CES 2024: ಇಡೀ ವಿಶ್ವ ತಿರುಗಿ ನೊಡುವಂತೆ ಮಾಡಿದ ಹೋಂಡಾ-ಸೋನಿ: ಇದು ಭವಿಷ್ಯದ ಕಾರು
ತಂತ್ರಜ್ಞಾನ ದೈತ್ಯ ಸೋನಿ ಮತ್ತು ಜಪಾನಿನ ಜನಪ್ರಿಯ ವಾಹನ ತಯಾರಕರಾದ ಹೋಂಡಾ ನಡುವಿನ ಜಂಟಿ ಉದ್ಯಮದಲ್ಲಿ ನಿರ್ಮಾಣವಾಗುತ್ತಿರುವ ಅಫೀಲಾ ಎಲೆಕ್ಟ್ರಿಕ್ ಸೆಡಾನ್ (afeela ev) ಅನ್ನು CES 2024 ರಲ್ಲಿ ಅನಾವರಣಗೊಳಿಸಲಾಗಿದೆ. ಜಂಟಿ ಉದ್ಯಮದ ಇತ್ತೀಚಿನ ಮೂಲಮಾದರಿಯ ನವೀಕರಿಸಿದ ವಿನ್ಯಾಸವನ್ನು CES 2024 ರಲ್ಲಿ ಪ್ರದರ್ಶಿಸಲಾಗಿದೆ.
ಏನಿದು CES 2024?: CES (Consumer Electronics Show) ಗ್ರಾಹಕ ತಂತ್ರಜ್ಞಾನ ಸಂಘದ ವಾರ್ಷಿಕ ವ್ಯಾಪಾರ ಪ್ರದರ್ಶನ, ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿನ ಪ್ರಮುಖ ತಯಾರಕರಿಂದ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಈ ಸಿಇಎಸ್ ಜನಪ್ರಿಯವಾಗಿದೆ. ಇದೀಗ ಸೋನಿ ಮತ್ತು ಹೋಂಡಾದಿಂದ ಹೊರಬರಲಿರುವ ಸಂಪೂರ್ಣ ಎಲೆಕ್ಟ್ರಿಕ್ ಸೆಡಾನ್ ವಿಶೇಷತೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

CES 2024, AI (ಕೃತಕ ಬುದ್ಧಿಮತ್ತೆ) ನ ಹೆಚ್ಚುತ್ತಿರುವ ಬಳಕೆಯ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ತಂತ್ರಜ್ಞಾನ, ಸಾರಿಗೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಇತ್ತೀಚಿನ ಪ್ರಗತಿಗಳು ಮತ್ತು ಗ್ಯಾಜೆಟ್‌ಗಳನ್ನು ಇದರಲ್ಲಿ ಪ್ರದರ್ಶಿಸಲಾಗುತ್ತದೆ. ಇನ್ನು ಹೋಂಡಾ-ಸೋನಿಯ ಎಲೆಕ್ಟ್ರಿಕ್ ಕಾರು ಕೂಡ EV ಉತ್ಪಾದನೆಗೆ ಹತ್ತಿರದಲ್ಲಿದೆ ಎಂದು ಸುಳಿವು ನೀಡಲು ಇಲ್ಲಿ ಪ್ರದರ್ಶಿಸಲಾಗಿದೆ. ಮೂಲಗಳ ಪ್ರಕಾರ ಈ ಕಾರು 2026 ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.
ಅಫೀಲಾ ಎಲೆಕ್ಟ್ರಿಕ್ ಸೆಡಾನ್ ಬ್ಯಾಟರಿ ಮತ್ತು ಮೋಟಾರ್ ಬಗ್ಗೆ ಹೇಳುವುದಾದ್ರೆ, ಈ ಅತ್ಯಾಧುನಿಕ ಕಾರಿಗೆ ಪವರ್ ನೀಡುವುದು ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿರುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು. ಈ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು 241 bhp ಗರಿಷ್ಠ ಪವರ್ ಉತ್ಪಾದಿಸಬಲ್ಲವು, ಅಂದರೆ ಕಾರು ಒಟ್ಟು 482 bhp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಾಗೆಯೇ ಈ ಎಲೆಕ್ಟ್ರಿಕ್ ಮೋಟರ್‌ಗಳಿಗೆ ಪವರ್ ಒದಗಿಸುವುದು 91 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಗಿದೆ. ಉಳಿದಂತೆ ಸೋನಿ-ಹೋಂಡಾ ಮೊಬಿಲಿಟಿ ಅಫೀಲಾ ಸೆಡಾನ್‌ನ ಪವರ್‌ಟ್ರೇನ್ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ EV 150 kW DC ಫಾಸ್ಟ್ ಚಾರ್ಜರ್ ಮತ್ತು 11 kW ಲೆವೆಲ್ 2 ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಖಚಿತಪಡಿಸಿವೆ.
ವಿನ್ಯಾಸ ಬದಲಾವಣೆಗಳು: ಈ ಹಿಂದೆ ಪ್ರದರ್ಶನವಾಗಿದ್ದಕ್ಕಿಂತ ಈಗ ಹೊಸ ಇವಿ ಕಾರಿನಲ್ಲಿ ಗಮನಾರ್ಹವಾಗಿ ಕೆಲವು ವಿನ್ಯಾಸ ಬದಲಾವಣೆಗಳಾಗಿವೆ. ನವೀಕರಿಸಿದ ಮುಂಭಾಗದ ಬಂಪರ್ ಮತ್ತು ಡಿಜಿಟಲ್ ಡಿಸ್ಪ್ಲೇಯು ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹಿಂಭಾಗದ ಬಂಪರ್ ಮತ್ತು ಟೈಲ್‌ಲೈಟ್‌ಗಳನ್ನು ಸಹ ನವೀಕರಿಸಲಾಗಿದೆ. ಹಾಗೆಯೇ ಈಗ ಉದ್ದಳತೆಗಳಲ್ಲೂ ಕೆಲ ಬದಾಲವಣೆಗಳನ್ನು ಪಡೆದಿದೆ.

ಇಂಟೀರಿಯರ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಕಾರು ಮೊದಲಿನಂತೆ ಇರುತ್ತದೆ. ಆದರೆ ಡ್ಯುಯಲ್ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್‌ನೊಂದಿಗೆ ಪರಿಷ್ಕೃತ ಸೆಂಟರ್ ಕನ್ಸೋಲ್ ಮಾತ್ರ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಉಳಿದಂತೆ ಕ್ಯಾಬಿನ್ ಒಳಗೆ ಹೊಸ ಪರಿಷ್ಕೃತ ಸ್ಟೀರಿಂಗ್ ವೀಲ್ ಮತ್ತು ಹೊಸ ರಿಯರ್ ವೀವ್ ಮಿರರ್ ಅನ್ನು ಒಳಗೊಂಡಿದೆ.
PS5 ನಿಂದ ನಿಯಂತ್ರಣ: CES 2024 ರಲ್ಲಿ, ಅಫೀಲಾ ಎಲೆಕ್ಟ್ರಿಕ್ ಸೆಡಾನ್ ಅನ್ನು PS5 ನಿಯಂತ್ರಕದಿಂದ ಚಾಲನೆ ಮಾಡಬಹುದು ಎಂದು Sony Honda Mobility Inc.ನ CEO Yasuhide Mizuno ಅವರು ತೋರಿಸಿಕೊಟ್ಟಿದ್ದಾರೆ. ಇನ್-ಕಾರ್ ಸಾಫ್ಟ್‌ವೇರ್ ಅನುಭವದ ಕುರಿತು ಮಾತನಾಡಲು ವೇದಿಕೆಯ ಮೇಲೆ ಬಂದ ಅವರು, PS5 ನಿಯಂತ್ರಕದೊಂದಿಗೆ EV ಅನ್ನು ವೇದಿಕೆಯ ಮೇಲೆ ಚಾಲನೆ ಮಾಡಿ ಕಾರಿನ ಸಾಫ್ಟ್‌ವೇರ್ ಸ್ವರೂಪವನ್ನು ತೋರಿಸಿದರು.

ಏನಿದು PS5: PS5 (ಪ್ಲೇಸ್ಟೇಷನ್ 5) ಎಂಬುದು ಮೈಕ್ರೋಸಾಫ್ಟ್‌ನ Xbox ಸರಣಿ X/S ಕನ್ಸೋಲ್‌ಗಳ ಜೊತೆಗೆ ಒಂಬತ್ತನೇ ತಲೆಮಾರಿನ ವಿಡಿಯೋ ಗೇಮ್ ಕನ್ಸೋಲ್‌ಗಳ ಭಾಗವಾಗಿದೆ. ಆಪ್ಟಿಕಲ್ ಡ್ರೈವ್ ನೊಂದಿಗೆ ಮೂಲ ಪ್ಲೇಸ್ಟೇಷನ್ 5 ಕನ್ಸೋಲ್ ಮತ್ತು ಡ್ಯುಯಲ್‌ಸೆನ್ಸ್ ನಿಯಂತ್ರಣಗೊಳಿಸುವ ಗೇಮಿಂಗ್ ತಂತ್ರಜ್ಞಾನವಾಗಿದೆ.


Click it and Unblock the Notifications








