ಜಪಾನ್‌ಗೆ ಸೆಡ್ಡು... ವಿಶ್ವದ ಅಗ್ರ ವಾಹನ ರಫ್ತುದಾರನಾಗಿ ಹೊರಹೊಮ್ಮಿದ ಡ್ರ್ಯಾಗನ್

ಕಳೆದ ವರ್ಷ (2023) ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಚೀನಾ ವಿಶ್ವದ ಅತಿದೊಡ್ಡ ವಾಹನ ರಫ್ತುದಾರನಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ. ಜಪಾನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್ (JAMA) ನೀಡಿದ ಅಂಕಿಅಂಶಗಳ ಪ್ರಕಾರ ಚೀನಾ ರಫ್ತು ಮಾಡಿದ ಯೂನಿಟ್‌ಗಳಿಗಿಂತ ಜಪಾನ್ ರಫ್ತು ಕಡಿಮೆಯಿರುವುದು ಬಹಿರಂಗೊಂಡಿದೆ.

ವರದಿಗಳ ಪ್ರಕಾರ 2023 ರಲ್ಲಿ ಜಪಾನ್ 4.42 ಮಿಲಿಯನ್ ವಾಹನಗಳನ್ನು ರವಾನಿಸಿದೆ ಎಂದು ಅಂಕಿಅಂಶಗಳು ತೋರಿಸಿವೆ. 2024 ಜನವರಿಯಲ್ಲಿ ಚೀನಾ ಅಸೋಸಿಯೇಷನ್ ಆಫ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (CAAM) ವರದಿ ಮಾಡಿದಂತೆ ಚೀನಾದಿಂದ 4.91 ಮಿಲಿಯನ್‌ ವಾಹನಗಳನ್ನು ರಫ್ತು ಮಾಡಲಾಗಿದೆ. ಚೀನಾದ ಕಸ್ಟಮ್ಸ್ ಬ್ಯೂರೋ ಈ ಸಂಖ್ಯೆಯನ್ನು 5.22 ಮಿಲಿಯನ್‌ಗೆ ಹೆಚ್ಚಿಸಿದೆ, ಇದು ವರ್ಷದಿಂದ ವರ್ಷಕ್ಕೆ ಶೇ57 ರಷ್ಟು ಏರಿಕೆಯಾಗಿದೆ.

china-has-overtaken-japan-as-the-worlds-top-auto-exporter

ಜಪಾನ್ ಎಲೆಕ್ಟ್ರಿಕ್ ಹಾಗೂ ತಾಂತ್ರಜ್ಞಾನ ವಿಭಾಗದಲ್ಲಿ ಹೆಚ್ಚು ಜಾಗರೂಕವಾಗಿರುತ್ತದೆ. ಆದರೆ ಇದೀಗ ಚೀನಾ ಎಲೆಕ್ಟ್ರಿಕ್ ಕಾರುಗಳಲ್ಲಿ ಭಾರಿ ಹೂಡಿಕೆ ಮಾಡುವ ಮೂಲಕ ಆಟೋ ವಲಯವು ದೊಡ್ಡ ಪ್ರಮಾಣದಲ್ಲಿ ಉತ್ಕರ್ಷಗೊಂಡಿದೆ. ಚೀನಾ ಈಗಾಗಲೇ ತಿಂಗಳ ಆಧಾರದ ಮೇಲೆ ಜಪಾನ್‌ಗಿಂತ ಹೆಚ್ಚು ವಾಹನಗಳನ್ನು ರಫ್ತು ಮಾಡುತ್ತಿದೆ, ಆದರೆ ಬುಧವಾರ ಹೊರಬಿದ್ದ ಅಂಕಿಅಂಶಗಳು ಕೇವಲ ತಿಂಗಳು ಮಾತ್ರವಲ್ಲ ಚೀನಾ ಇಡೀ ವರ್ಷಕ್ಕೆ ಅಗ್ರ ಸ್ಥಾನದಲ್ಲಿದೆ ಎಂದು ದೃಢಪಡಿಸಿದೆ.

ಜಪಾನಿನ ತಯಾರಕರು ಬ್ಯಾಟರಿ ಪವರ್ ಮತ್ತು ಇಂಧನ ಚಾಲಿತ ಎಂಜಿನ್‌ಗಳನ್ನು ಸಂಯೋಜಿಸುವ ಹೈಬ್ರಿಡ್‌ ಕಾರುಗಳ ಮೇಲೆ ದೀರ್ಘಕಾಲದಿಂದ ಗಮನಹರಿಸಿದ್ದಾರೆ, ಈ ವಿಭಾಗವು ಟೊಯೋಟಾ ಪ್ರಿಯಸ್‌ನೊಂದಿಗೆ ಪ್ರವರ್ತಕವಾಗಿದೆ. ಟೊಯೋಟಾ ವಿಶ್ವದ ಅತಿದೊಡ್ಡ ವಾಹನ ಮಾರಾಟ ಕಂಪನಿ ಎಂದು ಮಂಗಳವಾರ ಮರು-ದೃಢಪಡಿಸಲಾಗಿದೆ. ಇದಕ್ಕೆ ಕಾರಣ ಟೊಯೊಟಾಗೆ ಹೊರ ದೇಶಗಳಲ್ಲಿ ಬೃಹತ್ ಪ್ರಮಾಣದ ಬೇಡಿಕೆಯಿದೆ.

china-has-overtaken-japan-as-the-worlds-top-auto-exporter

ಹೊರ ದೇಶಗಳಲ್ಲಿ ಜಪಾನ್ ಮೂಲದ ಟೊಯೊಟಾನಂತಹ ಬ್ರಾಂಡ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಸಂಬಂಧಿತ ದೇಶಗಳಲ್ಲಿ ಮಾರಾಟ ಕೂಡ ಹೆಚ್ಚಾಗಿರುತ್ತದೆ. ಆದರೆ ಇದು ತನ್ನ ದೇಶದ ಮೂಲಕ ರಫ್ತು ಮಾಡಿಲ್ಲವಾದ್ದರಿಂದ ಜಪಾನ್ ರಫ್ತಿಗೆ ಒಳಗೊಂಡಿರುವುದಿಲ್ಲ. ಒಟ್ಟಾರೆ ಟೊಯೊಟಾ ವಿಶ್ವದ ಅತಿ ಹೆಚ್ಚು ವಾಹನ ಮಾರಾಟ ಮಾಡಿದ ಬ್ರಾಂಡ್ ಆಗಿ ಈ ಬಾರಿ ಹೊರಹೊಮ್ಮಿದೆ.

ಚೀನಾದ ಮೂಲದ BYD ಈ ತಿಂಗಳು ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಮಾರಾಟವನ್ನು ದಾಖಲಿಸುವ ಮೂಲಕ ಅಮೆರಿಕಾ ಮೂಲದ ಟೆಸ್ಲಾವನ್ನು ಹಿಂದಿಕ್ಕಿದೆ. ಈ ಬೆಳೆಯುತ್ತಿರುವ ಇವಿ ವಲಯಕ್ಕೆ ಬೀಜಿಂಗ್‌ನ ಬಲವಾದ ಸರ್ಕಾರದ ಬೆಂಬಲವನ್ನು ಬಂಡವಾಳ ಮಾಡಿಕೊಂಡಿದೆ. ಇದೀಗ ವಿಶ್ವದ ಪ್ರಮುಖ ದೇಶಗಳಲ್ಲಿ ಬಿವೈಡಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದೆ.

china-has-overtaken-japan-as-the-worlds-top-auto-exporter

BYD 1995 ರಲ್ಲಿ ಬ್ಯಾಟರಿ ತಯಾರಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ, ಇದೀಗ ಪ್ಲಗ್ - ಇನ್ ಹೈಬ್ರಿಡ್ ಮತ್ತು ಆಲ್ -ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವತ್ತ ತನ್ನ ಗಮನವನ್ನು ಹರಿಸಿದೆ. ಶೆನ್ಜೆನ್-ಆಧಾರಿತ ಕಂಪನಿಯು ಟೆಸ್ಲಾ ವಿರುದ್ಧ ಚೀನಾದ ಒಳಗೆ ಮತ್ತು ಯುರೋಪ್‌ನಲ್ಲಿ ಟೆಸ್ಲಾಗೆ ಭರ್ಜರಿ ಪೈಪೋಟಿ ನೀಡುತ್ತಾ ಮುನ್ನುಗ್ಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, February 1, 2024, 13:05 [IST]
English summary
China has overtaken japan as the worlds top auto exporter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+