರು ೩35.98 ಲಕ್ಷ ಎಕ್ಸ್‌ ಶೋ ರೂಮ್‌ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಇಂಟೀರಿಯರ್‌: ಸದ್ಯ ಯುರೋಪ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಸೆಡಾನ್, 'ಇ-ಪ್ಲಾಟ್‌ಫಾರ್ಮ್ 3.0 ಆರ್ಕಿಟೆಕ್ಚರ್' ಅನ್ನು ಆಧರಿಸಿದೆ. ಈ ಕಾರಿನಲ್ಲಿ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಆಲ್‌ ವ್ಹೀಲ್ ಡ್ರೈವ್: AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿರುವ ಈ ಕಾರು, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಯುರೋ ಎನ್‌ಸಿಎಪಿ (Euro NCAP) ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ವಯಸ್ಕ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಶೇಕಡ 89%ಗೆ 86% ಅಂಕಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಮಲ್ಟಿ ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 1, 2024, 18:12 [IST]
English summary
Byd seal all set to launch on march 5 2024 range price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+