Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಅನಾವರಣ... ಬಿಡುಗಡೆಗೆ ಸಜ್ಜು!

ಸಿಟ್ರನ್ ಕಂಪನಿಯು ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕೂಪೆ ಪರಿಕಲ್ಪನೆಯಾದ 'ಸಿಟ್ರನ್ ಬಸಾಲ್ಟ್ ವಿಷನ್'‌ನ ಮೊದಲ ಚಿತ್ರಗಳನ್ನು ಅನಾವರಣಗೊಳಿಸಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕೂಪೆ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯೋಣ.

ಈ ಪವರ್‌ಫುಲ್ ಮತ್ತು ಸ್ಟೈಲಿಶ್ ಮಾದರಿಯು ಗ್ರಾಹಕರಿಗೆ ಕೂಪೆಯ ಅನುಭವ, ಎಲಿವೇಟೆಡ್ ಎಸ್‌ಯುವಿಯ ಅನುಕೂಲಗಳು, ದೃಢತೆ ಮತ್ತು 5-ಡೋರ್ ವಿನ್ಯಾಸದಲ್ಲಿ ಸಿಗಲಿದೆ. ಬಸಾಲ್ಟ್ ವಿಷನ್ ಪ್ರಮುಖ ಮಾರುಕಟ್ಟೆಗಳಲ್ಲಿ ಸಿಟ್ರನ್ ಸಿ-3 ಮತ್ತು ಸಿ-3 ಏರ್ ಕ್ರಾಸ್ ಜೊತೆಗೆ ಅಂತರರಾಷ್ಟ್ರೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಹೊಸ ಕಾರು ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಸೃಷ್ಟಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

citroen-basalt-vision-suv-coupe-unveiled-design-features-details

ಸಿಟ್ರನ್ ಸಿಇಒ ಥಿಯೆರ್ರಿ ಕೊಸ್ಕಾಸ್ ಮಾತನಾಡಿ, "ಸಿಟ್ರನ್‌ನ ಅಂತರರಾಷ್ಟ್ರೀಯ ಬೆಳವಣಿಗೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಮೂರನೇ ಆವೃತ್ತಿಯನ್ನು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ದಿಟ್ಟ ವಿನ್ಯಾಸ, ಸಾಕಷ್ಟು ಇಂಟೀರಿಯರ್ ಸ್ಥಳ ಮತ್ತು ಆರಾಮದಾಯಕ ಪ್ರಯಾಣಕ್ಕೆ ಈ ಎಸ್‌ಯುವಿಯನ್ನು ಉತ್ತಮ ಕೊಡುಗೆಯಾಗಿ ಮುಂಬರುವ ತಿಂಗಳುಗಳಲ್ಲಿ ತಲುಪಿಸಲು ನಮ್ಮ ತಂಡಗಳು ಬದ್ಧವಾಗಿವೆ ಎಂದರು.

ಸಿಟ್ರನ್ ಬಸಾಲ್ಟ್ ವಿಷನ್ ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿ ಉತ್ಪಾದಿಸಲಾಗಿದೆ. ಇದರ ಸಾಮರ್ಥ್ಯವನ್ನು ನೋಡಿದ ಕೂಡಲೇ ಪ್ರಮುಖ ಮಾರುಕಟ್ಟೆಗಳಲ್ಲಿ ನಮ್ಮ ಸ್ಥಾನವನ್ನು ಬಲಪಡಿಸಿ, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ವಿಶ್ವಾಸ ನಮಗೆ ತಂದುಕೊಟ್ಟಿದೆ. ವರ್ಷದ ಮಧ್ಯದಲ್ಲಿ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಉತ್ಸುಕರಾಗಿದ್ದೇವೆ ಎಂದರು.

citroen-basalt-vision-suv-coupe-unveiled-design-features-details

ಆಟೋ ಉದ್ಯಮದಲ್ಲಿ ಸಿಟ್ರನ್ ಬಸಾಲ್ಟ್ ವಿಷನ್ ಕಾಂಪ್ಯಾಕ್ಟ್ ಎಸ್‌ಯುವಿ ಪಾತ್ರವು ಮಹತ್ವಾಕಾಂಕ್ಷೆಯದ್ದಾಗಿದೆ. ಏಕೆಂದರೆ ಪವರ್‌ಫುಲ್ ಮತ್ತು ಮಸ್ಕುಲರ್ ಲುಕ್‌ನೊಂದಿಗೆ ರಸ್ತೆಯಲ್ಲಿ ದೃಢವಾದ ನಿಲುವನ್ನು ಹೊಂದಲಿದೆ. ಅದರ ಎತ್ತರ, ಗ್ರೌಂಡ್ ಕ್ಲಿಯರೆನ್ಸ್, ಎತ್ತರದ ಬಾನೆಟ್, ನೇರವಾದ ಮುಂಭಾಗದ ತುದಿ ಮತ್ತು ವಿಶಿಷ್ಟ ಆಕಾರಗಳೊಂದಿಗೆ ಸಂರಕ್ಷಿತ ವೀಲ್ ಅರ್ಚ್‌ಗಳು ಎಸ್‌ಯುವಿಯ ಲುಕ್‌ ಅನ್ನು ಹೆಚ್ಚಿಸಿವೆ.

ಸಿಟ್ರನ್ ಶ್ರೇಣಿಗೆ ಹೊಸ ಸೇರ್ಪಡೆಯಾಗಿ ಸಿ-3 ಮತ್ತು ಸಿ-3 ಏರ್ ಕ್ರಾಸ್ ಕಾರುಗಳನ್ನು ಅನುಸರಿಸುವ ಮೂಲಕ, ಸಿಟ್ರನ್ ಬಸಾಲ್ಟ್ ವಿಷನ್ ಭಾರತ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟವಾಗಿ ನಿಯೋಜಿಸಲಾದ ಸಿ-ಕ್ಯೂಬ್ಡ್ ಕಾರ್ಯಕ್ರಮದ 3 ನೇ ಮಾದರಿಯಾಗಿದೆ ಎಂದು ಸಿಟ್ರನ್ ತಿಳಿಸಿದೆ.

citroen-basalt-vision-suv-coupe-unveiled-design-features-details

ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯವನ್ನು ಸೃಷ್ಟಿಸುವ ವಿಶಿಷ್ಟ ವಿನ್ಯಾಸ ಮತ್ತು ಬಳಕೆಯ ಸುಲಭತೆಯೊಂದಿಗೆ ಬಲವಾದ ಮತ್ತು ವಿಶಿಷ್ಟವಾದ ಉತ್ಪನ್ನ ಕೊಡುಗೆಯಾಗಲಿದೆ. ಎಲ್ಲಾ ಮೂರು ಮಾದರಿಗಳು ಒಂದೇ ಸ್ಮಾರ್ಟ್ ಕಾರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿವೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಿರ್ದಿಷ್ಟವಾಗಿ ಕಾನ್ಫಿಗರ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಮೊದಲೇ ಹೇಳಿದಂತೆ ಸಿಟ್ರನ್ ಬಸಾಲ್ಟ್ ವಿಷನ್ ಎಸ್‌ಯುವಿ ಕೂಪೆಯಾಗಿದ್ದು, 5-ಡೋರ್ ಆಯ್ಕೆಯಲ್ಲಿ ಎಲ್ಲಾ ಅನುಕೂಲಗಳನ್ನು ನೀಡಲಿದೆ. ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಸಾಕಷ್ಟು ಸ್ಥಳಾವಕಾಶದೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ರಕ್ಷಣಾತ್ಮಕ ಕವಚಗಳು ಮತ್ತು ಸೈಡ್ ಗಾರ್ಡ್ ಗಳೊಂದಿಗೆ ಸಂಯೋಜಿಸಲ್ಪಟ್ಟ ಬಸಾಲ್ಟ್ ಸುರಕ್ಷತೆ ಮತ್ತು ಭದ್ರತೆಯ ಭಾವನೆಯನ್ನು ಒದಗಿಸುತ್ತದೆ. ಇದು ಕಷ್ಟಕರವಾದ ಚಾಲನಾ ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಎಂದು ಕಂಪನಿ ತಿಳಿಸಿದೆ.

citroen-basalt-vision-suv-coupe-unveiled-design-features-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, March 27, 2024, 17:41 [IST]
English summary
Citroen basalt vision suv coupe unveiled design features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+