ಟೊಯೋಟಾ ಟೈಸರ್‌ ಬೆಲೆಗೆ ಯಾವೆಲ್ಲಾ ಕಾರುಗಳು ಸಿಗುತ್ತೆ ಗೊತ್ತಾ?: ಎಷ್ಟೊಂದು ಆಯ್ಕೆಗಳು!

ಟೊಯೋಟಾ ಟೈಸರ್‌ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಮಾರುತಿ ಸುಜುಕಿಯ ಪ್ರಸಿದ್ದ ಕ್ರೋಸ್‌ಓವರ್ ಎಸ್‌ಯುವಿಯಾದ ಫ್ರಾಂಕ್ಸ್‌ನ ರೀ ಬ್ಯಾಂಡ್ಜಿಂಗ್‌ ಟೊಯೊಟಾ ಕಾರಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಆರಂಭಿಸಿದೆ. ಇಂದಿನ ಲೇಖನದಲ್ಲಿ ಟೈಸರ್‌ ಬೆಲೆಗೆ ಬದಲಿ ಯಾವೆಲ್ಲಾ ಕಾರುಗಳನ್ನು ಕೊಳ್ಳಬಹುದು ಎಂದು ನೋಡೋಣ.

ಫ್ರಾಂಕ್ಸ್‌ ಮತ್ತು ಟೈಸರ್‌ ( Toyota Urban Cruiser Taisor) ನಡುವೆ ಇರುವ ಮತ್ತೊಂದು ವ್ಯತ್ಯಾಸವೆಂದರೆ ಇದರ ಬೆಲೆ. ಮಾರುತಿ ಸುಜುಕಿ ಫ್ರಾಂಕ್ಸ್‌ ಆರಂಭಿಕ ಬೆಲೆ 7.52 ಲಕ್ಷ ಎಕ್ಸ್‌ ಶೋರೂಮ್‌. ಅದೇ ಸಂಧರ್ಭದಲ್ಲಿ ಟೊಯೋಟಾ ಅರ್ಬನ್‌ ಕ್ರೂಸರ್ ಟೈಸರ್‌ (Toyota Urban Cruiser Taisor) ಆರಂಭಿಕ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 7.74 ಲಕ್ಷ ರೂಪಾಯಿಗಳು. ಇದರ ಟಾಪ್ ವೇರಿಯಂಟ್‌ ಬೆಲೆ ಸುಮಾರು 9.53 ಲಕ್ಷ ರೂಪಾಯಿಗಳು.

Cars You can Buy Instead Of Toyota Urban Cruiser Taisor

ಮಾರುತಿ ಫ್ರಾಂಕ್ಸ್‌: ಟೈಸರ್‌ ಬೆಲೆಗೆ ಖರೀದಿ ಮಾಡಬಹುದಾದ ಕಾರುಗಳಲ್ಲಿ ಇದೂ ಸಹ ಒಂದು. 1.2 ಲೀಟರ್ ಎಂಜಿನ್, 88.5 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್/ ಆಟೋಮ್ಯಾಟಿಕ್ (AMT) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 998ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 98.7 ಪವರ್, 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹ್ಯುಂಡೈ ವೆನ್ಯೂ: ಟೈಸರ್‌ ಬೆಲೆಗೆ ಖರೀದಿಸಬಹುದಾದ ಮತ್ತೊಂದು ಕಾರು ಹ್ಯುಂಡೈ ವೆನ್ಯೂ. ಹ್ಯುಂಡೈ ವೆನ್ಯೂ ಎಸ್‍ಯುವಿ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7,94,100 ಆದರೆ ಆನ್ ರೋಡ್ ಬೆಲೆಯು ರೂ.9,63,306 ಆಗಿದೆ. ಈ ಹ್ಯುಂಡೈ ವೆನ್ಯೂ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ನೀಡಲಾಗಿದೆ.

Cars You can Buy Instead Of Toyota Urban Cruiser Taisor

ಇದು ಕ್ರೆಟಾದಂತೆಯೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವಂತೆ ಅಪ್ಡೇಟ್ ಮಾಡಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಬದಲಿಗೆ, ವೆನ್ಯೂ ಡೀಸೆಲ್ ಈಗ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಹ್ಯುಂಡೈ ಎಸ್‍ಯುವಿಯ ಎಂಜಿನ್ 113.5 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹ್ಯುಂಡೈ i20 Sportz: ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್, ರೂ.7.04 ಲಕ್ಷದಿಂದ ರೂ.11.21 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎರಾ, ಮ್ಯಾಗ್ನಾ, ಸ್ಪೋರ್ಟ್ಜ್, ಸ್ಪೋರ್ಟ್ಜ್ (ಒ), ಅಸ್ತಾ ಸೇರಿದಂತೆ 6 ರೂಪಾಂತರ ಮತ್ತು ಅಮೆಜಾನ್ ಗ್ರೇ, ಫಿಯರಿ ರೆಡ್, ಅಟ್ಲಾಸ್ ವೈಟ್ ಒಳಗೊಂಡಂತೆ 2 ಡುಯಲ್ ಟೋನ್, 6 ಮೊನೊಟೋನ್ ಬಣ್ಣಗಳೊಂದಿಗೆ ಸಿಗುತ್ತದೆ.

Cars You can Buy Instead Of Toyota Urban Cruiser Taisor

ಮಾರುತಿ ಬ್ರೆಝಾ: ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 1, 2023 ರಿಂದ ಫೆಬ್ರವರಿ 2024 ರವರೆಗಿನ ಆರ್ಥಿಕ ವರ್ಷದಲ್ಲಿ 155,283 ಯುನಿಟ್ ಬ್ರೆಝಾ ಎಸ್‌ಯುವಿ ಮಾರಾಟವಾಗಿದ್ದವು. ಈ ಅಂಶವೇ ಬ್ರೆಝಾ ಕಾರಿನ ಖ್ಯಾತಿ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಬೆಂಗಳೂರಿನಲ್ಲಿ ಬೇಸ್ ಮಾಡೆಲ್ ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ ರೂ.9.95 ಲಕ್ಷ, ಎಲ್ಎಕ್ಸ್ಐ ಸಿಎನ್‌ಜಿ ಮಾದರಿ ರೂ.11.07 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 9, 2024, 17:30 [IST]
English summary
Cars you can buy instead of toyota urban cruiser taisor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+